ಕೆಮ್ರಾಲ್: ಪಾದಚಾರಿಗಳು ನಡೆಯಲೂ ಅಯೋಗ
Team Udayavani, Jun 20, 2018, 11:07 AM IST
ಕೆಮ್ರಾಲ್ : ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕಾಡು ಭೋಜರಾವ್ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ಮಾತ್ರವಲ್ಲ ಪಾದಚಾರಿಗಳು ನಡೆಯಲು ಅಯೋಗ್ಯವಾಗಿದೆ. ತೀರ ಮಣ್ಣಿನ ರಸ್ತೆಯಾಗಿದ್ದು, ರಸ್ತೆಯ ಇಕ್ಕೆಲೆಗಳಲ್ಲಿ ಚರಂಡಿಗಳೇ ಇಲ್ಲವಾಗಿದ್ದು, ಮಳೆಗಾಲದಲ್ಲಿ ನೀರು ರಸ್ತೆಯಲ್ಲಿ ಹರಿದು ಹೋಗುವುದರಿಂದ ವಾಹನ ಹಾಗೂ ಜನರು ನಡೆದಾಡಲು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಸರಕು ಸಾಗಾಟಕ್ಕೆ ತೊಂದರೆ
ಸುಮಾರು 500 ಮೀಟರ್ ರಸ್ತೆ ತೀರ ಹದಗೆಟ್ಟಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ದನದ ಫಾರ್ಮ್ ಹಾಲು, ಹಿಂಡಿ, ಗೊಬ್ಬರ ಸಾಗಾಟ ಮಾಡಲು ಸಮಸ್ಯೆ ಉಂಟಾಗಿದೆ. ದನದ ಸೆಗಣಿ ಶೇಖರಣೆಯಾಗಿರುವುರಿಂದ ಅದು ಮಳೆ ನೀರಿಗೆ ಕೊಳೆತು ನೋಣ ಹಾಗೂ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗವು ಹರಡುವ ಭೀತಿ ಇದೆ. ದನ ಕಳ್ಳರ ಹಾವಳಿ ಇರುವುದರಿಂದ ರಸ್ತೆಗೆ ದಾರಿ ದೀಪದ ವ್ಯವಸ್ಥೆಯ ಆಗಬೇಕಾಗಿದೆ.
ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಸ್ಥಳೀಯಾಡಳಿತಕ್ಕೆ ಮನವಿ ನೀಡಲಾಗಿದೆ ಅದಕ್ಕೆ ಯಾವ ಸ್ಪಂದನೆ ಸಿಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ಫಾರ್ಮ್ ನಿರ್ವಹಕರು ಸೌಮ್ಯಾ.
ಅಭಿವೃದ್ಧಿಗಾಗಿ ಕಾಯುತ್ತಿದೆ
ಗ್ರಾಮ ಪಂಚಾಯತ್‌ನಲ್ಲಿ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಪಂಚಾಯತ್‌ನಿಂದ ಅಷ್ಟು ಹಣ ಒದಗಿಸಲು ಸಾಧ್ಯವಿಲ್ಲ, ಜಿಲ್ಲಾ ಪಂಚಾಯತ್ ಹಾಗೂ ಶಾಸಕರ ಅನುದಾನ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಸಹಕಾರದ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿರುವ ಕಸ್ತೂರಿ ಪಂಜ ತಿಳಿಸಿದ್ದಾರೆ.
ಚರಂಡಿ ಇಲ್ಲದೆ ಸಮಸ್ಯೆ
ಇಲ್ಲಿನ ಪ್ರದೇಶದಲ್ಲಿ ರಸ್ತೆ ಹದಗೆಟ್ಟು ಹೋದ ಬಗ್ಗೆ ಮನವಿಗೆ ಸ್ಪಂದಿಸಿ ಪ್ರದೇಶಕ್ಕೆ ಭೇಟಿ ನೀಡಿ ಈ ಹಿಂದೆ ಜಲ್ಲಿ ಹುಡಿ ಹಾಕಿ ಸ್ವಲ್ಪ ಮಟ್ಟಿಗೆ ಸರಿಪಡಿಸಲಾಗಿದೆ. ಮಳೆಗಾಲದಲ್ಲಿ ಇಲ್ಲಿನ ರಸ್ತೆಗೆ ಸರಿಯಾದ ಚರಂಡಿ ಇಲ್ಲದೆ ಸಮಸ್ಯೆಯಾಗಿದೆ. ಜಿಲ್ಲಾ ಪಂಚಾಯತ್ ಹಾಗೂ ಶಾಸಕರ ಅನುದಾನದಿಂದ ಚರಂಡಿ ನಿರ್ಮಾಣ ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡುವ ಯೋಜನೆ ಮಾಡಲಾಗುವುದು.
– ನಾಗೇಶ್ ಬೊಳ್ಳೂರು
ಕೆಮ್ರಾಲ್ ಗ್ರಾಮ ಪಂಚಾಯತ್‌ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.