ವಿರಾಸತ್‌ಗೆ ಬಣ್ಣ ತುಂಬಿದ ವರ್ಣ ವಿರಾಸತ್
Team Udayavani, Jan 4, 2019, 5:36 AM IST
ಮೂಡುಬಿದಿರೆ : ರಜತ ಸಂಭ್ರಮದಲ್ಲಿರುವ ‘ಆಳ್ವಾಸ್ ವಿರಾಸತ್’ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ರಾಷ್ಟ್ರಮಟ್ಟದ ಶಿಲ್ಪ ಕಲಾವಿದರ ಶಿಬಿರ ಆಳ್ವಾಸ್ ಶಿಲ್ಪ ವಿರಾಸತ್ ಮತ್ತು ಚಿತ್ರಕಲಾವಿದರ ಶಿಬಿರ ‘ಆಳ್ವಾಸ್ ವರ್ಣ ವಿರಾಸತ್’ ಸಾಥ್ ನೀಡಿವೆ.
ಜ. 4ರಿಂದ 6ರ ವರೆಗೆ ಮೂಡುಬಿದಿರೆ ವಿದ್ಯಾಗಿರಿಯ ಸರಹದ್ದಿನಲ್ಲಿರುವ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ಸಂಪನ್ನಗೊಳ್ಳಲಿದೆ. ಪೂರ್ವಭಾವಿಯಾಗಿ ಡಿ. 22ರಿಂದ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಶಿಲ್ಪ ವಿರಾಸತ್ ಮತ್ತು ಜ.1ರಿಂದ ಆಳ್ವಾಸ್ ಪ.ಪೂ. ಕಾಲೇಜಿನ ಬಳಿ ನುಡಿಸಿರಿ ವೇದಿಕೆಯ ಆವರಣದಲ್ಲಿ ವರ್ಣ ವಿರಾಸತ್ ಶಿಬಿರಗಳು ನಡೆಯುತ್ತಿವೆ.
ಮರದಲ್ಲಿ ಸಾಂಪ್ರದಾಯಿಕ ಮತ್ತು ಜಾನಪದೀಯ, ಲೋಹದಲ್ಲಿ ಜಾನಪದೀಯ, ಕಂಚಿನಲ್ಲಿ ಜಾನಪದೀಯ, ಶಿಲೆಯಲ್ಲಿ ಸಾಂಪ್ರದಾಯಿಕ, ಟೆರ್ರಾ ಕೋಟದಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ಹೀಗೆ ವಿವಿಧ ಮಾಧ್ಯಮಗಳಲ್ಲಿ 31 ಮಂದಿ ಶಿಲ್ಪಿಗಳು ತಮ್ಮ ಕೌಶಲ ಮೆರೆದಿದ್ದಾರೆ.ಟೆರ್ರಾಕೋಟ ಶಿಲ್ಪಕಾರ್ಯ ಅಂತಿಮ ಹಂತದಲ್ಲಿದೆ. ಶಿಲ್ಪಗಳು ತಯಾರಾಗಿ ‘ಸುಟ್ಟುಕೊಂಡು ಹೊಸ ಜನ್ಮ’ ಪಡೆಯಲು ಸಿದ್ಧವಾಗಿವೆ.
ಛತ್ತೀಸ್‌ಗಢದ ಬೈಕನ್ ರಾಣಾ, ಸುದ್ರಾನ್, ಆನಂದ ಬಾಬ್, ಸಮಕಾಲೀನ ಶಿಲ್ಪದಲ್ಲಿ ತೊಡಗಿರುವ ಬೆಂಗಳೂರಿನ ಉಲ್ಲಾಸ್ ಕರ್ಡೆ ಮೊದಲಾದವರಿದ್ದಾರೆ. ಆಳ್ವಾಸ್ ವರ್ಣ ವಿರಾಸತ್ ಶಿಬಿರದಲ್ಲಿ ಮಧ್ಯಪ್ರದೇಶದ ಸಂಜು ಜೈನ್, ತೆಲಂಗಾಣದ ಕಾಂಡಿ ನರಸಿಂಹುಲು, ಕೃಷ್ಣ ಅಶೋಕ್, ಮಹಾರಾಷ್ಟ್ರದ ಪ್ರಮೋದ್ ಆಪೆಟ್, ಸಚಿನ್ ಅಕ್ಲೇಕರ್, ಸತ್ಯಜಿತ್ ಅರ್ಜುನ್ ರಾವ್, ಮಮತಾ ಸಿದ್ಧಾರ್ಥ್, ಕರ್ನಾಟಕದ ಸೈಯದ್ ಆಸಿಫ್ ಆಲಿ, ಲಕ್ಷ್ಮೀಮೈಸೂರು , ಕೇರಳದ ಪ್ರೀತಾ ಕೆ. ನಂಬಿಯಾರ್ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.