ನಾಮಪತ್ರ ಹಿಂಪಡೆಯಲು ಹಣ ಪಡೆದಿಲ್ಲ
ಸ್ಪಷ್ಟನೆಗಾಗಿ ಧರ್ಮಸ್ಥಳ ಭೇಟಿ: ಮುದ್ದಹನುಮೇಗೌಡ
Team Udayavani, May 3, 2019, 9:37 AM IST
ಬೆಳ್ತಂಗಡಿ: ತುಮಕೂರು ಕ್ಷೇತ್ರದಲ್ಲಿ ನಾಮಪತ್ರ ಹಿಂಪಡೆಯಲು ಯಾರಿಂದಲೂ ಬಿಡಿ ಗಾಸು ಪಡೆದಿಲ್ಲ. ನನ್ನ ಮೇಲೆ ಭರವಸೆ ಇಟ್ಟಿರುವ ಜನತೆಗೆ ಇದನ್ನು ಸ್ಪಷ್ಟಪಡಿಸಲು ಅನಿವಾರ್ಯವಾಗಿ ಧರ್ಮಸ್ಥಳಕ್ಕೆ ಬರಬೇಕಾಯಿತು ಎಂದು ತುಮ ಕೂರಿನ ಸಂಸದ ಎಸ್. ಪಿ. ಮುದ್ದಹನುಮೇಗೌಡ ಹೇಳಿದ್ದಾರೆ.
ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮುದ್ದ ಹನುಮೇಗೌಡ ಬಳಿಕ ನಾಮಪತ್ರ ಹಿಂಪಡೆದಿದ್ದರು. ಇದಕ್ಕಾಗಿ ಅವರಿಗೆ 3.5 ಕೋ.ರೂ. ಹಣ ಸಂದಾಯವಾಗಿದೆ ಎಂಬ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಅವರ ಭೇಟಿ ತೀವ್ರ ಕುತೂಹಲ ಸೃಷ್ಟಿಸಿತ್ತು.
ಗುರುವಾರ ಧರ್ಮಸ್ಥಳಕ್ಕೆ ಸ್ನೇಹಿತರ ಜತೆ ಆಗಮಿಸಿದ ಮುದ್ದಹನುಮೇಗೌಡ ದೇವರ ದರ್ಶನ ಪಡೆದರು. ಬಳಿಕ ಕ್ಷೇತ್ರದ ಮುಂಭಾಗದಲ್ಲೇ ಪತ್ರಕರ್ತರ ಜತೆ ಮಾತನಾಡಿದರು.
ನಾಮಪತ್ರ ಹಿಂಪಡೆಯಲು ನಾನು ಕೋಟ್ಯಂತರ ಹಣ ಪಡೆದಿದ್ದೇನೆ ಎಂದು ಆಡಿಯೋ ವೈರಲ್ ಆಗಿದೆ. ಇದರಿಂದ ನನ್ನ ಬಗ್ಗೆ ತಪ್ಪು ಅಭಿಪ್ರಾಯ ಮೂಡು ವಂತಾಗಿದೆ. ನನ್ನ ರಾಜಕೀಯ ಬೆಳವಣಿಗೆಯನ್ನು ಸಹಿಸದವರು ಈ ರೀತಿ ಮಾಡಿರುವ ಸಾಧ್ಯತೆ ಇದೆ ಎಂದ ವರು ಹೇಳಿದರು.
ನಾನು 10 ವರ್ಷಗಳ ಕಾಲ ಕುಣಿಗಲ್ ಶಾಸಕನಾಗಿ, 2019ರಿಂದ ಸಂಸದನಾಗಿ ಕೆಲಸ ಮಾಡಿದ್ದೇನೆ. ಯಾರಿಂದಲೂ ಹಣ ಪಡೆದಿಲ್ಲ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಲು ಅನಿವಾರ್ಯವಾಗಿ ಧರ್ಮಸ್ಥಳಕ್ಕೆ ಅನಿವಾರ್ಯ ವಾಗಿ ಬಂದಿದ್ದೇನೆ. ನನ್ನ ವಿರುದ್ಧ ಆರೋಪ ಹೊರಿಸಿದವರಿಗೆ ದೇವರೇ ಬುದ್ಧಿ ಕೊಡಲಿ ಎಂದು ವಿವರಿಸಿದರು.
ಮನವರಿಕೆಯಾಗಿ ಹಿಂದೆಗೆತ
ಅಸಮಾಧಾನಗೊಂಡು ನಾಮಪತ್ರ ಸಲ್ಲಿಸಿದ್ದು ನಿಜ. ಆದರೆ ಪಕ್ಷದ ಪ್ರಮುಖರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯ, ಡಾ| ಜಿ. ಪರಮೇಶ್ವರ್ ಮತ್ತು ದಿನೇಶ್ ಗುಂಡೂ ರಾವ್ ಅವರು ಮೈತ್ರಿ ಅಭ್ಯರ್ಥಿಗೆ ಸೀಟು ಬಿಟ್ಟುಕೊಡುವ ಅನಿವಾರ್ಯ ತೆಯನ್ನು ಮನವರಿಕೆ ಮಾಡಿದ ಬಳಿಕ ನಾಮಪತ್ರ ಹಿಂಪಡೆದು ಮೈತ್ರಿ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದೇನೆ.
ಪ್ರಸ್ತುತ ಈ ಆಡಿಯೋ ವೈರಲ್ ಆಗುತ್ತಿದ್ದು, ಇದಕ್ಕೆ ಸ್ಪಷ್ಟನೆ ಕೊಡ ಬೇಕಾ ದವರು ಸುಮ್ಮನಿದ್ದಾರೆ ಎಂದು ಮುದ್ದಹನುಮೇಗೌಡ ಹೇಳಿದರಾದರೂ ಯಾರು ಸ್ಪಷ್ಟನೆ ಕೊಡ ಬೇಕು ಎಂಬುದನ್ನು ತಿಳಿಸಲು ನಿರಾಕರಿಸಿದರು. ಕಾಂಗ್ರೆಸ್‌ನ ನಾಯಕರು ತನ್ನ ಪರ ನಿಂತಿದ್ದು, ಪಕ್ಷದ ವತಿಯಿಂದ ದೂರನ್ನೂ ನೀಡಲಾಗಿದೆ ಎಂದರು.
ಟಿಕೆಟ್ ತಪ್ಪಿರುವುದಕ್ಕೆ ಬೇಸರವಿದೆ
ಟಿಕೆಟ್ ತಪ್ಪಿರುವುದಕ್ಕೆ ಬೇಸರವಿದೆ. ಇಂತಹ ಕ್ಷೇತ್ರಕ್ಕೆ ಬಂದು ಬೇಸರವಿಲ್ಲ ಎಂದು ಸುಳ್ಳು ಹೇಳಲು ಸಾಧ್ಯವಿದೆಯೇ ಎಂದು ಮುದ್ದ ಹನುಮೇಗೌಡರು ಹೇಳಿದರು. ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆಯೇ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದನ್ನು ಮತದಾರರು ತೀರ್ಮಾನಿಸುತ್ತಾರೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದಷ್ಟೇ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
Sulya: ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ; ಜಖಂ
Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್ ಕೇಬಲ್ ಕಳವು
Sulya: ಆರಂತೋಡು: ಚಿಕನ್ ಸೆಂಟರ್‌ಗೆ ದಾಳಿ; ಮದ್ಯ ಅಕ್ರಮ ದಾಸ್ತಾನು ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.