Mudubidire: ಭಾರತ್‌ ಸ್ಕೌಟ್ಸ್‌-ಗೈಡ್ಸ್‌ ರಾಜ್ಯ ತಂಡಕ್ಕೆ ರಾಷ್ಟ್ರದಲ್ಲೇ ಮೊದಲ ಸ್ಥಾನ

Team Udayavani, Dec 14, 2024, 1:18 AM IST

PGR-Scindia

ಮೂಡುಬಿದಿರೆ: ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಕರ್ನಾಟಕ ಘಟಕಕ್ಕೆ ದೇಶದಲ್ಲೇ ಮೊದಲ ಸ್ಥಾನ ಲಭಿಸಿದೆ. ವಿಶೇಷವಾಗಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಮೂಲಕ ಡಾ| ಎಂ. ಮೋಹನ್‌ ಆಳ್ವ ಅವರು ಶಕ್ತಿ ತುಂಬಿದ್ದಾರೆ ಎಂದು ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ರಾಜ್ಯದ ಮುಖ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ. ಪ್ರಸ್ತುತ ಕಿತ್ತೂರಿನಲ್ಲಿ ಜಾಂಬೂರಿ ನಡೆಸಲಾಗಿದ್ದು, ಯಾದಗಿರಿ ಹಾಗೂ ಧಾರವಾಡಗಳಲ್ಲಿ ಸಾಂಸ್ಕೃತಿಕ ಜಾಂಬೂರಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಒಂದು ಲಕ್ಷ ಸದಸ್ಯರನ್ನು ಹೊಂದುವ ಗುರಿ ಹೊಂದಲಾಗಿದೆ ಎಂದರು.

ಮೂವರಿಗೆ ಮೆಸೆಂಜರ್‌ ಆಫ್‌ ಪೀಸ್‌ ಸ್ಟಾರ್‌ ಅವಾರ್ಡ್‌
2023ನೇ ವರ್ಷದಲ್ಲಿ ರಾಷ್ಟ್ರ ಮಟ್ಟದಲ್ಲಿ ಕೊಡಮಾಡುವ ಮೆಸ್ಸೆಂಜರ್‌ ಆಫ್‌ ಪೀಸ್‌ ಸ್ಟಾರ್‌ ಅವಾರ್ಡ್‌ ಪ್ರಕಟಗೊಂಡಿದ್ದು, ಕರ್ನಾಟಕದ 8 ಜನರಿಗೆ ಈ ಪ್ರಶಸ್ತಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ 3 ಅಭ್ಯರ್ಥಿಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಯಸ್ಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ನವೀನ್‌ ಚಂದ್ರ ಅಂಬೂರಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್‌ ರಾಜ್‌ ಕೆ. ಮತ್ತು ಯುವ ವಿಭಾಗದಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ರೋವರ್‌ ಸ್ಕೌಟ್ಸ್‌ ಲೀಡರ್‌ ಚಂದ್ರಾಕ್ಷ ಅವರಿಗೆ ಪ್ರಶಸ್ತಿ ಲಭಿಸಿದೆ ಎಂದರು.

ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ರಾಜ್ಯ ಸಂಘಟನ ಆಯುಕ್ತ ಎಂ. ಪ್ರಭಾಕರ್‌ ಭಟ್‌, ಶಿಬಿರದ ಮೇಲ್ವಿಚಾರಕಿ ಮಲ್ಲೇಶ್ವರಿ ಜುಜಾರೆ, ದಕ್ಷಿಣ ಕನ್ನಡ ಜಿಲ್ಲಾ ಕೋಶಾಧಿಕಾರಿ ನವೀನ್‌ಚಂದ್ರ ಉಪಸ್ಥಿತರಿದ್ದರು.

ಪಿಲಿಕುಳದಲ್ಲಿ 12 ಕೋ. ರೂ. ವೆಚ್ಚದಲ್ಲಿ ತರಬೇತಿ ಸಂಸ್ಥೆ: ಡಾ|ಆಳ್ವ
ಭಾರತ್‌ ಸ್ಕೌಟ್ಸ್‌ ಮತ್ತು ಗೆ„ಡ್ಸ್‌ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತರೂ ಆಗಿರುವ ಡಾ|ಎಂ.ಮೋಹನ ಆಳ್ವ ಮಾತನಾಡಿ, ಸ್ಕೌಟ್ಸ್‌ ಮತ್ತು ಗೆ„ಡ್ಸ್‌ ಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ತರಬೇತಿ ನೀಡಲು ಮಂಗಳೂರಿನ ಪಿಲಿಕುಳದಲ್ಲಿ ಸುಮಾರು 12 ಕೋ. ರೂ. ವೆಚ್ಚದಲ್ಲಿ ತರಬೇತಿ ಕೇಂದ್ರ ಸ್ಕೌಟ್ಸ್‌ ಗೆ„ಡ್ಸ್‌ ಭವನ ನಿರ್ಮಿಸಲಾಗಿದೆ. 10 ಕೋ.ರೂ.ನ ಕಾಮಗಾರಿ ನಡೆದಿದ್ದು ಮುಂದಿನ ಜನವರಿ ತಿಂಗಳಲ್ಲಿ ಲೋಕರ್ಪಣೆಗೊಳ್ಳಲಿದೆ ಎಂದರು.

ಟಾಪ್ ನ್ಯೂಸ್

ALVAS-1

Alvas: ವಿರಾಸತ್‌ನಲ್ಲಿ ನೀಲಾದ್ರಿ ಕುಮಾರ್‌ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು

Navy-Udupi

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

DC-Vidya-CSR

Udupi: ಸಿಎಸ್‌ಆರ್‌ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

MH

Manipal Kasturba Hospital: ಶಿಶುವಿನ ಯಕೃತ್‌ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ

Daskath

Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ

UV-Office-Chigru

Manipal: ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡಿದ್ರೆ ಉನ್ನತ ಸ್ಥಾನ ಲಭ್ಯ: ಡಾ| ಸುಧಾಕರ ಶೆಟ್ಟಿ

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ

Udupi: ಗೀತಾರ್ಥ ಚಿಂತನೆ-123: ಸರಣಿಯಂತೆ ಹುಟ್ಟು ಸಾವು, ಸುಖದುಃಖ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ALVAS-1

Alvas: ವಿರಾಸತ್‌ನಲ್ಲಿ ನೀಲಾದ್ರಿ ಕುಮಾರ್‌ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು

Daskath

Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ

Court-Symbol

Mangaluru: ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒಗೆ 3 ವರ್ಷಗಳ ಸಜೆ

Karvali-utsava

Mangaluru: ಈ ಬಾರಿ ಜನಾಕರ್ಷಣೆಯ ಕರಾವಳಿ ಉತ್ಸವಕ್ಕೆ ಒತ್ತು ನೀಡಿ: ಸಚಿವ ದಿನೇಶ್, ಖಾದರ್‌

Mangaluru: ಸಿಸಿಬಿ ಪೊಲೀಸರಿಂದ 6.7ಕೆಜಿ ಗಾಂಜಾ ಸಹಿತ ಆರೋಪಿ ಬಂಧನ 

Mangaluru: ಸಿಸಿಬಿ ಪೊಲೀಸರಿಂದ 6.7ಕೆಜಿ ಗಾಂಜಾ ಸಹಿತ ಆರೋಪಿ ಬಂಧನ 

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

ALVAS-1

Alvas: ವಿರಾಸತ್‌ನಲ್ಲಿ ನೀಲಾದ್ರಿ ಕುಮಾರ್‌ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು

Navy-Udupi

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

DC-Vidya-CSR

Udupi: ಸಿಎಸ್‌ಆರ್‌ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

MH

Manipal Kasturba Hospital: ಶಿಶುವಿನ ಯಕೃತ್‌ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ

Daskath

Mangaluru: ಗ್ರಾಮೀಣ ಭಾಗದ ದಬ್ಬಾಳಿಕೆ ಕಥೆ ಹೇಳುವ ಸಿನೆಮಾಕ್ಕೆ ಉತ್ತಮ ಸ್ಪಂದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.