ಮೂಲರಪಟ್ಣ -ಬಿ.ಸಿ. ರೋಡ್ ಸರಕಾರಿ ಬಸ್ ಸೇವೆ ಆರಂಭ
Team Udayavani, Jul 2, 2018, 11:23 AM IST
ಬಂಟ್ವಾಳ : ಮೂಲರಪಟ್ಣ ಸೇತುವೆ ಕುಸಿತದ ಬಳಿಕ ಇದೇ ಮೊದಲಾಗಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಆಗುವಂತೆ ಕೆಎಸ್ಆರ್ ಟಿಸಿ ಆರಂಭಿಸಿದ ಮೂಲರಪಟ್ಣ – ಮಂಗಳೂರು ಸಂಪರ್ಕದ ಬಸ್ ಸೇವೆಗೆ ಜು. 1ರಂದು ಬೆಳಗ್ಗೆ ಅರಳ ಗ್ರಾ.ಪಂ. ಉಪಾಧ್ಯಕ್ಷ ಜಗದೀಶ ಆಳ್ವ ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.
ಸೇತುವೆ ಕುಸಿದ ಬಳಿಕ ಈ ಭಾಗದ ಜನರು ಸಾರ್ವಜನಿಕ ಬಸ್ ಸೌಕರ್ಯದಿಂದ ವಂಚಿತರಾಗಿದ್ದರು. ಈ ಭಾಗದ ಜನರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಜಿಲ್ಲಾಧಿಕಾರಿಗಳು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಸೂಚನೆಯಂತೆ ಬಸ್ ಸೌಕರ್ಯ ಆರಂಭಿಸಲಾಗಿತ್ತು. ಮೂಲರಪಟ್ಣದಿಂದ ಬಿ.ಸಿ. ರೋಡ್ಗೆ ಒಟ್ಟು ಎರಡು ಬಸ್ಗಳು ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕ ಅನುಕೂಲ ಸಮಯ ನೋಡಿಕೊಂಡು ಸಂಚರಿಸಲಿದೆ.
ಬಸ್ಗೆ ಚಾಲನೆ ನೀಡಿದ ಸಂದರ್ಭ ಮುಲಾರಪಟ್ಣ ಕೇಂದ್ರ ಜುಮಾ ಮಸೀದಿ ಧರ್ಮಗುರು ಅಲ್ಹಾಜ್ ಅಬ್ದುಲ್ ಖಾದರ್ ಮದನಿ, ಗ್ರಾ.ಪಂ. ಸದಸ್ಯ ಎಂ.ಬಿ. ಅಶ್ರಫ್ ಅರಳ, ಹಾಜಬ್ಬ ಬಡಗಬೆಳ್ಳೂರು, ಗುತ್ತಿಗೆದಾರ ಎಂ.ಬಿ. ಶಾಪಿ, ಪ್ರಮುಖರಾದ ಎಂ.ಎಸ್. ಶಾಲಿ, ಸಜೀವುದೀನ್ ಎಂ.ಎಸ್., ವಿ. ಪುತ್ತುಮೋನು ಎಂ.ಪಿ., ನಾಸೀರ್, ಗಣೇಶ್ ಭಟ್ ಎರ್ಮಾಳ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.