Mulki: ಮಾದಕ ಸೊತ್ತುಗಳ ನಾಶ
Team Udayavani, Feb 10, 2024, 12:59 AM IST
ಮೂಲ್ಕಿ: ಪೊಲೀಸರು ಶುಕ್ರವಾರ ಗಾಂಜಾ ಸಹಿತ ಇತರ ಮಾದಕ ವಸ್ತುಗಳನ್ನು ನಾಶಪಡಿಸುವ ಕಾರ್ಯವನ್ನು ಮೂಲ್ಕಿ ಕಾರ್ನಾಡು ಕೈಗಾರಿಕ ಪ್ರದೇಶದಲ್ಲಿರುವ ರಾಮ್ಕೀ ಎನರ್ಜಿ ಆ್ಯಂಡ್ ಎನ್ವಿ ರೋನ್ ಮೆಂಟ್ ಕಂಪೆನಿಯ ಇನ್ಸುಲೇಟರ್ನಲ್ಲಿ ದ.ಕ. ಜಿಲ್ಲಾ ಪೊಲೀಸ್ ಮತ್ತು ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡಿರುವ ಗಾಂಜಾ ಮತ್ತು ಇತರ ಮಾದಕ ವಸ್ತುಗಳನ್ನು ನಾಶಪಡಿಸುವ ಕಾರ್ಯಕ್ರಮ ನಡೆಸಲಾಯಿತು.
ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 34 ಪ್ರಕರಣಗಳಲ್ಲಿ ವಶಪಡಿಸಿ ಕೊಂಡಿರುವ 221 ಕಿಲೋ 825 ಗ್ರಾಂ ಗಾಂಜಾ ಹಾಗೂ 193 ಗ್ರಾಂ ಹಾಗೂ 151 ಮಿಲಿ ಗ್ರಾಂ ಎಂಡಿಎಂಎ ಮತ್ತು 30 ಗ್ರಾಂ ಮೆಥಾಪೆಂಟಮೈನ್ ಹೀಗೆ ಒಟ್ಟು 65 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಅವರ ಉಪಸ್ಥಿತಿಯಲ್ಲಿ ಹಾಗೂ ದ.ಕ. ಜಿಲ್ಲೆಯ ಇತರ ಠಾಣೆಗಳಲ್ಲಿ ವಶಪಡಿಸಿಕೊಂಡಿರುವ 11 ಕಿಲೋ 365 ಗ್ರಾಂ 42.57 ಗಾಂಜಾ ಹಾಗು 43 ಗ್ರಾಂ ಎಂ.ಡಿ.ಎಂ.ಎ. ಮುಂತಾದ ಮಾದಕ ವಸ್ತುಗಳನ್ನು ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷ್ಯಂತ್ ಕುಮಾರ್ ಅವರ ಸಮ್ಮುಖದಲ್ಲಿ ನಾಶಪಡಿಸಲಾಯಿತು.
ದಾಖಲೆಯಂತೆ ಪ್ರತೀ ಸ್ಯಾಚೆಟ್ಗಳನ್ನು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ತೂಕ ಮಾಡಿ ಪರಿಶೀಲಿಸಿ ಕ್ರಮಬದ್ಧವಾಗಿ ದಾಖಲೆ ಮಾಡಿ ಇನ್ಸುಲೇಟರ್ನಲ್ಲಿ ಸುಡಲಾಯಿತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.