ಮೂಲ್ಕಿ ಹೋಬಳಿ: ಸಿಪಿಎಂಎಫ್ ಯೋಧರ ಮೊಕ್ಕಾಂ
ಹಳೆಯಂಗಡಿ ಲಿಂಗಪ್ಪಯ್ಯಕಾಡಿನ ಅತೀಸೂಕ್ಷ್ಮಮತಗಟ್ಟೆ
Team Udayavani, Apr 18, 2019, 6:15 AM IST
ಹಳೆಯಂಗಡಿ: ಇಂದು ನಡೆಯಲಿರುವ ಮತದಾನ ಪ್ರಕ್ರಿಯೆಯು ನಿರ್ಭಿತಿಯಿಂದ ಯಾವುದೇ ಅಡೆ ತಡೆಯಿಲ್ಲದೇ ನಡೆಸಲು ಮೂಲ್ಕಿ ಹೋಬಳಿಯಲ್ಲಿನ ಹಳೆಯಂಗಡಿ ಹಾಗೂ ಲಿಂಗಪ್ಪಯ್ಯಕಾಡಿನ ಅತಿ ಸೂಕ್ಷ್ಮ ಪ್ರದೇಶದ ಮತಗಟ್ಟೆಯಲ್ಲಿ ರಕ್ಷಣೆ ನೀಡಲು ಸಿಪಿಎಂಎಫ್ ಯೋಧರು ಮೂಲ್ಕಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.
ಮೂಲ್ಕಿಯಲ್ಲಿ ಒಟ್ಟು 63 ಮತ ಕೇಂದ್ರಗಳನ್ನು ಸುರತ್ಕಲ್ ಮತ್ತು ಬಜಪೆ ಠಾಣೆಯ 16 ಕೇಂದ್ರಗಳನ್ನು ಸೇರಿಸಿ ಕೊಂಡು ನಾಲ್ಕು ಸೆಕ್ಟರ್ ಆಗಿ ಮತ ಕೇಂದ್ರ ಗಳ ರಕ್ಷಣೆಯನ್ನು ವಿಂಗಡಿಸಿದ್ದು, ಅತಿ ಸೂಕ್ಷ್ಮ ಮತಗಟ್ಟೆಗಳಾದ ಲಿಂಗಪ್ಪಯ್ಯ ಕಾಡು ಹಾಗೂ ಹಳೆಯಂಗಡಿ ಪ್ರದೇಶದ ಇಂದಿರಾ ನಗರದಲ್ಲಿ ನ ತಲಾ ಒಂದು ಮತ ಗಟ್ಟೆಗೆ ಈ ಪಡೆಯ ಸಿಪಿಎಂಎಫ್‌ನ ನಾಲ್ವರು ಯೋಧರು ಒಬ್ಬರು ಪೊಲೀಸ್ ಸಿಬಂದಿ ಗಳು ನಿಯೋಜಿಸಲಾಗಿದೆ. ಇಲ್ಲಿನ ಮತದಾನದ ಚಟುವಟಿಕೆಯ ಸಂಪೂರ್ಣ ವೀಡಿಯೋ ಚಿತ್ರೀಕರಣವನ್ನು ಸಹ ಮಾಡಲಾಗುತ್ತದೆ. ಅತಿಸೂಕ್ಷ್ಮ ಮತ ಗಟ್ಟೆಯ ಆಸುಪಾಸಿನ ಮತಗಟ್ಟೆಗಳಿಗೂ ಸಹ ಯೋಧರು ಪ್ರತೀ ಒಂದು ತಾಸಿಗೆ 15 ನಿಮಿಷಗಳ ಕಣ್ಗಾವಲನ್ನು ಸ್ಥಳಕ್ಕೆ (ರೌಂಡ್ಸ್) ಭೇಟಿ ನೀಡುವ ಪರಿಪಾಠ ನಡೆಸಲು ಸೂಚನೆ ನೀಡಲಾಗಿದೆ.
ಮೂಲ್ಕಿ ಠಾಣೆಯ ಇನ್ಸ್‌ಪೆಕ್ಟರ್ ಪಿ.ಎಂ. ಸಿದ್ಧರಾಜು ಅವರ ಸೂಪರ್‌ವೈಸಿಂಗ್‌ನಲ್ಲಿ ಮೂಲ್ಕಿ ಹೋಬಳಿಯ ಭದ್ರತೆಯನ್ನು ವ್ಯವಸ್ಥೆ ಮಾಡಲಾಗಿದೆ. ಠಾಣೆಯ ಎಸ್‌ಐಗಳಾದ ಶೀತಲ್ ಅಲಗೂರು ಹಾಗೂ ಕಮಲಾ, ಎಎಸ್‌ಐಗಳಾದ ಬಾಲಕೃಷ್ಣ ರೈ, ಚಂದ್ರಶೇಖರ್, ಕೇಶವ್, ಕುಮರೇಶನ್ ಅವರು ವಿವಿಧ ರೀತಿಯಲ್ಲಿ ನಿರ್ವಹಿಸಲಿದ್ದಾರೆ ಎಂದು ಮೂಲ್ಕಿ ಪೊಲೀಸ್ ಠಾಣೆಯಿಂದ ಪತ್ರಿಕೆಗೆ ಮಾಹಿತಿ ನೀಡಲಾಗಿದೆ.
ರೂಟ್‌ಮಾರ್ಚ್
ಮಂಗಳೂರು ಕಮಿಷನರೆಟ್ ವ್ಯಾಪ್ತಿಗೆ ಒಟ್ಟು 20 ಪ್ಲಾಟೂನ್‌ನ 100 ಮಂದಿ ಸಿಪಿಎಂಎಫ್ ಯೋಧರ ನಿಯೋಜ ನೆ ಗೊಂಡಿದ್ದು, ಇವರಲ್ಲಿ ಮಹಿಳಾ ಯೋಧರು ಸಹ ಸೇರಿದ್ದಾರೆ. ಇವರ ಲ್ಲಿನ ಒಂದು ಪ್ಲಟೂನ್ ಮೂಲ್ಕಿಗೆ ಆಗಮಿಸಿದೆ. ಎ. 17ರಂದು ಪೂರ್ವ ಭಾವಿಯಾಗಿ ಯೋಧರು ಹಾಗೂ ಮೂಲ್ಕಿ ಪೊಲೀಸ್ ಸಿಬಂದಿ ಹಳೆಯಂಗಡಿ ಹಾಗೂ ಲಿಂಗಪ್ಪಯ್ಯಕಾಡಿನ ಪ್ರದೇಶದಲ್ಲಿ ರೂಟ್‌ಮಾರ್ಚ್ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್ ಮಗುಚಿ ಇಬ್ಬರು ನಟಿಯರ ಸಾವು
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.