ಮೂಲ್ಕಿ ನ.ಪಂಚಾಯತ್‌ಗೆ ನಳ್ಳಿ ನೀರೇ ಆಧಾರ
Team Udayavani, Feb 15, 2019, 6:03 AM IST
ಮೂಲ್ಕಿ: ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಮೂಲ್ಕಿ ನಗರ ಪಂಚಾಯತ್, ವಿವಿಧ ಮೂಲಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿ ಪೂರೈಕೆ ಮಾಡುತ್ತಿರುವ ಸ್ಥಳೀಯಾಡಳಿತಗಳಲ್ಲಿ ಮುಂಚೂಣಿಯಲ್ಲಿದೆ. ಮೂಲ್ಕಿ ನ.ಪಂ. ವ್ಯಾಪ್ತಿಯ ಮೂರು ಸುತ್ತಲೂ ನದಿ ವ್ಯಾಪಿಸಿದ್ದರೂ ಕುಡಿಯುವ ನೀರನ್ನು ನದಿಯಿಂದ ಪಡೆಯುವುದು ಅಸಾಧ್ಯ. ಕಾರಣ ಇದೆಲ್ಲವೂ ಸಮುದ್ರವನ್ನು ಸೇರುವ ಉಪ್ಪು ನೀರಿನ ನದಿಗಳಾಗಿವೆ.
ಈ ವ್ಯಾಪ್ತಿಯ ಮಾನಂಪಾಡಿ, ಬಪ್ಪನಾಡು, ಕಾರ್ನಾಡು ಮತ್ತು ಚಿತ್ರಾಪು ಗ್ರಾಮಗಳ ಪೈಕಿ ಮಾನಂಪಾಡಿ, ಚಿತ್ರಾಪು, ಬಪ್ಪನಾಡು ಗ್ರಾಮದಲ್ಲಿ ಚಂದ್ರ ಶ್ಯಾನು ಭಾಗರ ಕುದ್ರು, ಕೊಳಚಿಕಂಬಳ, ಕಾರ್ನಾಡು ಗ್ರಾಮದ ಪಡು ಬೈಲು ಪ್ರದೇಶಗಳು ಉಪ್ಪು ನೀರಿನ ಬಾವಿಗಳಿಂದ ಕೂಡಿರುವ ಪ್ರದೇಶಗಳಾಗಿವೆ. ಹೀಗಾಗಿ ಈ ಭಾಗದ ಬಹುತೇಕ ಜನರು ಕುಡಿ ಯುವ ನೀರಿಗಾಗಿ ನಗರ ಪಂಚಾಯತ್‌ನ ನಳ್ಳಿ ನೀರನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಕೊಳಚಿ ಕಂಬಳ ಮತ್ತು ಚಂದ್ರ ಶ್ಯಾನುಭಾಗರ ಕುದ್ರು ಪ್ರದೇಶದಲ್ಲಿ ಸಂಪೂರ್ಣವಾಗಿ ನಳ್ಳಿ ನೀರನ್ನೇ ಬಳಸಬೇಕಿದೆ.
ನಗರ ಪಂಚಾಯತ್‌ನ ಮೂಲ್ಕಿ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ 17 ವಾರ್ಡ್‌ಗಳಿದ್ದು, ಇಲ್ಲಿಗೆ ದಿನಂಪ್ರತಿ 2.33 ಎಂಎಲ್‌ಡಿ ನೀರಿನ ಆವಶ್ಯಕತೆ ಇದೆ. ಮನೆ ಮತ್ತು ವಾಣಿಜ್ಯ ಕೇಂದ್ರಗಳನ್ನು ಸೇರಿ ಒಟ್ಟು 2,930 ನಳ್ಳಿ ನೀರಿನ ಸಂಪರ್ಕ ನೀಡಲಾಗಿದೆ.
ಇದರಲ್ಲಿ 10 ವಾರ್ಡ್‌ಗಳಿಗೆ ನಗರ ಪಂಚಾಯತ್ ಹೊಂದಿರುವ ತೆರೆದ ಬಾವಿ, ಬೋರ್‌ವೆಲ್ ಮತ್ತು ಕೊಳವೆ ಬಾವಿಗಳ ಮೂಲಕ ನೀರನ್ನು ಎರಡು ದಿನಗಳಿಗೊಮ್ಮೆ ಒಂದು ಗಂಟೆ ಸರಬರಾಜು ಮಾಡಲಾಗುತ್ತಿದೆ. ಉಳಿದ ಏಳು ವಾರ್ಡ್‌ಗಳಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆಯಲಾಗುತ್ತಿರುವ ನೀರಿನಿಂದ ಮೂರು ದಿನಗಳಿಗೊಮ್ಮೆ ಒಂದು ಗಂಟೆಗಳ ಕಾಲ ಒದಗಿಸಲಾಗುತ್ತಿದೆ. ಆದರೆ ನದಿಯಿಂದ ನೀರನ್ನು ಬಳಸಲು ಸಾಧ್ಯವಿರುವ ಮೂಲ್ಕಿ ನಗರ ಪಂಚಾಯತ್‌ನ ಜನರಿಗೆ ಪರಿಪೂರ್ಣವಾಗಿ ಕುಡಿಯುವ ಮತ್ತು ಇತರ ಬಳಕೆಗೆ ನೀರು ಒದಗಿಸಲು ನ.ಪಂ. ಕೂಡ ಕಷ್ಟು ಕಷ್ಟಪಡಬೇಕಾಗಿದೆ.
ಪ್ರತಿ ಬೇಸಗೆಯಲ್ಲಿ ನೀರಿರುವ ಹೊರಗಿನ ಪ್ರದೇಶಗಳಿಂದ ಟ್ಯಾಂಕರ್ ಮೂಲಕ ನೀರು ತಂದು ಕೆಲವೆಡೆಗಳಲ್ಲಿ ಸರಬರಾಜು ಟ್ಯಾಂಕ್‌ಗೆ ತುಂಬಿಸುವ ಕೆಲಸ ನಡೆಯುತ್ತಿದ್ದರೆ, ಇನ್ನು ಕೆಲವು ಮನೆಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. ಸರಕಾರದ ನೀರು ಸರಬರಾಜು ಮಂಡಳಿಯಿಂದ ಈ ಬಾರಿ ದಿನದ 24 ಗಂಟೆಗಳ ಕಾಲ ನೀರನ್ನು ಒದಗಿಸುವ ಯೋಜನೆಯನ್ನು 14 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುತ್ತಿದೆಯಾದರೂ ಇದಕ್ಕೆ 24 ಗಂಟೆಗಳ ಕಾಲ ನೀರು ಮಂಗಳೂರು ಮನಪಾ ಯಾವ ಮೂಲದಲ್ಲಿ ಪಡೆಯಬಹುದು ಎಂಬುದೇ ಅಧಿಕಾರಿಗಳಿಗೆ ತಲೆನೋವಿನ ಪ್ರಶ್ನೆಯಾಗಿದೆ.
ನೀರಿನ ಒರತೆ ಹೆಚ್ಚಿಸಲು ಕ್ರಮ
ನಗರ ಪಂಚಾಯತ್ ವತಿಯಿಂದ ನೀರು ಸರಬರಾಜು ವ್ಯವಸ್ಥೆಗಾಗಿ ಸುಮಾರು 28 ಕೊಳವೆ ಬಾವಿ ಮತ್ತು 20 ತೆರೆದ ಬಾವಿಗಳ ಮೂಲಕ ವ್ಯವಸ್ಥೆಗೊಳಿಸಲಾಗುತ್ತಿದ್ದರೂ, ನೀರಿನ ಒರತೆಯ ಸಮ ಸ್ಯೆಯಿಂದಾಗಿ ಫೆಬ್ರವರಿ ತಿಂಗಳಿನಿಂದ ನೀರಿನ ಸಮಸ್ಯೆ ಕಾಡುತ್ತಿದೆ. ನಗರ ಪಂಚಾಯತ್ ಕುಡಿಯುವ ನೀರಿನ ಪೂರೈಕೆಗೆ ಸಿದ್ಧವಾಗಿಯೇ ಇದೆ. ಅದಲ್ಲದೆ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲು ಮತ್ತು ನೀರಿಂಗಿಸುವ ಯೋಜನೆಗೆ ಒತ್ತು ಕೊಟ್ಟು ಒರತೆ ಪ್ರಮಾಣ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ.
– ಇಂದೂ ಎಂ.
ಮುಖ್ಯಾಧಿಕಾರಿಗಳು ನಗರ
ಪಂಚಾಯತ್, ಮೂಲ್ಕಿ
2020ರ ವೇಳೆಗೆ ನೀರು ಸಿಗುವ ಸಾಧ್ಯತೆ
ಈಗ ನಗರ ಪಾಲಿಕೆಯ ಸಹಕಾರದಿಂದ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಗೆ 0.3 ಎಂಎಲ್‌ಡಿ ಯಷ್ಟು ನೀರನ್ನು ಪಡೆಯಲಾಗುತ್ತಿದೆ. ಕುಡಿಯುವ ಉನ್ನತೀಕರಣದ ಯೋಜನೆ ಪೂರ್ಣಗೊಂಡ ಅನಂತರ ಮಹಾನಗರ ಪಾಲಿಕೆಯಿಂದ 4 ಎಂಎಲ್‌ಡಿ ನೀರು ಸರಬರಾಜು ಆದಲ್ಲಿ 2020ರ ವೇಳೆಗೆ ಪ್ರತಿ ಮನೆಗೆ ನಿರಂತರವಾಗಿ ಸಾಕಷ್ಟು ಪ್ರಮಾಣದ ನೀರು ಸಿಗುವುದು ಸಾಧ್ಯವಾಗಬಹುದು.
- ಸುನೀಲ್ ಆಳ್ವ , ಅಧ್ಯಕ್ಷರು, ನಗರ ಪಂಚಾಯತ್ ಮೂಲ್ಕಿ
ಸರ್ವೋತ್ತಮ ಅಂಚನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್.ಅಶೋಕ್
Politics Discussion: ದಿಲ್ಲಿಯಲ್ಲಿ ಜೆಡಿಎಸ್ ಶಾಸಕರು-ಡಿ.ಕೆ.ಶಿವಕುಮಾರ್ ಮುಖಾಮುಖಿ
HMP Virus: ಎಚ್‌ಎಂಪಿ ವೈರಸ್ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡಿದ್ದಲ್ಲ, ಪಕ್ಷ ಕೊಟ್ಟಿದ್ದು: ಡಿ.ಕೆ.ಸುರೇಶ್
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.