Mulki ಸೀಮೆ ಅರಸು ಕಂಬಳಕ್ಕೆ ಚಾಲನೆ; ಅರಸು ಪ್ರಶಸ್ತಿ ಪ್ರದಾನ
Team Udayavani, Dec 24, 2023, 11:50 PM IST
ಹಳೆಯಂಗಡಿ: ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಸಮಿತಿಯ ಅಧ್ಯಕ್ಷ ಕೊಲಾ°ಡುಗುತ್ತು ಕಿರಣ್‌ಕುಮಾರ್ ಶೆಟ್ಟಿ ಅವರಿಗೆ ಅನುಮತಿ ನೀಡುವ ಮೂಲಕ ರವಿವಾರ ಕಂಬಳ ಅಧಿಕೃತವಾಗಿ ಆರಂಭಗೊಂಡಿತು.
ಈ ವೇಳೆ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಅರಮನೆಯ ಕೋಣಗಳನ್ನು ಮೆರವಣಿಗೆಯಲ್ಲಿ ಕಂಬಳದ ಗದ್ದೆಗೆ ಕರೆತರಲಾಯಿತು.
ಜೋಡುಕರೆಯಲ್ಲಿ ತೆಂಗಿನಕಾಯಿ, ಹಾಲು, ಅಭಿಷೇಕವನ್ನು ನಡೆಸಿ, ಹಿಂಗಾರದ ಅರ್ಪಣೆಯೊಂದಿಗೆ ಕಂಬಳಕ್ಕೆ ಚಾಲನೆ ನೀಡಲಾಯಿತು. ಅರಮನೆಯ ಕೋಣಗಳು ಕಂಬಳದ ಕರೆಯಲ್ಲಿ ಓಡಿದ ಅನಂತರ ಕಂಬಳದ ಯಜಮಾನರಿಗೆ ಗೌರವ ಸಲ್ಲಿಸಲಾಯಿತು.
ಕಂಬಳ ಭಾರತೀಯ
ಸಂಸ್ಕೃತಿ: ಒಡೆಯರ್
ಕಂಬಳವನ್ನು ಉದ್ಘಾಟಿಸಿದ ಮೈಸೂರು ಅರಮನೆಯ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕಂಬಳ ಕ್ರೀಡೆಯು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಈ ಮಣ್ಣಿನ ಗುಣವಿಶೇಷತೆಯನ್ನು ಹೊಂದಿದೆ. ನಮ್ಮ ಪೂರ್ವಜರು ಇಲ್ಲಿನ ಕಂಬಳದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ ಎಂದರು.
ಬಪ್ಪನಾಡು ದೇಗುಲದ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮೈಸೂರಿನ ಶ್ರೀಸ್ವರೂಪ್ ಆನಂದ್, ಅರಮನೆಯ ಆಶಾಲತಾ, ಗೌತಮ್ ಜೈನ್, ಪವಿತ್ರೇಶ್ ಜೈನ್, ರಕ್ಷಾ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಎಂ.ಎಚ್. ಅರವಿಂದ ಪೂಂಜಾ, ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು, ಕೆ. ಭುವನಾಭಿರಾಮ ಉಡುಪ, ಎಚ್. ವಸಂತ ಬೆರ್ನಾಡ್, ಅಪು ಯಾನೆ ಶ್ರೀನಿವಾಸ ಪೂಜಾರಿ, ವಾಮನ ಇಡ್ಯಾ, ಸೂರ್ಯಕಾಂತ್ ಮುಂಬಯಿ, ಬಿ. ಸೂರ್ಯಕುಮಾರ್, ಚಂದ್ರಶೇಖರ್ ಜಿ., ಬಿಜೆಪಿಯ ಸುದರ್ಶನ್, ಶಶೀಂದ್ರ ಎಂ. ಸಾಲ್ಯಾನ್, ಸುಚೀಂದ್ರ ಅಮೀನ್ ಬರ್ಕೆ, ಯುವರಾಜ್ ಜೈನ್, ಆಸ್ಟಿನ್ ಸಂತೋಷ್, ಧರ್ಮದರ್ಶಿ ಮೋಹನ್‌ದಾಸ್, ವಿಜಯ ಶೆಟ್ಟಿ ಉಪಸ್ಥಿತರಿದ್ದರು.
ಅರಸು ಪ್ರಶಸ್ತಿ ಪ್ರದಾನ
ಮೂಲ್ಕಿ ಅರಮನೆ ವೆಲ್ಫೆರ್ ಮತ್ತು ಚಾರಿಟೆಬಲ್ ಟ್ರಸ್ಟ್ ಹಾಗೂ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಜಂಟಿಯಾಗಿ ಸಂಯೋಜಿಸಿರುವ ಅರಸು ಪ್ರಶಸ್ತಿಯನ್ನು ದಿ| ಪಯ್ಯೋಟ್ಟು ಸದಾಶಿವ ಸಾಲ್ಯಾನ್ (ಮರಣೋತ್ತರ), ಭುಜಂಗ ಎಂ. ಶೆಟ್ಟಿ ಉತೃಂಜೆ (ಸಾಮಾಜಿಕ), ನವೀನ್ ಶೆಟ್ಟಿ ಎಡೆ¾ಮಾರ್ (ತುಳು ಸಂಸ್ಕೃತಿ), ಗಂಗಾಧರ್ ದೇವಾಡಿಗ (ಕೃಷಿ), ಸುಷ್ಮಾ ತಾರಾನಾಥ್ ಅಮೀನ್ (ಕ್ರೀಡೆ), ಡಾ| ಗುರುಪ್ರಸಾದ್ ನಾವಡ (ವೈದ್ಯಕೀಯ), ದಿ| ಪಂಜದಗುತ್ತು ಶಾಂತಾರಾಮ ಶೆಟ್ಟಿ (ಅರಸು ಸೀಮೆಯ ಸಿರಿ) ಅವರಿಗೆ ದುಗ್ಗಣ್ಣ ಸಾವಂತರು ನೀಡಿ ಸಮ್ಮಾನಿಸಿದರು.
ಮೂಡುಬಿದಿರೆಯ ವಿವೇಕ್ ಆಳ್ವ, ದಿವಾಕರ ಕದ್ರಿ, ವೀಣಾ ಸಾಮಾನಿ, ಎಂ. ಶಶೀಂದ್ರಕುಮಾರ್ ಪಾವಂಜೆ, ಸೊಸೈಟಿಯ ಪ್ರತಿಭಾ ಕುಳಾಯಿ, ಉಮಾನಾಥ ಶೆಟ್ಟಿಗಾರ್, ತನುಜಾ ಶೆಟ್ಟಿ, ವಿಜಯಕುಮಾರ್ ಸನಿಲ್, ಗಣೇಶ್ ದೇವಾಡಿಗ, ಸಿಇಒ ಸುದರ್ಶನ್ ಉಪಸ್ಥಿತರಿದ್ದರು. ಸೊಸೈಟಿಯ ಅಧ್ಯಕ್ಷ ಎಚ್. ವಸಂತ ಬೆರ್ನಾಡ್ ಸ್ವಾಗತಿಸಿದರು, ಟ್ರಸ್ಟ್‌ನ ಗೌತಮ್ ಜೈನ್ ವಂದಿಸಿದರು, ಡಾ| ಗಣೇಶ್ ಅಮೀನ್ ಸಂಕಮಾರ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.