ಮೂಲ್ಕಿ : 17 ಅತಿ ಸೂಕ್ಷ್ಮ ಮತಗಟ್ಟೆಗಳು
ಒಟ್ಟು 63 ಮತಗಟ್ಟೆಗಳಲ್ಲಿ ಸಂಪೂರ್ಣ ಭದ್ರತೆ,ವಿಶೇಷ ನಿಗಾ
Team Udayavani, Apr 14, 2019, 6:30 AM IST
ಹಳೆಯಂಗಡಿ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲ ಸಿದ್ಧತೆಗೆಳು ಅಂತಿಮವಾಗಿವೆ. ಮತದಾನ ದಿನದಂದು ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಸಂಪೂರ್ಣ ಭದ್ರತೆ ಹಾಗೂ ವಿಶೇಷ ನಿಗಾವಹಿಸುವುದಕ್ಕಾಗಿ 63 ಮತಗಟ್ಟೆಗಳಲ್ಲಿ 17 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಿ, ವಿಶೇಷ ಭದ್ರತೆ ನೀಡ ಲಾಗುತ್ತಿದೆ.
ಮೂಲ್ಕಿ ಪೊಲೀಸ್ ಠಾಣೆಗೆ ಮೂಲ್ಕಿ ನಗರ ಪಂಚಾಯತ್ ಹಾಗೂ ಹಳೆಯಂಗಡಿ, ಪಡುಪಣಂಬೂರು, ಕಿಲ್ಪಾಡಿ, ಅತಿಕಾರಿಬೆಟ್ಟು, ಬಳುRಂಜೆ, ಐಕಳ, ಕಿನ್ನಿಗೋಳಿ, ಮೆನ್ನಬೆಟ್ಟು, ಕೆಮ್ರಾಲ್, ಕಟೀಲು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯನ್ನು ಹೊಂದಿದೆ. ಇದರಲ್ಲಿ ಕಟೀಲು, ಹಳೆಯಂಗಡಿ ಗ್ರಾಮ ಪಂಚಾಯತ್‌ನ ಕೆಲವೊಂದು ಗ್ರಾಮದ ಭಾಗ ಮಾತ್ರ ಬಜಪೆ ಹಾಗೂ ಸುರತ್ಕಲ್ ಠಾಣೆಗೆ ಸೇರಿಸಲ್ಪಟ್ಟಿದೆ.
ಈ ಭಾಗದ 16 ಮತಗಟ್ಟೆಗಳನ್ನು ಮೂಲ್ಕಿ ಪೊಲೀಸ್ ಠಾಣೆಗೆ ಹೆಚ್ಚುವರಿಯಾಗಿ ವಹಿಸಲಾಗಿದ್ದು, ಒಟ್ಟು 63 ಮತದಾನದ ಕೇಂದ್ರಗಳನ್ನು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯು ಜಂಟಿಯಾಗಿ ವಿಂಗಡಿಸಿಕೊಂಡಿದೆ.
63 ಮತದಾನ ಕೇಂದ್ರಗಳು
ಮೂಲ್ಕಿ ಠಾಣಾ ವ್ಯಾಪ್ತಿ ಒಟ್ಟು 63 ಮತದಾನ ಕೇಂದ್ರಗಳಲ್ಲಿ 17 ಮತದಾನ ಕೇಂದ್ರಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳಾಗಿ ಗುರುತಿಸಲ್ಪಟ್ಟಿದೆ. ಬಪ್ಪನಾಡು ಗ್ರಾಮದ ಮತಗಟ್ಟೆ ಸಂಖ್ಯೆ 01, ಕೆ.ಎಸ್. ರಾವ್ ನಗರದ ಲಿಂಗಪ್ಪಯ್ಯಕಾಡಿನ 118ರಿಂದ 121 (ಒಟ್ಟು 4), ಹಳೆಯಂಗಡಿಯ 146ರಿಂದ 151 (6), ಪಕ್ಷಿಕೆರೆ- ಕೆಮ್ರಾಲ್‌ನ 129 ಮತ್ತು 131 (2), ಅತಿಕಾರಿಬೆಟ್ಟಿನ 6 ಮತ್ತು 7 (2), ಕಿನ್ನಿಗೋಳಿ 102, ತಾಳಿಪಾಡಿ 104, ಪಡುಪಣಂಬೂರು 124, ಉಳೆಪಾಡಿ 14 (ಹೊಸದಾಗಿ ಸೇರ್ಪಡೆ) ಅತಿಸೂಕ್ಷ್ಮ ಮತಗಟ್ಟೆಯಾಗಿವೆ. ಉಳಿದ 46 ಮತಗಟ್ಟೆಗಳನ್ನು ಸಾಮಾನ್ಯ ಮತಕೇಂದ್ರಗಳಾಗಿ ಗುರುತಿಸಲಾಗಿದೆ.
ಅತಿ ಸೂಕ್ಷ್ಮಕೇಂದ್ರದಲ್ಲಿ ಸೇನಾಪಡೆ
ಮೂಲ್ಕಿ ಠಾಣಾ ವ್ಯಾಪ್ತಿಯ 17 ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಕೆಎಸ್‌ಆರ್‌ಪಿ ಪೊಲೀಸರನ್ನು ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸಿಬಂದಿ ಸಹಿತ ನಿಯೋಜಿಸಲಾಗುತ್ತದೆ.
ಮತಗಟ್ಟೆಯ ಪ್ರತಿ ಒಂದು ತಾಸಿನ ಮಾಹಿತಿಯನ್ನು ಚುನಾವಣೆ ಕಚೇರಿಗೆ ಸಹಿತ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ವ್ಯವಸ್ಥೆ ನಡೆಯುತ್ತದೆ. ಉಳಿದಂತೆ ಸಾಮಾನ್ಯ ಮತಗಟ್ಟೆಗಳಿಗೆ ಬೂತ್ ಮಟ್ಟದಲ್ಲಿ ಓರ್ವ ಪೊಲೀಸ್ ಸಿಬಂದಿ ಹಾಗೂ ಹೋಮ್ ಗಾರ್ಡ್‌ಗಳನ್ನು ನಿಯೋಜಿಸಲಾಗುತ್ತದೆ. ಹೆಚ್ಚುವರಿ ಕ್ಲಸ್ಟರ್ ಮಟ್ಟದಲ್ಲಿ ಬೂತ್‌ಗಳಿದ್ದರೂ ಸಹ ಅಲ್ಲಿಗೆ ಪೊಲೀಸ್ ಸಿಬಂದಿಯನ್ನೇ ಬಳಸಲಾಗುತ್ತದೆ. ಮೂಲ್ಕಿ ಪೊಲೀಸ್ ಠಾಣೆಯ ಸಿಬಂದಿ ಹಾಗೂ ಹೋಮ್ ಗಾರ್ಡ್‌ಗಳು ಭದ್ರತೆ ನೀಡಲಿದ್ದಾರೆ.
ಹೆಚ್ಚುವರಿ ಕೇಂದ್ರ ಅರೆ ಸೇನಾ ಪಡೆ(ಸಿಪಿಎಂಎಫ್) ಯೋಧರ ನಿಯೋಜನೆಯನ್ನು ಎಲ್ಲೂ ಬಳಸಲಾಗುವುದಿಲ್ಲ. ಆದರೆ ಕೆ.ಎಸ್. ರಾವ್ ನಗರ ಹಾಗೂ ಹಳೆಯಂಗಡಿ ವ್ಯಾಪ್ತಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಬಳಸುವ ಸಾಧ್ಯತೆ ಇದೆ.
ಮೂಲ್ಕಿ ಠಾಣೆಯಲ್ಲಿ ಓರ್ವ ಸಿಐ, ಎಸ್‌ಐ-2, ಎಎಸ್‌ಐ-4, ಎಚ್‌ಸಿ-14, 32 ಸಿಬಂದಿ ಸಹಿತ ಹೆಚ್ಚುವರಿಯವಾಗಿ ನಿಯೋಜನೆಯಲ್ಲಿರುವವರು ವಿವಿಧ ಜವಾಬ್ದಾರಿಯನ್ನು ಹಂಚಿಕೊಳ್ಳಲಿದ್ದಾರೆ. ಇವರೊಂದಿಗೆ ಹೋಮ್‌ಗಾರ್ಡ್‌ಗಳನ್ನು ಎಲ್ಲ ಮತದಾನ ಕೇಂದ್ರಗಳ ಸುರಕ್ಷೆಗೆ ನಿಯೋಜಿಸಲಾಗುತ್ತದೆ.
ಸುರಕ್ಷೆಗೆ ಆದ್ಯತೆ
ಈಗಾಗಲೇ ಎಲ್ಲ ಮತಗಟ್ಟೆಗಳ ಮಾಹಿತಿ ಪಡೆದುಕೊಂಡು ಕೇಂದ್ರಕ್ಕೆ ಯಾವ ರೀತಿಯ ರಕ್ಷಣೆ ಬೇಕು ಹಾಗೂ ಸಿಬಂದಿ ನಿಯೋಜನೆಗೆ ಸಜ್ಜಾಗಿದ್ದೇವೆ. ಮತದಾರರು ಸುರಕ್ಷಿತವಾಗಿ ಮತದಾನ ಮಾಡುವ ಹಾಗೂ ಯಾವುದೇ ರೀತಿಯಲ್ಲೂ ಕಾನೂನನ್ನು ಮೀರಿ ನಡೆಯದ ರೀತಿಯಲ್ಲಿ ರಕ್ಷಣೆ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ.
- ಪಿ.ಎಂ. ಸಿದ್ದರಾಜು,
ಸಿಐ, ಮೂಲ್ಕಿ ಪೊಲೀಸ್ ಠಾಣೆ
- ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.