ಮೂಲ್ಕಿ ಕಾಂಗ್ರೆಸ್‌ನಿಂದ 5,000 ಸೀರೆ ವಿತರಣೆ
Team Udayavani, Oct 21, 2017, 3:24 PM IST
ಮೂಲ್ಕಿ: ದೇಶ ಕಂಡ ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮಾತೃ ಹೃದಯದ ಮೂಲಕ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಟ್ಟಿರುವುದರಿಂದ ಇಂದು ಸರ್ವರೂ ಸಮ ಬಾಳು ನಡೆಸಲು ಸಾಧ್ಯವಾಗಿದೆ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ಮಹಿಳೆಯರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ 5000 ಸೀರೆಗಳನ್ನು ವಿತರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ವಿತ್ತ ಸಚಿವರಾಗಿ ಬಿ. ಜನಾರ್ದನ ಪೂಜಾರಿಯವರು ಬ್ಯಾಂಕನ್ನು ಬಡವರ ಮನೆ ಬಾಗಿಲಿಗೆ ತಂದಂಥ ಕಾರ್ಯವನ್ನು ಇನ್ನು ಯಾರಿಂದಲೂ ಮಾಡಲಾಗದು ಎಂದು ಹೇಳಿದರು.ಮೂಲ್ಕಿಯ ಪುಣ್ಯ ನೆಲದಲ್ಲಿ ನಡೆಯುತ್ತಿರುವ ಮಾತೆಯರ ಗೌರವಾ ರ್ಪಣೆ ಕಾರ್ಯಕ್ರಮ ಅತ್ಯಂತ ಶ್ರೇಷ್ಠವಾಗಿದೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಹಿಳೆಯರಿಗೆ ಎಲ್ಲಿ ಗೌರವ ಇದೆಯೋ ಅಲ್ಲಿ ದೇವರ ಸಾನ್ನಿಧ್ಯವಿರುತ್ತದೆ. ಮಾತೆಯರ ಆಶೀರ್ವಾದ ಇದ್ದರೆ ದೇವರ ಆಶೀರ್ವಾದ ಇದ್ದಂತೆ ಎಂದು ಹೇಳಿದರು.
ಉದ್ಘಾಟನೆ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಶ್ರಮ, ಸಾಧನೆ ಹಾಗೂ ಕ್ಷಮತೆ ಇಡೀ ಕುಟುಂಬವನ್ನು ನಡೆಸುವ ತ್ಯಾಗದಿಂದ ಕೂಡಿದ ಬದುಕು ಶ್ರೇಷ್ಠವಾದುದು ಎಂದರು.
ವಿವಿಧ ಧಾರ್ಮಿಕ,ಮುಖಂಡರಿಂದ ಉಪನ್ಯಾಸ
ಮೂಲ್ಕಿಯ ವಿದ್ವಾನ್ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಮೂಲ್ಕಿ ಚರ್ಚ್‌ನ ಧರ್ಮಗುರು ಫಾ| ಫ್ರಾನ್ಸಿಸ್ ಕ್ಸೇವಿಯರ್ ಗೋಮ್ಸ್ , ಚೊಕ್ಕಬೆಟ್ಟು ಮಸೀದಿಯ ಧರ್ಮಗುರು ಅಬ್ದುಲ್ ಅಜೀಜ್ ಧಾರಿಮಿ ಮುಂತಾದವರು ಶುಭ ಹಾರೈಸಿದರು.
ಕಾಂಗ್ರೆಸ್‌ಗೆ ಸೇರ್ಪಡೆ
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸೀರೆಗಳನ್ನು ವಿತರಿಸಲಾಯಿತು. ವಿವಿಧ ಪಕ್ಷಗಳ ಹಲವಾರು ನಾಯಕ ರನ್ನು ಕಾಂಗ್ರೆಸ್‌ಗೆ ಸೇರಿಸಲಾಯಿತು.
ಮೂಲ್ಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು, ಮೂಡಬಿದಿರೆ ಬ್ಲಾಕ ಅಧ್ಯಕ್ಷ ವೆಲೇರಿಯನ್ ಸಿಕ್ವೇರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಮೂಡಬಿದಿರೆ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಸನಿಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಮೂಲ್ಕಿ, ಮುಡಾ ಸದಸ್ಯ ಎಚ್. ವಸಂತ್ ಬೆರ್ನಾಡ್, ಪಾಲಿಕೆ ಸದಸ್ಯ ಪ್ರವೀಣ್‌ಚಂದ್ರ ಆಳ್ವ, ಎ.ಪಿ.ಎಂಸಿ. ಅಧ್ಯಕ್ಷ ಪ್ರಮೋದ್ ಕುಮಾರ್, ಸದಸ್ಯ ಜೋಯಲ್ ಡಿ’ ಸೋಜಾ, ಪಕ್ಷದ ವಿವಿಧ ಪದಾಧಿಕಾರಿಗಳಾದ ಶಶಿಕಾಂತ ಶೆಟ್ಟಿ, ಎಚ್. ಅಬೂಬಕ್ಕರ್, ತಿಮ್ಮಪ್ಪ ಕೋಟ್ಯಾನ್, ಶೈಲಾ ಸಿಕ್ವೇರ, ಭೀಮಾಶಂಕರ್, ಅಶೋಕ್ ಪೂಜಾರ್, ಮಂಜುನಾಥ ಕಂಬಾರ, ಬಾಲಾದಿತ್ಯ ಆಳ್ವ, ಸುಕುಮಾರ್ ಸನಿಲ್ ಮುಂತಾದವರು ವೇದಿಕೆಯಲ್ಲಿದ್ದರು.
ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನರೇಶ್ ಸಸಿಹಿತ್ಲು ನಿರೂಪಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಬಿ.ಎಂ.ಆಸೀಫ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?
Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !
Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ
Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು
Karnataka Sports Meet: ಈಜು… ಚಿಂತನ್ ಶೆಟ್ಟಿ , ರಚನಾ ಬಂಗಾರ ಬೇಟೆ