ಮೂಲ್ಕಿ ನ.ಪಂ.: ರಾಜಕೀಯ ಚಟುವಟಿಕೆ ಬಿರುಸು
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನ ನಿಗದಿ
Team Udayavani, May 10, 2019, 6:00 AM IST
ಮೂಲ್ಕಿ: ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿರುವ ಮೂಲ್ಕಿಯ ನಗರಪಂಚಾಯತ್ ಆಡಳಿತದ ಹೊಸ ಸಾರಥ್ಯಕ್ಕಾಗಿ ಚುನಾವಣೆ ಪ್ರಕ್ರಿಯೆಗೆ ದಿನ ನಿಗಧಿಯಾಗುತ್ತಿದ್ದಂತೆ ವಿವಿಧ ರಾಜ ಕೀಯ ಪಕ್ಷಗಳ ಚಟುವಟಿಕೆಗಳು ಚುರುಕುಗೊಂಡಿವೆ.
ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಇಬ್ಬರು ಅಧ್ಯಕ್ಷರು ತಲಾ ಎರಡೂವರೆ ವರ್ಷಗಳ ಅವಧಿಗೆ ಆಡ ಳಿತ ಯಂತ್ರದ ನೇತೃತ್ವ ವಹಿಸಿದ್ದರು.
2014ರ ಚುನಾವಣೆಯಲ್ಲಿ 17 ಸ್ಥಾನಗಳ ಪೈಕಿ ಬಿಜೆಪಿ 11 ಹಾಗೂ ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದಿತ್ತು. ಮೊದಲ ಎರಡೂವರೆ ವರ್ಷಗಳ ಕಾಲ ಮೀನಾಕ್ಷಿ ಬಂಗೇರ ಹಾಗೂ ಎರಡನೇ ಹಂತದ ಎರಡೂವರೆ ವರ್ಷಗಳ ಕಾಲ ಸುನಿಲ್ ಆಳ್ವ ಅವರು ಅಧ್ಯಕ್ಷರಾಗಿ ಹಾಗೂ ವಸಂತಿ ಭಂಡಾರಿ ಮತ್ತು ರಾಧಿಕಾ ಯಾದವ ಕೋಟ್ಯಾನ್ ಉಪಾಧ್ಯಕ್ಷರಾಗಿ,ಹರ್ಷ ರಾಜ್ ಶೆಟ್ಟಿ ಜಿ.ಎಂ. ಮತ್ತು ಶೈಲೇಶ್ ಕುಮಾರ್ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ನಗರದ ಆಡಳಿತದ ನೇತೃತ್ವ ವಹಿಸಿದ್ದರು.
ಚುನಾವಣೆ ಬಗ್ಗೆ ಕುತೂಹಲ
ಮೇ 29ರಂದು ನಡೆಯುವ ಚುನಾವಣೆ ಕುತೂಹಲ ಮೂಡಿ ಸಿದ್ದು, ಲೋಕಸಭಾ ಸಮರ, ರಾಜ್ಯದಲ್ಲಿರುವ ಆಡಳಿತ ವ್ಯವಸ್ಥೆ ಇಲ್ಲಿನ ನಗರ ಪಂಚಾಯತ್ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಮೂಲ್ಕಿ ನಗರ ಪಂಚಾಯತ್ ಆಡಳಿತಕ್ಕಾಗಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳ ಮೈತ್ರಿ ಮಾತುಕತೆ ಬಗ್ಗೆ ಸ್ಪಷ್ಟ ನಿಲುವು ವರಷ್ಠರಿಂದ ದೊರೆಯದೆ ಯಾವುದೇ ತೀರ್ಮಾನಕೈಗೊ ಳ್ಳಲಾಗದು ಎನ್ನುತ್ತಾರೆ ಸ್ಥಳೀಯ ನಾಯಕರು. ಈಗಾಗಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಎಲ್ಲ ತಯಾರಿ ಮೂರು ಪಕ್ಷಗ ಳಿಂದ ನಡೆಯುತ್ತಿದೆ. ಹೀಗಾಗಿ ಚುನಾವಣೆ ಬಿಸಿ ಇಲ್ಲಿ ಕಾವೇರುವ ಸಾಧ್ಯತೆ ಹೆಚ್ಚಾಗಿದೆ.
18 ಸದಸ್ಯ ಬಲ
ನಗರ ಪಂಚಾಯತ್‌ನಲ್ಲಿ ಈವರೆಗೆ 17 ಸದಸ್ಯ ಬಲವಿದ್ದರೆ ಪುನರ್‌ವಿಂಗಡೆಯ ಬಳಿಕ ಈ ಬಾರಿ ಒಂದು ಸ್ಥಾನವನ್ನು ಹೆಚ್ಚಿ 18 ಸದಸ್ಯ ಬಲವನ್ನು ಪಡೆಯಲಿದೆ.
ಸದಾಶಿವನಗರ ಮತದಾರರೇ ನಿರ್ಣಾಯಕರು ಮೂಲ್ಕಿ ನ.ಪಂ.ವ್ಯಾಪ್ತಿಯಲ್ಲಿ ಬಪ್ಪನಾಡು, ಚಿತ್ರಾಪು, ಮಾನಂಪಾಡಿ ಮತ್ತು ಕಾರ್ನಾಡು ಮುಂತಾದ ನಾಲ್ಕು ಗ್ರಾಮಗಳ ವ್ಯಾಪ್ತಿಯದ್ದಾಗಿದೆ.
ಈ ನಾಲ್ಕು ಗ್ರಾಮಗಳಲ್ಲಿ ಕಾರ್ನಾಡು ಗ್ರಾಮದ ಒಂದು ಮೂಲೆಯಲ್ಲಿ ಇರುವ ಕಾರ್ನಾಡು ಸದಾಶಿವ ರಾವ್ ನಗರದಲ್ಲಿ ಎಂಟು ಸದಸ್ಯರ ಆಯ್ಕೆಗೆ ಅವಕಾಶವಿದೆ. ಹೀಗಾಗಿ ಇಲ್ಲಿಯ ಮತದಾರರು ನಿರ್ಣಾಯಕ ಪಾತ್ರ ವಹಿಸುವುದು ಸ್ಪಷ್ಟ ವಾಗಿದೆ.
ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಹಿಂದಿನ ಅವಧಿಯ ಸದಸ್ಯರು ಮತ್ತೆ ಅವರದ್ದೇ ವಾರ್ಡ್‌ನಿಂದ ಸ್ಪರ್ಧೆ ನಡೆಸಲು ಈ ಬಾರಿಯ ಮೀಸಲಾತಿ ನೀತಿಯಿಂದ ತಡೆಯಾಗಿದೆ. ಹೀಗಾಗಿ ಹೆಚ್ಚಿನ ಹೊಸ ಮುಖಗಳ ಆಯ್ಕೆಗೆ ಪಕ್ಷಗಳು ಸಿದ್ಧತೆ ನಡೆಸುತ್ತಿದೆ.
ವರಿಷ್ಠರ ನಿರ್ಣಯವೇ ಅಂತಿಮ
ರಾಜ್ಯದಲ್ಲಿ ಈ ಬಾರಿ ಮೈತ್ರಿ ಸರಕಾರವಿ ದ್ದರೂ ಇಲ್ಲಿ ವರಿಷ್ಠರ ನಿರ್ಧಾರಕ್ಕೆ ಬಿಟ್ಟದ್ದು.ಮಾಜಿ ಸಚಿವ ಕೆ. ಅಭಯಚಂದ್ರ ಅವರ ನೇತೃತ್ವದಲ್ಲಿ ನಗರ ಪಂಚಾಯತ್ ಚುನಾವಣೆ ನಡೆಯುವುದ ಲ್ಲದೆ ಅವರ ನಿರ್ಣಯಗಳು ಪ್ರಾಮುಖ್ಯ ಹೊಂದಿದೆ. ನಾವು ಮತ್ತೆ ಅಧಿಕಾರ ಪಡೆಯುವ ವಿಶ್ವಾಸವಿದೆ.
– ಧನಂಜಯ ಮಟ್ಟು,ಅಧ್ಯಕ್ಷರು,ಮೂಲ್ಕಿ ಬ್ಲಾಕ್ ಕಾಂಗ್ರೆಸ್
ಉತ್ತಮ ಸದಸ್ಯರ ಆಯ್ಕೆಗೆ ಸಿದ್ಧತೆ ಬಿಜೆಪಿ ಚುನಾವಣೆಗೆ ಸಿದ್ಧವಾಗಿದೆ. ಕಳೆದ ಅವಧಿಯಲ್ಲಿ 11 ಮಂದಿ ಸದಸ್ಯರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಈ ಬಾರಿಯ ಮೀಸಲಾತಿ ನೀತಿಯಿಂದ ಮತ್ತೆ ಅದೇ ಸದಸ್ಯರು ಸ್ಪರ್ಧಿಸುವುದು ಸಾಧ್ಯವಾಗದಿದ್ದರೂ ಉತ್ತಮ ಅಭ್ಯರ್ಥಿಗಳ ಆಯ್ಕೆಗೆ ತಯಾರಿ ನಡೆಸಲಾಗುತ್ತಿದೆ.
– ಯು.ಸತ್ಯೇಂದ್ರ ಶೆಣೈ,
ಅಧ್ಯಕ್ಷರು, ಬಿಜೆಪಿ ಮೂಲ್ಕಿ ನಗರ ಮಹಾಶಕ್ತಿ ಕೇಂದ್ರ
ಎಲ್ಲ ಸ್ಥಾನಗಳಿಗೂ ಸ್ಪರ್ಧೆ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ನೇತೃತ್ವದ ಜೆಡಿಎಸ್ ಈ ಬಾರಿ ನ. ಪಂ.ಚುನಾವಣೆಯಲ್ಲಿ ಎಂದಿನಂತೆ ಎಲ್ಲ ಸ್ಥಾನಗಳಿಗೆ ಸ್ಪರ್ಧಿಸಲಿದೆ. ಮೈತ್ರಿಯ ಬಗ್ಗೆ ವರಿಷ್ಠರ ನಿರ್ಧಾರಕ್ಕೆ ಬದ್ಧರಾ ಗಿದ್ದೇವೆ. ಈ ಬಾರಿ ನಿರ್ಣಾಯಕರಾಗಿ ಪಾಲ್ಗೊಳ್ಳುತ್ತೇವೆ.
– ಜೀವನ್ ಕೆ.ಶೆಟ್ಟಿ,
ಅಧ್ಯಕ್ಷರು,ಜೆಡಿಎಸ್ ಮೂಲ್ಕಿ ಬ್ಲಾಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.