ಮೂಲ್ಕಿ: ಮನೆಗೆ ನುಗ್ಗಿ ಆಭರಣ ಕಳವು
Team Udayavani, Jul 18, 2017, 3:55 AM IST
ಮೂಲ್ಕಿ: ಇಲ್ಲಿಯ ಪಂಚಮಹಾಲ್ ರಸ್ತೆಯ ಮಾಡುಲೋಕ ಲೇನ್ನ ಮನೆಯೊಂದರಿಂದ ಸುಮಾರು 100 ಗ್ರಾಂ ಚಿನ್ನಾಭರಣ ಕಳ್ಳತನ ನಡೆದಿದೆ.
ಮೂಲ್ಕಿ ಪಂಚಮಹಾಲ್ ರಸ್ತೆಯ ಉದ್ಯಮಿ ಮಾಡೋಕ ಲೇನ್ ಓಣಿಯಲ್ಲಿ ವಾಸವಿರುವ ವಿ.ರಘುವೀರ್ ಕಾಮತ್ ಅವರ ಮನೆಯಲ್ಲಿ ಕಳವು ನಡೆದಿದೆ.
ಅವರು ಜು.14ರಂದು ತಮ್ಮ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರು. ಜು.14ರ ಶುಕ್ರವಾರದಿಂದ ರವಿವಾರದ ನಡುವಣ ಮೂರು ರಾತ್ರಿಗಳಲ್ಲಿ ಕಳ್ಳರು ಅಡುಗೆ ಕೋಣೆಯ ಕಿಟಕಿಯ ಸರಳು ಮುರಿದು ಮನೆಯೊಳಗೆ ಪ್ರವೇಶಿಸಿ ಬೀಗ ಮುರಿದು ಕಪಾಟು ಒಡೆದು ಅದರೊಳಗಿದ್ದ ಚಿನ್ನದ 44 ಗ್ರಾಂ ತೂಕದ ಹವಳದ ಸರ ಹಾಗೂ 56 ಗ್ರಾಂ ತೂಕದ ರೋಪ್ ಚೈನ್ ಅಪಹರಿಸಿದ್ದಾರೆ.
ಜ,17ರ ಸೋಮವಾರ ಬೆಂಗಳೂರಿನಿಂದ ಮುಂಜಾನೆ ಮನೆಗೆ ಬಂಗಾದ ಎದುರಿನ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿ ಇದ್ದುದನ್ನು ತೆಗೆದು ಒಳಕ್ಕೆ ಹೋದಾಗ ಕಳ್ಳತನ ನಡೆದಿರುವುದು ತಿಳಿಯಿತು. ಘಟನೆಯ ಬಗ್ಗೆ ತಿಳಿದ ಮೂಲ್ಕಿ ಪೊಲೀಸ್ ಇನ್ಸ್ಫೆಕ್ಟರ್ ಅನಂತ ಪದ್ಮನಾಭ ಹಾಗೂ ತಂಡದ ಅದಿಕಾರಿಗಳುಸ್ಥಳಕ್ಕೆ ಬೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ಬೆರಳಚ್ಚು ವಿಭಾಗದ ಪೊಲೀಸರು ಹಾಗು ಶ್ವಾನ ದಳ ಹಾಗೂ ಪರಿಶೀಲನೆ ನಡೆಸಿದೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.