ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆ: ಹಳೆ ಬಿಲ್‌ ಈಗ ಪಾಸ್‌ ಮಾಡುತ್ತಿರುವುದಕ್ಕೆ ಅಸಮಾಧಾನ


Team Udayavani, Jan 10, 2023, 5:50 AM IST

ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆ: ಹಳೆ ಬಿಲ್‌ ಈಗ ಪಾಸ್‌ ಮಾಡುತ್ತಿರುವುದಕ್ಕೆ ಅಸಮಾಧಾನ

ಸುಳ್ಯ: ಹಳೆಯ ಬಿಲ್‌ಗ‌ಳನ್ನು ಈಗ ಪಾಸ್‌ ಮಾಡುತ್ತಿರುವುದಕ್ಕೆ ವಿಪಕ್ಷ ಸದಸ್ಯರು ಕಾರಣ ಕ್ಷೇಳಿ ಆಕ್ಷೇಪಿಸಿದ ಘಟನೆ ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಸುಳ್ಯ ನಗರ ಪಂಚಾಯತ್‌ ಸಾಮಾನ್ಯ ಸಭೆ ನಗರ ಪಂಚಾಯತ್‌ ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ ಅಧ್ಯಕ್ಷತೆಯಲ್ಲಿ ಸೋಮವಾರ ನ.ಪಂ. ಸಮುದಾಯ ಭವನದ ಸಭಾಂಗಣದಲ್ಲಿ ನಡೆಯಿತು.

ವಿಷಯ ಪ್ರಸ್ತಾವಿಸಿದ ವಿಪಕ್ಷದವರು, ಹಳೆಯ ಬಿಲ್‌ಗ‌ಳನ್ನು ಈಗ ಪಾಸ್‌ ಮಾಡಲು ಕಾರಣಗಳೇನು? ಅಂದು ಬಿಲ್‌ ಪಾವತಿಸದೆ ಬಾಕಿ ಇಡಲು ಕಾರಣ ಏನೆಂದು ಪ್ರಶ್ನಿಸಿದರು. ಬಾಕಿಯಾಗಿರುವ ಬಗ್ಗೆ ಷರಾ ಬರೆಯಬೇಕಿತ್ತು ಎಂದರು. ಮುಂದಕ್ಕೆ ಹಳೆ ಬಿಲ್‌ ಬಾಕಿ ಮಾಡಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಬರೆಯುವ ಎಂದು ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ ಸಭೆಗೆ ತಿಳಿಸಿ ವಿಚಾರವನ್ನು ಮುಗಿಸಿದರು.

ನಾನೂ ಬ್ಯಾನರ್‌ ಹಾಕುವೆ
ವೆಂಕಪ್ಪ ಗೌಡ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಪಟ್ಟಿಯನ್ನು ನಾನು ತಯಾರಿಸಿ ಬ್ಯಾನರ್‌ ಅಳವಡಿಸುತ್ತೇನೆ ಎಂದರು. ಸದಸ್ಯ ರೋಹಿತ್‌ ಮಾತನಾಡಿ, ಕೇಂದ್ರ, ರಾಜ್ಯ ಸರಕಾರ ಜನತೆಗೆ ವಿವಿಧ ಯೋಜನೆಗಳ ಮೂಲಕ ಹಣ ನೀಡುತ್ತಾ ಜನಪರ ಕೆಲಸ ಮಾಡುತ್ತಿದೆ. ಇದರ ಪಟ್ಟಿ ನನ್ನಲ್ಲೂ ಇದೆ. ಈ ಬಗ್ಗೆ ನಾನೂ ಬ್ಯಾನರ್‌ ಹಾಕುವೆ ಎಂದು ತಿಳಿಸಿದರು.

ಅಸಮಾಧಾನ
ನ.ಪಂ. ವಠಾರದಲ್ಲಿ ಕಸದ ರಾಶಿ ಹಾಗೆ ಉಳಿಯಲು ಹಿಂದಿನ ಮುಖ್ಯಾಧಿಕಾರಿ ಎಂ.ಆರ್‌. ಸ್ವಾಮಿ ಕಾರಣ ಎಂದು ದೂರು ನೀಡಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಇದಕ್ಕೆ ಅವರೊಬ್ಬರೆ ಕಾರಣವೆ? ಒಬ್ಬನನ್ನೇ ಹೊಣೆ ಮಾಡುವುದು ಎಷ್ಟು ಸರಿ. ಹಿಂದಿನವರು ಕಾರಣರಲ್ಲವೆ ಎಂದು ಸದಸ್ಯ ವೆಂಕಪ್ಪ ಗೌಡ ಪ್ರಶ್ನಿಸಿದಾಗ ಅಧ್ಯಕ್ಷ ವಿನಯಕುಮಾರ್‌ ಮಾತನಾಡಿ, ನಮ್ಮ ಆಡಳಿತ ಅವಧಿಯಲ್ಲಿ ಕಸದ ರಾಶಿ ತೆರವಿಗೆ ಅಂದಿನ ಮುಖ್ಯಾಧಿಕಾರಿ ಎಂ.ಆರ್‌.ಸ್ವಾಮಿ ಅವರು ವಿಫ‌ರಾಗಿದ್ದಾರೆ ಎಂದು ನಾವು ಬರೆದಿದ್ದೇವೆ ಎಂದರು. ಕಸ ಸಾಗಾಟಕ್ಕೆ ಪ್ರಮಾಣ ಅಂದಾಜು ಮಾಡುವಲ್ಲಿ ವ್ಯತ್ಯಾಸ ಆಗಿರುವುದಕ್ಕೆ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಸುಧಾಕರ್‌ ಸಮಜಾಯಿಸಿಕೆ ನೀಡಿದರು. ಕಸ ನಿರ್ವಹಣೆ ಬಗ್ಗೆ ನಾವು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಅವರು ಆದಷ್ಟು ಬೇಗ ಅನುಮತಿ ನೀಡಿದಲ್ಲಿ ಬೇಗ ಕಸ ಸಾಗಾಟ ಮಾಡುತ್ತೇವೆ. ಆದರೆ ಅವರು ಲಿಖೀತ ರೂಪದಲ್ಲಿ ಅನುಮತಿ ನೀಡಬೇಕು ಎಂದು ವಿನಯಕುಮಾರ್‌ ತಿಳಿಸಿದರು.

ಕಪ್ಪು ಪಟ್ಟಿ
ಸಚಿವ ಎಸ್‌.ಅಂಗಾರ ಅವರು ಸಾಮಾನ್ಯ ಸಭೆಗೆ ಬರಬೇಕೆಂದು ಪಟ್ಟು ಹಿಡಿದಿರುವ ವಿಪಕ್ಷ ಸದಸ್ಯ ಸದ್ರಿ ಸಭೆಗೂ ಕಪ್ಪು ಪಟ್ಟಿ ಧರಿಸಿದ್ದರು. ನ.ಪಂ.ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸದಸ್ಯ ಶರೀಫ್ ಕಂಠಿ ಆರೋಪಿಸಿದರು. ಮನೆ ಮಂಜೂರು ವಿಚಾರ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ನಗರ ಪಂಚಾಯತ್‌ ಉಪಾಧ್ಯಕ್ಷೆ ಸರೋಜಿನಿ ಪೆಲತ್ತಡ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಶೀಲಾ ಅರುಣ್‌ ಕುರುಂಜಿ ಸೇರಿದಂತೆ ನ.ಪಂ. ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಮುಖ್ಯಾಧಿಕಾರಿ ಸುಧಾಕರ್‌ ಸ್ವಾಗತಿಸಿ, ವಂದಿಸಿದರು.

ಬ್ಯಾನರ್‌ಗೆ ಆಕ್ಷೇಪ
ಸುಳ್ಯ ನಗರದಲ್ಲಿ ಲವ್‌ ಜೆಹಾದ್‌ ಕುರಿತು ಬ್ಯಾನರ್‌ ಅಳವಡಿಸಲಾಗಿದ್ದು, ಇದು ಸಮಾಜದ ಸೌಹಾರ್ದ ಕೆಡಿಸುವ ರೀತಿಯಲ್ಲಿದೆ ಎಂದು ಸದಸ್ಯ ಕೆ.ಎಸ್‌. ಉಮ್ಮರ್‌ಹೇಳಿದರು. ಲವ್‌ ಜೆಹಾದ್‌ ಇದೆ ಎಂಬುದನ್ನು ಕೋರ್ಟ್‌ ಮಾನ್ಯ ಮಾಡಿಲ್ಲ. ಬ್ಯಾನರ್‌ ಅಳವಡಿಸಿ 15 ದಿನಗಳು ಕಳೆದರೂ ತೆರವಾಗಿಲ್ಲ. ಒಂದೋ ಬ್ಯಾನರ್‌ ತೆರವು ಮಾಡಬೇಕು. ಇಲ್ಲವೇ ಲವ್‌ ಜೆಹಾದ್‌ ಇಲ್ಲ ಎಂಬ ಬಗ್ಗೆ ಬ್ಯಾನರ್‌ ಅಳವಡಿಸಲು ನಮಗೂ ಅನುಮತಿ ನೀಡಬೇಕು ಎಂದು ಶರೀಫ್ ಆಗ್ರಹಿಸಿದರು. ಉತ್ತರಿಸಿದ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ, ಲವ್‌ ಜೆಹಾದ್‌ ಇದೆಯೋ, ಇಲ್ಲವೋ ಗೊತ್ತಿಲ್ಲ. ಎನ್‌ಐಎ ಸುಳ್ಯಕ್ಕೂ ಬಂದಿದೆ. ಮಂಗಳೂರಿನ ವಿದ್ಯಾಸಂಸ್ಥೆಯ ಮೇಲೂ ದಾಳಿ ನಡೆಸಿದೆ. ಇದು ಇಲ್ಲಿ ಚರ್ಚಿಸುವ ವಿಚಾರವಲ್ಲ. ಬ್ಯಾನರ್‌ ತೆಗೆಯಲು ಸಂಘಟನೆಯವರಿಗೆ ತಿಳಿಸಿದ್ದೇವೆ. ತೆಗೆದಿರುವ ಸಾಧ್ಯತೆಯಿದೆ. ತೆಗೆದಿಲ್ಲ ಎಂದಾದರೆ ತೆಗಿಯುವಂತೆ ತಿಳಿಸಲಾಗುವುದು ಎಂದರು.

ಟಾಪ್ ನ್ಯೂಸ್

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

courts-s

Belthangady: ಬೈಕ್‌ ಸವಾರ ಸಾವು ಪ್ರಕರಣ; ಸರಕಾರಿ ಬಸ್‌ ಚಾಲಕನಿಗೆ ಶಿಕ್ಷೆ;ದಂಡ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.