ಮುಂಡಾಜೆ ಗ್ರಾ.ಪಂ.: ಗಾಂಧಿ ಗ್ರಾಮ ಪುರಸ್ಕಾರ
Team Udayavani, Sep 30, 2018, 10:25 AM IST
ಬೆಳ್ತಂಗಡಿ: ಮುಂಡಾಜೆ ಗ್ರಾ.ಪಂ. 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಅ. 2ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯುವ ಕಾರ್ಯ ಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮುಂಡಾಜೆ ಗ್ರಾ.ಪಂ. 2014-15ನೇ ಸಾಲಿನಲ್ಲಿಯೂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿತ್ತು. ಸರಕಾರಿ ಅನುದಾನಗಳ ಸಮರ್ಪಕವಾಗಿ ಬಳಕೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ, ನೈರ್ಮಲ್ಯಕ್ಕೆ ಮೊದಲ ಆದ್ಯತೆ, ಉದ್ಯೋಗ ಖಾತರಿ ಯೋಜನೆಯಲ್ಲಿ ಸಾಧಿಸಿದ ಪ್ರಗತಿ, ಜಲ ಮರು ಪೂರಣಕ್ಕೆ ಆದ್ಯತೆ ಪರಿಗಣಿಸಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.
ಶೇ. 99 ತೆರಿಗೆ ವಸೂಲಾತಿ
ಗ್ರಾ.ಪಂ. ಲೆಕ್ಕಪತ್ರಗಳನ್ನು ಲೆಕ್ಕ ಪರಿಶೋಧನ ವರ್ತುಲ ದಿಂದ ಮಾಡಿರುವುದು, ಶೇ. 99 ತೆರಿಗೆ ವಸೂಲಾತಿ, ನೀರಿನ ಬಿಲ್ ವಸೂಲಾತಿ, ಹಂತ ಹಂತವಾಗಿ ಸಮರ್ಪಕವಾಗಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆ, 12 ತಿಂಗಳು ನಿಯಮಾನುಸಾರ ಸಾಮಾನ್ಯ ಸಭೆಗಳನ್ನು ನಡೆಸಿ ಪಂಚತಂತ್ರಕ್ಕೆ ಅಳವಡಿಕೆ, ಗ್ರಾಮಸಭೆ, ಸ್ಥಾಯೀ ಸಮಿತಿ ಸಭೆ, ಇತರ ಸಮಿತಿ ಸಭೆ, ಶುಚಿತ್ವದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ, ಮಹಿಳಾ ಗ್ರಾಮಸಭೆಯನ್ನು ಸಾರ್ವಜನಿಕವಾಗಿ ರ್ಯಾಲಿ ಗಳನ್ನು ನಡೆಸುವ ಮೂಲಕ ಪರಿಣಾಮಕಾರಿಯಾಗಿ ಮಾಡಲಾಗಿದೆ. ಪ್ರತಿ ತಿಂಗಳು ಗ್ರಾಮದ ವಿವಿಧ ಸಂಘ- ಸಂಸ್ಥೆಗಳನ್ನು ಸೇರಿಸಿಕೊಂಡು ವಿನೂತನ ಕಾರ್ಯಕ್ರಮಗಳನ್ನು, ಸಮಾಲೋಚನ ಸಭೆಗಳನ್ನು ನಡೆಸುತ್ತಿರುವುದು, ಗ್ರಾಮದ ಅಂಗವಿಕಲರಿಗೆ ಮಾಹಿತಿ, ಗ್ರಾ.ಪಂ. ಅನುದಾನ-ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬಟ್ಟೆ, ದಿನಬಳಕೆ ಸಾಮಗ್ರಿ, ಪುಸ್ತಕವನ್ನು ಪುನರ್ವಸತಿ ಕಾರ್ಯ ಕರ್ತರ ಸಹಕಾರದೊಂದಿಗೆ ಅಂಗವಿಕಲರಿಗೆ ಪ್ರತಿ ವರ್ಷ ವಿತರಿಸುವ ವಿನೂತನ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಬರಲಾಗಿದೆ.
ವಿವಿಧ ಕೌಶಲಗಳಾದ ಜೇನು ಕೃಷಿ, ತೋಟಗಾರಿಕೆ, ಬಯೋಗ್ಯಾಸ್ ಮಾಹಿತಿ, ಕಾನೂನಿನ ಅರಿವು ಶಿಬಿರ, ಹೈನುಗಾರಿಕೆ ಮಾಹಿತಿ, ನೀರು ಮತ್ತು ನೈರ್ಮಲ್ಯ ಮಾಹಿತಿ, ಕಟ್ಟಡ ಕಾರ್ಮಿಕರಿಗೆ ಮಾಹಿತಿ ಮತ್ತು ನೋಂದಣಿ ಕಾರ್ಡ್ ಇತರ ಯೋಜನೆಗಳ ಮಾಹಿತಿ ಮತ್ತು ಗುರುತಿನ ಚೀಟಿ ವಿತರಣೆ, ಬಾಪೂಜಿ ನೂರು ಸೇವೆಗಳ ಅಡಿಯಲ್ಲಿ ಸಾರ್ವಜನಿಕರಿಗೆ ವಿವಿಧ ಸೇವೆಗಳು, ನಾಗರಿಕ ಸನದ್ದು ಸಮರ್ಪಕವಾಗಿ ಅನುಷ್ಠಾನ, ಪ.ಜಾ./ ಪಂ.ದವರಿಗೆ ಮಾಹಿತಿ, ಮಳೆಗಾಲದ ಮೊದಲೇ ಗ್ರಾ.ಪಂ. ವ್ಯಾಪ್ತಿಯ ಚರಂಡಿಗಳ ದುರಸ್ತಿ, ಪೈಪ್ ಕಾಂಪೋಸ್ಟ್ ಅಳವಡಿಕೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಜನೋಪಯೋಗಿ ಪಂ. ಆಗಿ ಮೂಡಿ ಬಂದ ಹಿನ್ನೆಲೆಯಲ್ಲಿ ತಜ್ಞರ ಆಯ್ಕೆ ಸಮಿತಿ ಮುಂಡಾಜೆ ಗ್ರಾ. ಪಂ. ಅನ್ನು ಪ್ರಶಸ್ತಿಗೆ ಆಯ್ಕೆಗೊಳಿಸಿದೆ.
ಕಿಂಡಿ ಅಣೆಕಟ್ಟು
ಗ್ರಾ.ಪಂ. ವ್ಯಾಪ್ತಿಯಲ್ಲಿ ಜಲ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಕಿಂಡಿ ಅಣೆಕಟ್ಟು ರಚನೆ, ಜಲ ಮರುಪೂರಣ, ನೈರ್ಮಲ್ಯದ ಕುರಿತು ವಿವಿಧ ಕಾಮಗಾರಿಗಳ ಅನುಷ್ಠಾನ, ನರೇಗಾ ಯೋಜನೆಯಲ್ಲಿ ವಿವಿಧ ಕಾಮಗಾರಿಗಳ ಅಳವಡಿಕೆ, ಮಾದರಿ ಶ್ಮಶಾನ ಅಭಿವೃದ್ಧಿ, ಜೈವಿಕ ಇಂಧನ ನೆಡುತೋಪು, ಗೇರು ತೋಟ, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಯೋಜನೆಗಳ ಸಮರ್ಪಕ ಅನುಷ್ಠಾನ, ಯುವಕ-ಯುವತಿಯರಿಗೆ ಸ್ವ ಉದ್ಯೋಗದ ಬಗ್ಗೆ ತರಬೇತಿ-ಪ್ರೋತ್ಸಾಹ, 14ನೇ ಹಣಕಾಸು ಅನುದಾನದ ಸಂಪೂರ್ಣ ವಿನಿಯೋಗ, 14ನೇ ಕಾರ್ಯ ಕ್ಷಮತೆ ಅನುದಾನದಿಂದ ತೂಗು ಸೇತುವೆ ಅಭಿವೃದ್ಧಿ ಮಾಡಲಾಗಿದೆ.
ಗ್ರಾಮಸ್ಥರ ಸಹಕಾರ
ಗ್ರಾಮಸ್ಥರ, ಸಂಘ- ಸಂಸ್ಥೆಗಳ ಉತ್ತಮ ಸಹಕಾರ ಹಾಗೂ ಬೆಂಬಲ, ಆಡಳಿತ ಮಂಡಳಿಯ ಉತ್ತಮ ಕಾರ್ಯದಿಂದಾಗಿ ಈ ಪ್ರಶಸ್ತಿ ಲಭಿಸಲು ಸಹಕಾರಿಯಾಗಿದೆ.
– ಶಾಲಿನಿ
ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.