ಅಭಿವೃದ್ಧಿಯತ್ತ ಮುಂಡಾಜೆಯ ರುದ್ರಭೂಮಿ
Team Udayavani, Feb 22, 2017, 3:11 PM IST
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮ ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ಗಾಂಧೀ ಗ್ರಾಮ ಪುರಸ್ಕಾರವನ್ನು ಪಡೆದ ಗ್ರಾ. ಪಂ. ಮುಂಡಾಜೆ. ಆದರೆ ಮುಂಡಾಜೆಯ ರುದ್ರಭೂಮಿ ತೀರಾ ನಿರ್ಲಕ್ಷ್ಯಕ್ಕೊಳಗಾಗಿತ್ತು. ಇದೀಗ ಗ್ರಾ.ಪಂ, ವಿವಿಧ ಸಂಘ ಸಂಸ್ಥೆಗಳು ಮತ್ತು ಊರಿನ ಜನರ ಸಹಕಾರದೊಂದಿಗೆ ರುದ್ರಭೂಮಿಗೆ ಕಾಯಕಲ್ಪ ನೀಡಲಾಗುತ್ತಿದೆ.
ಮೇಲ್ಭಾಗದ ತಗಡು ಶೀಟು ತೂತು ಬಿದ್ದು ಮಳೆಗಾಲದಲ್ಲಿ ಸುಡುತ್ತಿರುವ ಹೆಣದ ಮೇಲೆ ನೀರು ತೊಟ್ಟಿಕ್ಕುತ್ತಿತ್ತು. ಅಲ್ಲಲ್ಲಿ ಅರ್ಧ ಸುಟ್ಟ ಕಟ್ಟಿಗೆ ತುಂಡು, ಪ್ಲಾಸ್ಟಿಕ್, ಪೇಪರ್, ಬಟ್ಟೆ ಚೂರುಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿತ್ತು. ಬಾಗಿಲಿಲ್ಲದ ಕೊಠಡಿ, ನೀರು ಬಾರದ ನಳ್ಳಿ, ಕುಳಿತುಕೊಳ್ಳಲಾಗದ ವಠಾರ ಮೊದಲಾದ ದುರವಸ್ಥೆಯಿಂದ ಕೂಡಿದ್ದ ರುದ್ರಭೂಮಿಯ ಅಭಿವೃದ್ಧಿಗಾಗಿ ಸಮಿತಿ ರಚಿಸಲಾಯಿತು. ಮುಂಡಾಜೆ ಗ್ರಾ. ಪಂ., ಉದ್ಯೋಗ ಖಾತರಿ ಯೋಜನೆ, ಮುಂಡಾಜೆ ಸಹಕಾರಿ ಸಂಘ, ವಿವಿಧ ಸಂಘ ಸಂಸ್ಥೆಗಳು, ಊರವರ ಸಹಕಾರದೊಂದಿಗೆ ರುದ್ರಭೂಮಿಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯಾಭಿವೃದ್ಧಿ ವತಿಯಿಂದ ಸಿಲಿಕಾನ್ ಛೇಂಬರ್ ಅಳವಡಿಸಿ ತ್ವರಿತ ಶವದಹನಕ್ಕೆ ಅನುಕೂಲತೆ ಕಲ್ಪಿಸಲಾಗಿದೆ. ರುದ್ರಭೂಮಿಯ ಪರಿಸರದಲ್ಲಿ ಸುಮಾರು 400 ಅಡಿಕೆ ಗಿಡ, 30ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನು ನಾಟಿ ಮಾಡಲಾಗಿದೆ. ನಾದುರಸ್ತಿಯಲ್ಲಿದ್ದ ರಸ್ತೆಗೆ ಕಾಂಕ್ರೀಟು ಹಾಕಲಾಗಿದೆ.
ಆಗಬೇಕಾಗಿರುವುದು
ರುದ್ರಭೂಮಿಯ ಪ್ರವೇಶಕ್ಕೆ ಗೇಟಿನ ವ್ಯವಸ್ಥೆ, ಆಫೀಸು, ಸ್ನಾನಗೃಹ, ಶೌಚಾಲಯ, ಕಟ್ಟಿಗೆ ಸಂಗ್ರಹಕ್ಕೆ ಕೊಠಡಿ, ಎದುರು ಬದಿಯಿಂದ ಆವರಣ ಗೋಡೆ ನಿರ್ಮಾಣ, ನೆಲಕ್ಕೆ ಇಂಟರ್‌ಲಾಕ್ ಅಳವಡಿಕೆ, ದಾರಿದೀಪದ ವ್ಯವಸ್ಥೆ, ಹರಿಶ್ಚಂದ್ರನ ಪ್ರತಿಕೃತಿ, ರುದ್ರಮೂರ್ತಿಯ ಪ್ರತಿಮೆ ಸ್ಥಾಪನೆ, ಖಾಲಿ ಜಾಗದಲ್ಲಿ ಉದ್ಯಾನವನ್ನು ಮಾಡುವ ಇರಾದೆಯೂ ಇದೆ. ವಿದ್ಯುತ್, ನಳ್ಳಿನೀರು, ಕೊಳವೆಬಾವಿ, ಕುಳಿತುಕೊಳ್ಳಲು ವಿಶ್ರಾಂತಿ ತಾಣ, ಕೊಠಡಿ, ಹೆಣವನ್ನು ಸ್ನಾನ ಮಾಡಿಸಲು ವ್ಯವಸ್ಥೆಯನ್ನು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಮೇ ತಿಂಗಳ ಕೊನೆಗೆ ಲೋಕಾರ್ಪಣೆಗೆ ಸಿದ್ಧವಾಗಲಿದೆ.
ಸ್ವತ್ಛತೆಗೆ ಆದ್ಯತೆ
ಈ ಹಿಂದೆ ಶಿಥಿಲಾವಸ್ಥೆಯಲ್ಲಿದ್ದುದರಿಂದ ಮಳೆಗಾಲದಲ್ಲಿ ಇಲ್ಲಿ ಶವ ದಹನ ಮಾಡಲು ಕಷ್ಟವಾಗುತ್ತಿತ್ತು. ಆದ್ದರಿಂದ ಗ್ರಾ.ಪಂ.ನಲ್ಲಿ ಸಭೆ ನಡೆಸಿ ಎನ್‌ಆರ್‌ಇಜಿ, ಗ್ರಾ.ಪಂ., ಸಂಘ ಸಂಸ್ಥೆಗಳು, ಊರವರ ಸಹಕಾರದಲ್ಲಿ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸ್ವತ್ಛತೆಗೆ ಹೆಚ್ಚಿನ ಆದ್ಯತೆ ಯನ್ನು ನೀಡಲಾಗುವುದು. ಶಾಸಕರು ಹಾಗೂ ಜಿ.ಪಂ.ನಿಂದ ಅನುದಾನ ಮಂಜೂರು ಮಾಡುವಂತೆ ವಿನಂತಿಸಲಾಗುವುದು.
– ರಾಮಣ್ಣ ಶೆಟ್ಟಿ ಅಗರಿ, ಅಧ್ಯಕ್ಷರು, ರುದ್ರಭೂಮಿ ಅಭಿವೃದ್ಧಿ ಸಮಿತಿ
5 ಲ.ರೂ. ಅನುದಾನ ಬೇಕಿದೆ
ಮಾದರಿ ರುದ್ರಭೂಮಿಯ ನೀಲಿ ನಕಾಶೆ ಯೋಜನೆ 20 ಲ.ರೂ.ಗಳಾಗಿದ್ದು ಈಗಾಗಲೇ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ 4.25 ಲ.ರೂ. ವೆಚ್ಚದ ಶ್ಮಶಾನ ಕಟ್ಟಡ, 6 ಲ.ರೂ. ವೆಚ್ಚದಲ್ಲಿ ರಸ್ತೆಗೆ ಕಾಂಕ್ರೀಟ್ ಕಾಮಗಾರಿ, ಭೂ ಸಮತಟ್ಟು ಮಾಡಲಾಗಿದೆ. 1.50 ಲ.ರೂ. ವೆಚ್ಚದಲ್ಲಿ ಶವ ದಹನದ ಬಗ್ಗೆ ಯಂತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿಯಿಂದ ನೀಡಿದ್ದಾರೆ. ತಾ.ಪಂ.ನಿಂದಲೂ ಅನುದಾನ ಲಭಿಸಿದೆ. ಇನ್ನೂ ಅನೇಕ ಕೆಲಸಗಳು ಬಾಕಿಯಿದ್ದು ಸುಮಾರು 5 ಲ.ರೂ. ಅನುದಾನ ಬೇಕಾಗಿದೆ. ಈ ಬಗ್ಗೆ ದೇಣಿಗೆಯನ್ನು ಸಂಗ್ರಹಿಸಿ ಅಭಿವೃದ್ಧಿಪಡಿಸಲು ಗ್ರಾ. ಪಂ. ಮತ್ತು ರುದ್ರಭೂಮಿ ಸಮಿತಿ ಸಭೆಯಲ್ಲಿ ನಿರ್ಣಯಿಸಿದೆ.
– ಸಂಜೀವ ನಾಯ್ಕ, ಅಭಿವೃದ್ಧಿ ಅಧಿಕಾರಿ, ಗ್ರಾ. ಪಂ. ಮುಂಡಾಜೆ
– ಗುರು ಮುಂಡಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!
B.C.Road: ಗರ್ಭಿಣಿ-ಬಾಲಕಿಗೆ ಹಲ್ಲೆ ಪ್ರಕರಣ: ರಾಜ್ಯ ಮಹಿಳಾ ಆಯೋಗಕ್ಕೆ ನಿಯೋಗ ದೂರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Belthangady: ಬೈಕ್ ಸವಾರ ಸಾವು ಪ್ರಕರಣ; ಸರಕಾರಿ ಬಸ್ ಚಾಲಕನಿಗೆ ಶಿಕ್ಷೆ;ದಂಡ
Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.