ಹಠ ಬಿಟ್ಟ ನಗರಸಭೆ: ಎಪಿಎಂಸಿ ರಸ್ತೆಗೆ ತೇಪೆ ಕಾರ್ಯ
Team Udayavani, Dec 8, 2017, 3:10 PM IST
ನಗರ : ನಗರಸಭೆ ಹಾಗೂ ಎಪಿಎಂಸಿ ನುಣುಚಿಕೊಳ್ಳುವ ಹೊಯ್ದಾಟದಲ್ಲಿ ಬಡವಾಗಿದ್ದ ಎಪಿಎಂಸಿ ರಸ್ತೆಯಲ್ಲಿನ ಹೊಂಡ ಗುಂಡಿಗಳಿಗೆ ಕಡೆಗೂ ನಗರಸಭೆ ಆಡಳಿತ ತೇಪೆ ಕಾರ್ಯ ನಡೆಸಿದೆ.
ರಸ್ತೆ ಯಾರಿಗೆ ಸೇರಿದ್ದು? ಮತ್ತು ಯಾರು ಅಭಿವೃದ್ಧಿಪಡಿಸಬೇಕು ಎಂದು ನಗರಸಭೆ ಆಡಳಿತ ಹಾಗೂ ಎಪಿಎಂಸಿ ಆಡಳಿತದ ಮಧ್ಯೆ ಹೊಯ್ದಾಟ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಹೊಂಡಗಳು ಹಾಗೆಯೇ ಬಾಕಿಯಾಗಿದ್ದವು. ಈ ಕುರಿತಂತೆ ಎರಡೂ ಆಡಳಿತಗಳು ಜಿಲ್ಲಾಧಿಕಾರಿಯವರೆಗೂ ದೂರು ನೀಡಿದ್ದರು. ನಗರಸಭೆ ಈ ಹಿಂದೆ ರಸ್ತೆಯ ಹೊಂಡ ಮುಚ್ಚುವ ಕಾಮಗಾರಿ, ಚರಂಡಿ ದುರಸ್ತಿ ಕಾಮಗಾರಿ ನಡೆಸಿತ್ತು. ಆದರೆ ಪೂರ್ಣ ಪ್ರಮಾಣದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಿರಲಿಲ್ಲ.
ಸುದಿನ ವರದಿ
ಹಲವು ವರ್ಷಗಳಿಂದ ರಸ್ತೆಯ ಹಕ್ಕು ದಾರರ ಕುರಿತಂತೆ ನಗರಸಭೆ ಹಾಗೂ ಎಪಿಎಂಸಿ ಆಡಳಿತದ ಮಧ್ಯೆ ಹೊಯ್ದಾಟ ನಡೆಯುತ್ತಿರುವುದರಿಂದ ರಸ್ತೆಯ ಸ್ಥಿತಿ ಅಧೋಗತಿಗೆ ತಲುಪಿರುವ ಹಾಗೂ ದಿನಂಪ್ರತಿ ಈ ರಸ್ತೆಯಲ್ಲಿ ಓಡಾಡುವ ವ್ಯಾಪಾರಸ್ಥರು, ಸಾರ್ವಜನಿಕರು, ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿರುವ ಕುರಿತು ಉದಯವಾಣಿಯ ಸುದಿನದಲ್ಲಿ ನಗರಸಭೆ -ಎಪಿಎಂಸಿ ಹೊಯ್ದಾಟದಲ್ಲಿ ಪ್ರಯಾಣಿಕರು ಹೈರಾಣು ಶೀರ್ಷಿಕೆಯಲ್ಲಿ ಸಚಿತ್ರ ವರದಿಯನ್ನು ಪ್ರಕಟಿಸಲಾಗಿತ್ತು. ಇದೀಗ ಕೊನೆಗೂ ನಗರಸಭೆ ಅನುದಾನ ವಿರಿಸಿ ಹೊಂಡಗಳನ್ನು ಡಾಮರು ಹಾಕಿ ಮುಚ್ಚುವ ಕಾರ್ಯ ನಡೆಸಿದೆ.
ಬೇಡಿಕೆಗೆ ಸ್ಪಂದನೆ
ಈ ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಎಪಿಎಂಸಿಯವರೇ ಮಾಡಬೇಕು. ನಗರ ವ್ಯಾಪ್ತಿಯ ಇತರ ಸಂಪರ್ಕ ರಸ್ತೆಗಳ ಅಭಿವೃದ್ಧಿ ಮಾಡುವ ಸಂದರ್ಭದಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಸಿದ್ದೇವೆ. ಇದು ಕೊನೆಯ ಬಾರಿಗೆ ಕಾಮಗಾರಿ ನಡೆಸಿದ್ದು, ಇನ್ನು ಎಪಿಎಂಸಿಯವರೇ ಮಾಡಬೇಕು ಎನ್ನುವುದು ನಗರಸಭೆಯ ವಾದ .
20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ
ನಗರಸಭೆಯ ವ್ಯಾಪ್ತಿಯ ವಿವಿಧ ರಸ್ತೆಗಳನ್ನು 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಜನರ ಬೇಡಿಕೆ ಇರುವುದರಿಂದ ಎಪಿಎಂಸಿ ರಸ್ತೆಯಲ್ಲೂ ಪ್ಯಾಚ್‌ವರ್ಕ್ ಕಾರ್ಯ ನಡೆಸಿದ್ದೇವೆ. ರಸ್ತೆ ಪೂರ್ಣ ಅಭಿವೃದ್ಧಿಗಾಗಿ ಹಾಗೂ ರಸ್ತೆಯ ಜವಾಬ್ದಾರಿ ತೆಗೆದುಕೊಳ್ಳಲು ಎಪಿಎಂಸಿ ಆಡಳಿತಕ್ಕೆ
ಸೂಚಿಸುವಂತೆ ಜಿಲ್ಲಾಧಿಕಾರಿಯವರಿಗೆ ಬರೆಯಲಿದ್ದೇವೆ.
– ಜಯಂತಿ ಬಲ್ನಾಡು ಅಧ್ಯಕ್ಷರು, ನಗರಸಭೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.