ಪುರಸಭೆ, ನಗರಸಭೆ ಚುನಾವಣೆಗೆ ಸಿದ್ಧತೆ !
Team Udayavani, May 20, 2018, 8:47 AM IST
ಪುತ್ತೂರು: ರಾಜ್ಯ ರಾಜಕೀಯ ತಲ್ಲಣಗಳ ನಡುವೆಯೇ ಪುರಸಭೆ, ನಗರಸಭೆ ಚುನಾವಣೆಗೆ ವೇದಿಕೆ ಸಿದ್ಧತೆ ನಡೆಯುತ್ತಿದೆ. ಮತದಾರರ ಪಟ್ಟಿ, ವಾರ್ಡ್ ವಿಂಗಡಣೆ ಮಾಡಿ, ಕರಡು ಮತದಾರರ ಪಟ್ಟಿ ತಯಾರಿಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ಹಾಗೂ ಉಳ್ಳಾಲ ನಗರ
ಸಭೆ, ಬಂಟ್ವಾಳ ಪುರಸಭೆಯ ಚುನಾವಣೆಗೆ ಸಂಬಂಧಪಟ್ಟಂತೆ ಆಯಾ ತಾಲೂಕಿನ ತಹಶೀಲ್ದಾರ್‌ಗೆ ಹೊಣೆ ನೀಡಿದ್ದು, ಜೂ.11ರೊಳಗೆ ಕರಡು ಮತ
ದಾರರ ಪಟ್ಟಿ ಪ್ರಕಟ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರ ಜತೆಗೆ ರಾಜ್ಯದ 32 ಸ್ಥಳೀಯಾಡಳಿತಗಳ ಚುನಾವಣೆಗೆ ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ. ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆಯಲ್ಲೇ ಪುರಸಭೆ- ನಗರಸಭೆ ಚುನಾವಣೆಯೂ ಸನಿಹದಲ್ಲೇ ಇದೆ ಎಂಬ ಸುಳಿವು ನೀಡಲಾಗಿತ್ತು. ಈಗ ಸ್ಥಳೀಯಾಡಳಿತ ಮತದಾನಕ್ಕೆ ವೇದಿಕೆ ಸಿದ್ಧ ಮಾಡಲಾಗಿದೆ. ಸೆ. 8ಕ್ಕೆ ಸ್ಥಳೀಯಾಡಳಿತದ ಐದು ವರ್ಷಗಳ ಅವಧಿ ಕೊನೆಯಾಗಲಿದೆ.
ಹೆಚ್ಚಿದ ವಾರ್ಡ್
ಹಿಂದಿನ ಆಡಳಿತಾವಧಿ ನಡುವೆಯೇ ಪುತ್ತೂರು ಹಾಗೂ ಉಳ್ಳಾಲ ನಗರಸಭೆಯಾಗಿ ಮೇಲ್ದರ್ಜೆಗೇರಿವೆ. 2013ರ ಸೆಪ್ಟಂಬರ್‌ನಲ್ಲಿ ಸ್ಥಳೀಯಾಡಳಿತ ಚುನಾವಣೆ ವೇಳೆ ಪುತ್ತೂರು ಹಾಗೂ ಉಳ್ಳಾಲ ಪುರಸಭೆಯಾಗಿತ್ತು. ನಗರಸಭೆಯಾಗಿ ಮೇಲ್ದರ್ಜೆಗೇರುವ ಸಂದರ್ಭ, ವಾರ್ಡ್ ವಿಸ್ತರಣೆ ಅಥವಾ ವಿಂಗಡಣೆಗೆ ಕ್ರಮ ಕೈಗೊಂಡಿರಲಿಲ್ಲ. ಈಗ ಚುನಾವಣೆ ಸನಿಹ ಬರುತ್ತಿದ್ದಂತೆ ವಾರ್ಡ್ ಗೊಂದಲಗಳಿಗೂ ಪರಿಹಾರ ಬೀಳಲಿದೆ. ಪುತ್ತೂರು ನಗರಸಭೆಯ 27 ವಾರ್ಡ್‌ಗಳನ್ನು 31ಕ್ಕೆ ಏರಿಸಲಾಗಿದೆ. ಉಳ್ಳಾಲದಲ್ಲೂ 27 ವಾರ್ಡ್‌ಗಳಿದ್ದು, 31ಕ್ಕೆ ಏರಲಿದೆ. 23 ವಾರ್ಡ್ ಹೊಂದಿರುವ ಬಂಟ್ವಾಳ ಪುರಸಭೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಒಂದೇ ಅವಧಿಗೆ
ನಾಲ್ವರು ಅಧ್ಯಕ್ಷರು ಕಳೆದ ಒಂದು ಅವಧಿಯಲ್ಲಿ ಪುತ್ತೂರು ನಗರಸಭೆ ನಾಲ್ಕು ಮಂದಿ ಅಧ್ಯಕ್ಷರನ್ನು ಕಂಡಿದೆ. ಈ ಐದು ವರ್ಷಗಳಲ್ಲಿ ರಾಜಕೀಯ ನಡೆಯಿಂದಲೇ ಪುತ್ತೂರು ನಗರಸಭೆ ಗುರುತಿಸಿ ಕೊಂಡಿತ್ತು. ಕಾಂಗ್ರೆಸ್‌ನ ಮಹಮ್ಮದಾಲಿ ಅಧ್ಯಕ್ಷತೆಗೆ ವಿರೋಧ ವ್ಯಕ್ತಪಡಿಸಿ ಅದೇ ಪಕ್ಷದ ವಾಣಿ ಶ್ರೀಧರ್ ಬಿಜೆಪಿಯ ಸಹಾಯ ಪಡೆದು ಅಧ್ಯಕ್ಷ ಪಟ್ಟ ಗಿಟ್ಟಿಸಿಕೊಂಡರು. ಇದು ವಿಪ್ ಉಲ್ಲಂಘನೆ ಪ್ರಕರಣದಡಿ ನ್ಯಾಯಾಲಯದ ಮೆಟ್ಟಿ
ಲೇರಿದ್ದು, ವಾಣಿ ಶ್ರೀಧರ್ ಅಧ್ಯಕ್ಷತೆ ಕಳೆದುಕೊಂಡರು. ಮತ್ತೂಮ್ಮೆ ನಡೆದ ಚುನಾವಣೆಯಲ್ಲಿ ಮಹಮ್ಮದಾಲಿ ಅವರಿಗೆ ಅದೇ ಪಕ್ಷದ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ವಿರೋಧವಾಗಿ ನಿಂತರು. ಬಿಜೆಪಿ ಬೆಂಬಲ ನೀಡಿತು. ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅಧ್ಯಕ್ಷರಾದರು. ವಿಪ್ ಉಲ್ಲಂಘನೆ ಅಡಿ ಅವರು ಅಧ್ಯಕ್ಷತೆ ಕಳೆದುಕೊಂಡಾಗ, ಉಪಾಧ್ಯಕ್ಷರಾಗಿದ್ದ ಬಿಜೆಪಿಯ ಜೀವಂಧರ್ ಜೈನ್ ಅಧ್ಯಕ್ಷರಾದರು. ಮುಂದೆ ಮೀಸಲಾತಿಯಡಿ ಅಧ್ಯಕ್ಷತೆಗೆ ಚುನಾವಣೆ ನಡೆದಾಗ, ಕಾಂಗ್ರೆಸ್‌ನ ಜಯಂತಿ ಬಲಾ°ಡು ಅಧ್ಯಕ್ಷರಾದರು.
ವೇಳಾಪಟ್ಟಿ
ಮೇ 20: ವಾರ್ಡ್‌ಗಳ ವಿಂಗಡಣೆ, ಮತದಾರರ ಗುರುತು ಚೀಟಿ ಸಿದ್ಧ
ಜೂನ್ 3: ಪ್ರತಿ ಮತದಾರರ ಮನೆಗೆ ಭೇಟಿ ನೀಡಿ, ಪಟ್ಟಿ ಸಿದ್ಧ
ಜೂನ್ 5: ಪ್ರಥಮ ಚೆಕ್‌ಲಿಸ್ಟ್ ತಯಾರಿ, ವಾರ್ಡ್‌ವಾರು ಪರಿಶೀಲನೆ
ಜೂನ್ 11: ಕರಡು ಮತದಾರರ ಪಟ್ಟಿ ಪ್ರಕಟ
ಜೂನ್ 17: ಕರಡು ಪಟ್ಟಿಗೆ ಆಕ್ಷೇಪಣೆಗಳ ಸ್ವೀಕಾರ
ಜೂನ್ 27: ಪಟ್ಟಿ ಅಂತಿಮ, ನಗರಸಭೆ ಅಥವಾ ಪುರಸಭೆಯ ಚಿತ್ರಣ ಲಭ್ಯ
ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಸ್ಥಳೀಯಾಡಳಿತದ ಪ್ರಾಥಮಿಕ ಮತದಾರರ ಪಟ್ಟಿ ಹಾಗೂ ವಾರ್ಡ್ ಪ್ರಕಾರ ಮತದಾರರ ಪಟ್ಟಿ ಸಿದ್ಧ ಪಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಪ್ರಾಥಮಿಕ ಕೆಲಸಗಳು ನಡೆಯುತ್ತಿವೆ. ಚುನಾವಣೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಪುತ್ತೂರು ನಗರಸಭೆಯ ವಾರ್ಡ್ ಸಂಖ್ಯೆ 31ಕ್ಕೆ ಏರಿದೆ.
– ಅನಂತಶಂಕರ, ತಹಶೀಲ್ದಾರ್, ಪುತ್ತೂರು
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.