ಕೊಲೆಗೆ ಯತ್ನ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
Team Udayavani, Jul 13, 2017, 3:45 AM IST
ಉಳ್ಳಾಲ: ಅಜಾದ್ ನಗರದಲ್ಲಿ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರುಅಪರಾಧ ಪತ್ತೆ ದಳದ (ಸಿಸಿಬಿ) ಪೊಲೀಸರು ಯಶಸ್ವಿಯಾಗಿದ್ದಾರೆ.
ಉಳ್ಳಾಲ ಮೇಲಂಗಡಿಯ ಜಲಾಲ್ ಯಾನೆ ಜಲಾಲುದ್ದೀನ್(28), ಕುಂಪಲ ಶಾಲೆ ಬಳಿಯ ಅರ್ಫಾನ್ ಯಾನೆ ಅಪ್ಪು(25), ಉಳ್ಳಾಲ ಟಿ.ಸಿ.ರೋಡಿನ ಜಾಫರ್ ಸಾದಿಕ್ (20), ಕೆ.ಸಿ.ರೋಡ್ ತಲಪಾಡಿಯ ಮುಝಂಬಿಲ್ (22) ಬಂಧಿತರು.
ಪ್ರಕರಣದ ವಿವರ
ಮಂಗಳವಾರ ಆಸ್ಟಿಮ್ ನಿತೇಶ್ ಮೊಂತೆರೋ ಅವರು ಉಳ್ಳಾಲ ಅಜಾದ್ ನಗರದ ಕಿರಿದಾದ ರಸ್ತೆಯಲ್ಲಿ ಅವರ ರಿಕ್ಷಾಟೆಂಪೋವನ್ನು ನಿಲ್ಲಿಸಿ ಟೆಂಪೋ ರಿಕ್ಷಾದಿಂದ ಮಣ್ಣಿನ ಲೋಡನ್ನು ಖಾಲಿ ಮಾಡುತ್ತಿದ್ದ ಸಮಯ ಅದೇ ರಸ್ತೆಯಿಂದಾಗಿ ಬಂದ ಕಪ್ಪು ಬಣ್ಣದ ಕಾರೊಂದರಲ್ಲಿ ನಾಲ್ವರು ವ್ಯಕ್ತಿಗಳು ಟೆಂಪೋ ರಿಕ್ಷಾವನ್ನು ರಸ್ತೆಯಿಂದ ತೆಗೆಯುವಂತೆ ಜೋರು ಮಾಡಿದ್ದರು.
ಅನಂತರ ರಿûಾಕ್ಕೆ ಅಡ್ಡ ನಿಂತು ಅವರಿಗೆ ಕೈಯಿಂದ ಹಲ್ಲೆ ನಡೆಸಿರುವುದಲ್ಲದೇ ಅವರ ಕಾರಿನ ಸೀಟಿನಲ್ಲಿದ್ದವನು ಕಾರಿನಿಂದ ಚೂರಿಯೊಂದನ್ನು ತೆಗೆದುಕೊಂಡು ಬಂದು ಅಸ್ಟಿಮ್ ನಿತೇಶ್ ಮೊಂತೆರೋ ಅವರಿಗೆ ಚೂರಿಯಿಂದ ಕೈಗೆ ಇರಿದು, ಅನಂತರ ಎದೆಗೆ ಇರಿಯಲು ಪ್ರಯತ್ನಿಸಿದ ಸಮಯ ಅಸ್ಟಿಮ್ ನಿತೇಶ್ ಮೊಂತೆರೋ ಅವರು ಅವರಿಂದ ಓಡಿ ತಪ್ಪಿಸಿಕೊಂಡಿದ್ದರು. ಗಾಯಗೊಂಡ ಅಸ್ಟಿಮ್ ನಿತೇಶ್ ಮೊಂತೆರೋಅವರು ಉಳ್ಳಾಲದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿಮಂಗಳವಾರ ಪ್ರಕರಣ ದಾಖಲಾಗಿತ್ತು.ಕೃತ್ಯಕ್ಕೆ ಬಳಸಿದ್ದ ಕಪ್ಪು ಬಣ್ಣದ ಆಲ್ಟೋ ಕಾರು ಹಾಗೂ ಪರಾರಿಯಾಗಲು ಯತ್ನಿಸಿದ್ದ ಇನ್ನೊಂದು ಆಲ್ಟೋ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಬೇರೆ ಕಾರಿನಲ್ಲಿ ಮಡಿಕೇರಿ ಕಡೆಗೆ ಪರಾರಿಯಾಗುವ ಸಂದರ್ಭ ಸುಳ್ಯ ಸಮೀಪ ಕಾರು ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಕಾರನ್ನು ಗ್ಯಾರೇಜಿನಲ್ಲಿರಿಸಿದ್ದರು.
ಸಂದರ್ಭ ಮಾಹತಿ ಪಡೆದ ಸುಳ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು.ಬಳಿಕ ಆರೋಪಿಗಳನ್ನು ಸಿಸಿಬಿ ಪೊಲೀಸರಿಗೆ ಹಸ್ತಾಃಂತರಿಸಲಾಯಿತು.
ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಹನುಮಂತರಾಯ ಮತ್ತು ಎಸಿಪಿ ಸಿಸಿಬಿ ಬಿ. ವೆಲೆಂಟೈನ್ ಡಿ’ಸೋಜಾ ರವರ ಮಾರ್ಗದರ್ಶನ ನೀಡಿದ್ದರು.
ಅಪರಾಧ ಪತ್ತೆ ದಳದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬಂದಿ ಆರೋಪಿಗಳ ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.