ಅಯ್ಯಪ್ಪ ಭಕ್ತರಿಗೆ ಆತಿಥ್ಯ ನೀಡಿದ ಮುಸ್ಲಿಂ ಉದ್ಯಮಿ!
Team Udayavani, Jan 2, 2019, 5:58 AM IST
ಈಶ್ವರಮಂಗಲ: ಕರ್ನಾಟಕ ಗಡಿಭಾಗದ ಈಶ್ವರಮಂಗಲ ಮೂಲಕ ಕೇರಳದ ಶಬರಿಮಲೆಗೆ ತೆರಳುತ್ತಿರುವ ಯಾತ್ರಿಗಳು ಸಹಾಯ ಕೇಳಿದಾಗ ಈಶ್ವರ ಮಂಗಲ ಮೇನಾಲ ಅಬ್ದುಲ್ ರಹಿಮಾನ್ ಅವರು ಎರಡು ದಿನಗಳ ಕಾಲ ತಮ್ಮ ಮನೆಯನ್ನೇ ಬಿಟ್ಟು ಕೊಟ್ಟು ಸೌಹಾರ್ದಕ್ಕೆ ಸಾಕ್ಷಿಯಾದ ಘಟನೆ ನಡೆದಿದೆ.
ಗಡಿಭಾಗದ ಈಶ್ವರಮಂಗಲದಲ್ಲಿ ದಶಕದ ಹಿಂದೆ ಎರಡು ಗುಂಪುಗಳ ನಡುವೆ ವೈಷಮ್ಯ ಉಂಟಾಗಿ, ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಿತ್ತು. ಅತೀ ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಮುಂದುವರಿದಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಮತ್ತೆ ಸೌಹಾರ್ದ ಚಿಗುರಿದೆ. ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶವಾಗಿಲ್ಲ. ಅಲ್ಲದೆ, ಮುಸ್ಲಿಂ ಉದ್ಯಮಿಯೊಬ್ಬರು ತಮ್ಮ ಮನೆಯನ್ನೇ ಶಬರಿಮಲೆ ಯಾತ್ರಿಗಳಿಗೆ ಉಳಿದುಕೊಳ್ಳಲು ಬಿಟ್ಟುಕೊಟ್ಟಿರುವುದು ಸೌಹಾರ್ದವನ್ನು ಮತ್ತೊಂದು ಮಜಲಿಗೆ ಎತ್ತರಿಸಿದೆ.
ಪರೋಪಕಾರಿ
ಕಷ್ಟದಲ್ಲಿದ್ದವರಿಗೆ ತನ್ನಿಂದ ಆಗುವಷ್ಟು ಸಹಾಯ ಮಾಡುವ ಮನಸ್ಸು ಅಬ್ದುಲ್ ರಹಿಮಾನ್ ಅವರದು. ಮೇನಾಲದ ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್ ನಿರ್ದೇಶಕರಾಗಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ರಂಗದ ನೇತಾರರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ.
ಅಪರಿಚಿತರನ್ನು ಸಂಶಯದ ದೃಷ್ಟಿಯಿಂದಲೇ ನೋಡುವ ಈ ದಿನಗಳಲ್ಲಿ ಅನ್ಯ ಕೋಮಿನ ವ್ಯಕ್ತಿಯೊಬ್ಬರು ಎರಡು ದಿನಗಳ ಕಾಲ ನಮ್ಮ ತಂಡಕ್ಕೆ ಉಳಿದುಕೊಳ್ಳಲು ತಮ್ಮ ಮನೆಯನ್ನೇ ಬಿಟ್ಟುಕೊಟ್ಟರು. ನಮ್ಮ ಆವಶ್ಯಕತೆಗಳಿಗೆ ಸ್ಪಂದಿಸಿದರು. ದೀರ್ಘ ಪ್ರಯಾಣದಿಂದ ದಣಿದಿದ್ದ ನಮಗೆ ಉತ್ತಮ ವಿಶ್ರಾಂತಿಯ ಅಗತ್ಯವಿತ್ತು. ಅವರು ನಮಗೆ ದೇವರಂತೆ ನೆರವಾದರು. ಇಂತಹ ವ್ಯಕ್ತಿಗಳಿಂದಲೇ ನಾಡಿನಲ್ಲಿ ಸೌಹಾರ್ದ ನೆಲೆ ನಿಂತಿದೆ. ದೇವರು ಅವರಿಗೆ, ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಅಯ್ಯುಪ್ಪ ಭಕ್ತರು ಭಾವಪರವಶರಾಗಿ ನುಡಿದರು.
ತೆಲಂಗಾಣದ ತಂಡ
ತೆಲಂಗಾಣ ರಾಜ್ಯದ ರಂಗಾರೆಡ್ಡಿ ಎಂಬ ಊರಿನಿಂದ ಬೆಂಗಳೂರು ಮಾರ್ಗವಾಗಿ ಧರ್ಮಸ್ಥಳ ಹಾಗೂ ಇತರ ಕ್ಷೇತ್ರಗಳನ್ನು ಸಂದರ್ಶನ ಮಾಡಿ ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ಸುಮಾರು 25 ಅಯ್ಯಪ್ಪ ವ್ರತಧಾರಿಗಳಿದ್ದ ತಂಡಕ್ಕೆ ಉಳಿದುಕೊಳ್ಳಲು ಹಾಗೂ ಸ್ನಾನ – ಶೌಚಾಲಯಕ್ಕೆ ವ್ಯವಸ್ಥೆ ಇರಲಿಲ್ಲ. ಯಾತ್ರಿಗಳ ತಂಡದ ಗುರು ಸ್ವಾಮಿ ಎಷ್ಟು ಹುಡುಕಾಡಿದರೂ ವಾಸ್ತವ್ಯಕ್ಕೆ ಮನೆ ಅಥವಾ ಕೊಠಡಿಗಳು ಸಿಗದೆ ಸಮಸ್ಯೆಯಾಗಿತ್ತು. ಇದನ್ನರಿತ ಈಶ್ವರ ಮಂಗಲದ ಉದ್ಯಮಿ ಅಬ್ದುಲ್ ರಹಿಮಾನ್ ಅವರು ಹಿಂದೆ-ಮುಂದೆ ಯೋಚಿಸದೆ, ಪರಿಚ ಯವೇ ಇಲ್ಲದ ತಂಡಕ್ಕೆ 2 ದಿನಗಳ ಕಾಲ ಮನೆಯನ್ನು ಬಿಟ್ಟುಕೊಟ್ಟಿದ್ದಲ್ಲದೆ, ಅವರ ಆವಶ್ಯಕತೆಗಳನ್ನೂ ಪೂರೈಸಿದರು. ಇವರ ಆತಿಥ್ಯ ಸ್ವೀಕರಿಸಿದ ಭಕ್ತರ ತಂಡ ಸೋಮವಾರ ಯಾತ್ರೆ ಮುಂದುವರಿಸಿತು.
ಮಾಧವ ನಾಯಕ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.