ಮೈ ಬೀಟ್ ಮೈ ಪ್ರೈಡ್: ಹೊಸ ಪೊಲೀಸ್ ಬೀಟ್ ವ್ಯವಸ್ಥೆಗೆ ಚಾಲನೆ
Team Udayavani, Aug 17, 2019, 5:29 AM IST
ಮಹಾನಗರ: ಇದುವರೆಗೆ ಪೊಲೀಸ್ ಸಿಬಂದಿ (ಕಾನ್ಸ್‌ಟೆಬಲ್) ಮನೆ ಮನೆಗೆ ಗಸ್ತು ತಿರುಗುವ ವ್ಯವಸ್ಥೆ (ಬೀಟ್) ಇತ್ತು. ಇನ್ನು ಮುಂದೆ ನಾಗರಿಕರ ಮನೆ ಬಾಗಿಲಿಗೆ ಪೊಲೀಸ್ ಅಧಿಕಾರಿಗಳು ಬೀಟ್ ನಡೆಸಲಿದ್ದಾರೆ.
ಇಂಥದ್ದೊಂದು ಹೊಸ ಕಲ್ಪನೆಗೆ ಮಂಗಳೂರಿನಲ್ಲಿ ಮೂರ್ತರೂಪ ಸಿಕ್ಕಿದೆ. ನೂತನ ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ಅಧಿಕಾರ ವಹಿಸಿಕೊಂಡ ವಾರದೊಳಗೆ ಹೊಸ ಬೀಟ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಈ ಹೊಸ ಬೀಟ್ ವ್ಯವಸ್ಥೆಯನ್ನು ‘ಮೈ ಬೀಟ್ ಮೈ ಪ್ರೈಡ್’ (ನನ್ನ ಗಸ್ತು ನನ್ನ ಹೆಮ್ಮೆ) ಎಂಬುದಾಗಿ ಹೆಸರಿಸಿದ್ದಾರೆ. ಹೆಸರೇ ಸೂಚಿ ಸುವಂತೆ ಈ ಬೀಟ್‌ನಲ್ಲಿ ಪೊಲೀಸರು ಮತ್ತು ನಾಗರಿಕರು ಹೆಮ್ಮೆಯಿಂದ ತಮ್ಮನ್ನು ಪಾಲ್ಗೊಳ್ಳಲಿದ್ದಾರೆ.
ನಾಗರಿಕರ ಪಾಲ್ಗೊಳ್ಳುವಿಕೆ
ಪೊಲೀಸ್ ಬೀಟ್ ವ್ಯವಸ್ಥೆ ಹೊಸದಲ್ಲ, ಆದರೆ ಈ ವ್ಯವಸ್ಥೆಯಲ್ಲಿ ಮುಂದೆ ಕೇವಲ ಪೊಲೀಸರು ಮಾತ್ರವಲ್ಲ ನಾಗರಿಕರು ಕೂಡ ಬೀಟ್ ವ್ಯವಸ್ಥೆಯಲ್ಲಿ ತೊಡಗಿ ಸಿಕೊಳ್ಳುವರು. ಪೊಲೀಸರ ಬೀಟ್‌ಗೆ ನಾಗರಿಕರು ಸಾಥ್ ನೀಡುತ್ತಾರೆ. ಪೊಲೀಸ್ ಆಯುಕ್ತರಿಂದ ತೊಡಗಿ ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ, ಎಎಸ್‌ಐ ಕೂಡ ಬೀಟ್ ನಡೆಸಲಿದ್ದಾರೆ.
ಹಗಲು ಹೊತ್ತು ನಡೆಯುವ ಈ ‘ಮೈ ಬೀಟ್ ಮೈ ಪ್ರೈಡ್’ ವ್ಯವಸ್ಥೆಗೆ ಪೊಲೀಸ್ ಆಯುಕ್ತ ಡಾ| ಪಿ.ಎಸ್. ಹರ್ಷ ಅವರು ಶುಕ್ರವಾರ ಚಾಲನೆ ನೀಡಿ ದರು. ಈ ಹೊಸ ವ್ಯವಸ್ಥೆಯಲ್ಲಿ ಸ್ವತಃ ಪೊಲೀಸ್ ಆಯುಕ್ತರು ಕೂಡ ಬೀಟ್ ಪೊಲೀಸರ ಜತೆಗೆ ಸುತ್ತಾಡಲಿ ದ್ದಾರೆ. ಈ ಮೂಲಕ ನಾಗರಿಕರ ಬೇಕು, ಬೇಡಗಳಿಗೆ ಸ್ಪಂದಿಸಲಿದ್ದಾರೆ.
ಸಂಬಂಧ ವೃದ್ಧಿಗೆ ಪೂರಕ
ಪೊಲೀಸ್, ಜನರ ನಡುವಿನ ಸಂಬಂಧ ವೃದ್ಧಿಸಲು, ತ್ವರಿತವಾಗಿ ಪೊಲೀಸ್ ಸೇವೆಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.
ನಗರವನ್ನು ಚಿಕ್ಕದಾದ ಬೀಟ್‌ಗಳನ್ನಾಗಿ ವಿಂಗಡಿಸಿ ಪ್ರತಿ ಯೊಂದು ಬೀಟ್‌ಗೆ ಒಬ್ಬ ಕಾನ್‌ಸ್ಟೆಬಲ್ ಅಥವಾ ಹೆಡ್ ಕಾನ್‌ಸ್ಟೆಬಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಪ್ರತಿ ಬೀಟ್‌ಗೆ ಒಂದು ವಾಟ್ಸಪ್ ಗ್ರೂಪ್ ರಚಿಸಿ ಅದರಲ್ಲಿ ಸಮಾಜದ ಎಲ್ಲ ವರ್ಗ, ಜಾತಿಯವರನ್ನು ಸೇರಿಸಿಕೊಂಡು ಪ್ರತಿದಿನ ಅವರಿಂದ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಡಾ| ಹರ್ಷ ತಿಳಿಸಿದರು.
ತಿಂಗಳಿಗೊಂದು ಬಾರಿ ಆಯುಕ್ತರಿಂದ ಪಿಎಸ್‌ಐ ತನಕದ ಅಧಿಕಾರಿಗಳು ಬೀಟ್ ಕರ್ತವ್ಯ ನಿರ್ವಹಿಸುತ್ತಾರೆ. ಯಾರಿಗೆ ಎಲ್ಲೆಲ್ಲಿ ಬೀಟ್ ಎಂಬುದನ್ನು ಹಿರಿಯ ಅಧಿಕಾರಿಗಳು ನಿಗದಿ ಪಡಿಸುತ್ತಾರೆ. ಅಧಿಕಾರಿಗಳು ಬೀಟ್ ಮಾಡುವುದರಿಂದ ಜನರ ಸಮಸ್ಯೆ ನೇರ ಪರಿಚಯವಾಗುತ್ತದೆ. ಕಂಟ್ರೋಲ್ ರೂಂನಲ್ಲಿ ಇದನ್ನು ನಿರ್ವಹಣೆ ಮಾಡಲಾಗುತ್ತದೆ. ಕಾನ್‌ಸ್ಪೆಬಲ್ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದಾಗ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥ ಪಡಿಸಲು ಇದರಿಂದ ಸಾಧ್ಯವಾಗಲಿದೆ ಎಂದರು.
ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ವೈದ್ಯ ಡಾ| ಉದಯ್, ನಿವೃತ್ತ ಡಿವೈಎಸ್ಪಿ ಟಿ.ಸಿ.ಎಂ ಶರೀಫ್, ವಾಮಂಜೂರಿನ ಸಮಾಜ ಸೇವಾ ಕಾರ್ಯಕರ್ತ ಸಿರಿಲ್ ಫೆರ್ನಾಂಡಿಸ್ ಮಾತನಾಡಿ ಹೊಸ ಬೀಟ್ ವ್ಯವಸ್ಥೆಗು ಶುಭ ಹಾರೈಸಿದರು. ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೀ ಗಣೇಶ್ ಉಪಸ್ಥಿತರಿದ್ದರು.
ಮಂಗಳೂರು ದಕ್ಷಿಣ ಎಸಿಪಿ ಕೋದಂಡ ರಾಮ ಸ್ವಾಗತಿಸಿದರು. ದಕ್ಷಿಣ ವಿಭಾಗದ ಟ್ರಾಫಿಕ್ ಇನ್‌ಸ್ಪೆಕ್ಟರ್ ಗುರುದತ್ ಕಾಮತ್ ನಿರ್ವಹಿಸಿದರು.
ಮನೆ ಬಾಗಿಲಿಗೆ ಪೊಲೀಸ್ ಸೇವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.