ಚಾಲಕನ ಮಕ್ಕಳಾಟಕ್ಕೆ ನನ್ನ ಮಕ್ಕಳು ಅಮ್ಮನನ್ನು ಕಳಕೊಂಡರು!
Team Udayavani, Mar 16, 2018, 11:59 AM IST
ಉಪ್ಪಿನಂಗಡಿ: ಬುಧವಾರ ಮಾಣಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಅಸುನೀಗಿದ ಉಪ್ಪಿನಂಗಡಿಯ ರಾಮನಗರ ನಿವಾಸಿ ದಿವ್ಯಾ ಪ್ರಭು (40) ಅವರ ಸಾವಿಗೆ ಚಾಲಕನ ಮಕ್ಕಳಾಟಿಕೆಯೇ ಕಾರಣ. ಸತತ ಮನವಿಗೂ ಸ್ಪಂದಿಸದೆ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿ ನನ್ನ ಮಕ್ಕಳ ಅಮ್ಮನನ್ನು ಕಸಿದುಕೊಂಡ ಎಂದು ಮೃತರ ಪತಿ ಮಹೇಶ್ ಪ್ರಭು ದುಃಖೀಸುತ್ತಿದ್ದಾರೆ.
ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನನ್ನ ಅಣ್ಣನನ್ನು ನೋಡಲು ಉಪ್ಪಿನಂಗಡಿಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ಸಾಯಂಕಾಲ 5.05 ಗಂಟೆಗೆ ಉಪ್ಪಿನಂಗಡಿಯಿಂದ ಹೊರಟ ಬಸ್ಸನ್ನು ಚಾಲಕ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ. ಅಪಾಯದ ಸೂಚನೆ ದೊರೆತು ನಾನು ಮೂರು ಬಾರಿ ಚಾಲಕನಲ್ಲಿ ಜಾಗ ರೂಕವಾಗಿ ಚಲಾ ಯಿಸುವಂತೆ ಮನವಿ ಮಾಡಿದ್ದೆ. ಆದರೂ ಕ್ಯಾರೇ ಅನ್ನದ ಆತ ಹಿಂದಿನಿಂದ ಬರುತ್ತಿದ್ದ ವಾಹನದ ಜತೆ ಪೈಪೋಟಿಗಿಳಿದು 5.25ರ ವೇಳೆಗೆ ಅಪಘಾತ ನಡೆಸಿ ನನ್ನ ಪತ್ನಿಯ ಸಾವಿಗೆ ಕಾರಣನಾದ ಎಂದು ಅವರು ಹೇಳಿದ್ದಾರೆ.
ಪರಿಹಾರಧನ ನಿರಾಕರಣೆ
ದಿವ್ಯಾ ಪ್ರಭು ಅವರ ರಾಮನಗರದ ಮನೆಗೆ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅಂತಿಮ ದರ್ಶನ ಪಡೆದು 15 ಸಾ. ರೂ. ಪರಿಹಾರ ವಿತರಿಸಲು ಮುಂದಾದರು. ಅದನ್ನು ಸ್ವೀಕರಿಸಲು ನಿರಾಕರಿಸಿದ ಮಹೇಶ್ ಪ್ರಭು, ಪತ್ನಿಯ ಸಾವಿಗೆ ಕಾರಣನಾದ ಚಾಲ ಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
ದಿವ್ಯಾ ಅವರ ಇಬ್ಬರು ಗಂಡು ಮಕ್ಕಳ ಪೈಕಿ ಕೊನೆಯವನಾದ ಯಶಸ್‌ನ ಬ್ರಹ್ಮೋ ಪದೇಶ ಮಾರ್ಚ್ 4ರಂದು ಉಪ್ಪಿನಂಗಡಿಯಲ್ಲಿ ನಡೆದಿತ್ತು. ಅಂದು ನಕ್ಕು ನಲಿದಿದ್ದ ಅವರು ಬಸ್ಸಿನಲ್ಲಿದ್ದ ಮಗನ ಕಣ್ಣೆದುರಲ್ಲೇ ಸಾವನ್ನಪ್ಪಿರುವುದು 8 ವರ್ಷದ ಎಳೆಯ ಜೀವವನ್ನು ಕಂಗಾಲಾಗಿಸಿದೆ. ಮಹೇಶ್ ಅವರು ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದು, ಮಕ್ಕಳು ತಾಯಿ ಜತೆಯಲ್ಲೇ ಇರುತ್ತಿದ್ದರು. ಪುಟ್ಟ ಮಕ್ಕಳು ತಾಯಿ ಶವ ಮುಂದೆ ರೋದಿಸುತ್ತಿದ್ದುದು ಎಂಥ ಕಲ್ಲೆದೆಯನ್ನೂ ಕರಗಿಸುವಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.