ಮೈಸೂರು ವಿಭಾಗ ಮಟ್ಟದ ಯೋಗಾಸನ
Team Udayavani, Oct 11, 2017, 12:40 PM IST
ಉಪ್ಪಿನಂಗಡಿ: ಆರೋಗ್ಯವಿದ್ದಾಗ ಮಾತ್ರ ಬದುಕನ್ನು ಗೆಲ್ಲಲು ಸಾಧ್ಯ. ಯೋಗದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಕನಸು ನಮ್ಮದಾಗಲಿ ಎಂದು ಯೋಗ ಸಂಗಮ-2017ರ ಅಧ್ಯಕ್ಷ ಡಾ| ರಾಜಾರಾಮ್ ಕೆ.ಬಿ. ತಿಳಿಸಿದರು.
ಉಪ್ಪಿನಂಗಡಿಯ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಬಾಲಕ- ಬಾಲಕಿಯರ ಯೋಗಾಸನ ಸ್ಪರ್ಧೆ’ಯೋಗ ಸಂಗಮ- 2017’ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯೋಗಸಂಗಮ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ| ರಾಜಾರಾಮ್ ಕೆ.ಬಿ. ದಂಪತಿಯನ್ನು ಸಮ್ಮಾನಿಸಿ, ಗೌರವಿಸಲಾಯಿತು.
ವಿಜೇತರ ವಿವರ
14ರ ವಯೋಮಿತಿ ಬಾಲಕರ ಯೋಗಾಸನ: ಮೈಸೂರಿನ ಬೆಳವಾಡಿ ಎಸ್‌ವಿಇಐ ಶಾಲೆಯ ಲಿಖೀತ್ ಕುಮಾರ್
ಕೆ., ನಂಜನಗೂಡಿನ ರೋಟರಿ ಶಾಲೆಯ ಮೋಹನ ಎನ್.ಆರ್., ಉಡುಪಿ ಮೆಟ್ಟಿನಹೊಳೆ ಸ.ಹಿ.ಪ್ರಾ. ಶಾಲೆಯ
ಸುದರ್ಶನ ಮೊದಲ ಮೂರು ಸ್ಥಾನಗಳಿಸಿದ್ದಾರೆ.
ರಿದಮಿಕ್ ಯೋಗ: ವೀರಮಂಗಲ ಸ.ಹಿ.ಪ್ರಾ. ಶಾಲೆಯ ಎ.ಜಿ. ಕೌಶಿಕ್, ಚಿಕ್ಕಮಗಳೂರಿನ ಪೂರ್ಣಪ್ರಜ್ಞಾ ಶಿಕ್ಷಣ ಕೇಂದ್ರದ ಸಮೃದ್ಧ್ ಕೆ.
ಆರ್ಟಿಸ್ಟಿಕ್ ಯೋಗ: ಮೈಸೂರು ಹಿನಕಲ್‌ನ ವಿಜಯ ಶಿಕ್ಷಣ ಸಂಸ್ಥೆಯ ಶಶಾಂಕ್ ಕೆ.ಜಿ., ಉಡುಪಿಯ ಸಪಪೂ ಕಾಲೇಜಿನ ಕಿರಣ್, ಬಂಟ್ವಾಳ ವಾಮದಪದವಿನ ಕೊಯಿಲದ ಎಂ.ಪಿ.ಎಸ್.
ಶಾಲೆಯ ಲಿಖಿತ್.
14ರ ವಯೋಮಿತಿ ಬಾಲಕಿಯರ ಯೋಗಾಸನ ಸ್ಪರ್ಧೆ: ಮೂಡಬಿದಿರೆ ಆಳ್ವಾಸ್‌ನ ಅನನ್ಯಾ ಸಂಬಯ್ಯ ಹಿರೇಮಠ್ , ಮೈಸೂರು ಸದ್ವಿದ್ಯಾ ಪ್ರೌಢಶಾಲೆಯ ಮೋನಿಷಾ ಎಸ್.ಎ., ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಶ್ರೇಯಾ.
ರಿದಮಿಕ್ ಯೋಗ: ಚಿಕ್ಕಮಗಳೂರಿನ ಕಡೂರು ಹೈವೆ ಇಂಗ್ಲೀಷ್ ಮೀಡಿಯಂ ಶಾಲೆಯ ಕೃಪಾ ಎಸ್.ಪಿ., ಕಿನ್ನಿಕಂಬಳದ ಬೆಥನಿ ಹಿ.ಪ್ರಾ.ಶಾಲೆಯ ಶಿಫಾಲಿ ವಿ., ಉಡುಪಿ ಶಿರೂರು ಸ.ಹಿ.ಪ್ರಾ. ಶಾಲೆಯ ನಿಶಾ.
ಆರ್ಟಿಸ್ಟಿಕ್ ಯೋಗ: ನರಿಮೊಗರಿನಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಶಿಲ್ಪಾ ಎಸ್.ಎ., ಉಡುಪಿ ಶಿರೂರಿನ
ಸ.ಹಿ.ಪ್ರಾ. ಶಾಲೆಯ ನಿಶಾ, ಮೈಸೂರಿನ ರೋಟರಿ ಪ್ರೌಢಶಾಲೆಯ ಅಕ್ಷತಾ ಎಲ್.
17ರ ವಯೋಮಿತಿ ಬಾಲಕರ ಯೋಗಾಸನ ಸ್ಪರ್ಧೆ: ಮೂಡಬಿದಿರೆ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ
ಪವನ್ ಈಶ್ವರ್ ನಾಗತನೆ, ಕುಂದಾಪುರ ಉಪ್ಪುಂದದ ಜಿ.ಪಿ.ಯು.ಸಿ.ಯ ಸಾಗರ್ ಎಂ., ಹಾಸನದ ಸಂತ ಜೊಸೇಫ್ ಪ್ರೌಢ ಶಾಲೆಯ ಸೈಯ್ಯದ್ ತೌಸೀಪ್ ಪಾಷ.
ರಿದಮಿಕ ಯೋಗ: ನಂಜನಗೂಡು ರೋಟರಿ ಶಾಲೆಯ ಸುಜನ್ ಆರ್., ಮೂಡಬಿದಿರೆ ಆಳ್ವಾಸ್‌ನ ಅಮೋಘಸ್ವಾಮಿ ಸಂಭಯ್ಯಹಿರೇಮಠ, ಮೀಯಾರಿನ ಮೊರಾರ್ಜಿ ದೇಸಾಯಿ
ಶಾಲೆಯ ಅದೀಶ್ ಎಸ್. ಪೂಜಾರಿ.
ಆರ್ಟಿಸ್ಟಿಕ್ ಯೋಗ: ಮೈಸೂರಿನ ಸುತ್ತೂರು ಜೆಎಸ್‌ಎಸ್ ಪ್ರೌಢಶಾಲೆಯ ಭರತ್ ಪಿ.ಎಸ್., ಬಂಟ್ವಾಳದ ವಾಮದ
ಪದವು ಶಾಲೆಯ ಚೇತನ್, ಉಪ್ಪುಂದ ಸರಕಾರಿ ಪ್ರೌಢಶಾಲೆಯ ಸುದೀಪ್.
17ರ ವಯೋಮಿತಿ ಬಾಲಕಿಯರ ಯೋಗಾಸನ: ಮೂಡಬಿದಿರೆ ಆಳ್ವಾಸ್‌ನ ನಿರ್ಮಲಾ ಎಸ್.ಕೆ., ಪ್ರಿಯಾಂಕ ಬಸವ
ರಾಜ್, ಸಾಂದೀಪನಿಯ ಪ್ರಣಮ್ಯಾ.
ರಿದಮಿಕ್ ಯೋಗ: ಆಳ್ವಾಸ್‌ನ ಭಾರತೀ ಶಿವಾನಂದ ನಾಯಕ್, ಮೈಸೂರಿನ ಭಾರತೀಯ ವಿದ್ಯಾಭವನದ
ಮೋನಿಷಾ ಸಿ., ಕಡೂರಿನ ಹೈವೇ ಆಂಗ್ಲ ಮಾಧ್ಯಮ ಶಾಲೆಯ ಅನನ್ಯಾ ಬಿ.ಜಿ.
ಆರ್ಟಿಸ್ಟಿಕ್ ಯೋಗ: ಆಳ್ವಾಸ್‌ನ ರೂಪಾ ಈಶ್ವಪ್ಪ ಸಿದ್ನಾಳ, ಹೆಬ್ರಿ ಅಮೃತ ಭಾರತಿಯ ನಿಧಿ ಜಿ., ಮೈಸೂರಿನ ಸಾವಿತ್ರಿ
ಕಾನ್ವೆಂಟ್‌ನ ರಹೀನಾ ಸುಲ್ತಾನಾ.
ಯೋಗ ಕುಮಾರ, ಕುಮಾರಿ ಪ್ರಶಸ್ತಿ
ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಬಾಲಕ-
ಬಾಲಕಿಯರ ಯೋಗಾಸನ ಸ್ಪರ್ಧೆಯ 14 ಹಾಗೂ 17ರ ವಯೋಮಿತಿಯ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಗಳಿಸಿದ್ದು, ಮೂಡಬಿದಿರೆ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪವನ್ ಈಶ್ವರ್ ನಾಗತನೆ ‘ಯೋಗ ಕುಮಾರ’ ಹಾಗೂ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ನಿರ್ಮಲಾ ಎಸ್.ಕೆ. ‘ಯೋಗ ಕುಮಾರಿ’ ಪ್ರಶಸ್ತಿ ಪಡೆದರು. 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮೈಸೂರು ಜಿಲ್ಲೆ ತಂಡ ಪ್ರಶಸ್ತಿ ಪಡೆದರೆ, ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಹಾಗೂ 17ರ ವಯೋಮಿತಿಯ ಬಾಲಕರು ಹಾಗೂ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಶಸ್ತಿ ಗೆದ್ದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.