ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!
ಘೋಷಣೆಯಾಗಿ 5 ವರ್ಷಗಳಾದರೂ ಪೂರ್ಣಗೊಳ್ಳದ ಟೆಂಡರ್
Team Udayavani, Jan 22, 2022, 8:10 AM IST
ಮಂಗಳೂರು: ನೈಋತ್ವ ರೈಲ್ವೇ ವಲಯದ ಮೈಸೂರು-ಮಂಗಳೂರು ರೈಲು ಮಾರ್ಗದ ವಿದ್ಯುದೀಕರಣ ಯೋಜನೆ ಬಜೆಟ್‌ನಲ್ಲಿ ಪ್ರಕಟಗೊಂಡು ಐದು ವರ್ಷಗಳಾದರೂ ಇನ್ನೂ ಟೆಂಡರ್ ಹಂತದಿಂದ ಮೇಲೇರಿಲ್ಲ.
ಮಂಗಳೂರು-ಬೆಂಗಳೂರು ನಡುವಣ ರೈಲು ಪ್ರಯಾಣದ ಅವಧಿ ದೀರ್ಘ ವಾಗಿದ್ದು, ಕಡಿಮೆಗೊಳಿಸುವ ನಿಟ್ಟಿನಲ್ಲಿ ಮಾರ್ಗವನ್ನು ವಿದ್ಯುದೀಕರಿಸಬೇಕು ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ 2017ರ ಬಜೆಟ್‌ನಲ್ಲಿ ಈ ಯೋಜನೆ ಪ್ರಕಟಿಸಲಾಗಿತ್ತು. ಮೈಸೂರು-ಹಾಸನ-ಮಂಗಳೂರು ಮಧ್ಯೆ 347 ಕಿ.ಮೀ. ವಿದ್ಯುದೀಕರಣಕ್ಕೆ 461.23 ಕೋಟಿ ರೂ. ಅಂದಾಜಿಸಲಾಗಿತ್ತು.
ಕೇಂದ್ರ ಸರಕಾರದ 2020-21ನೇ ಸಾಲಿನ ಬಜೆಟ್‌ನಲ್ಲಿ 60 ಕೋ.ರೂ. ಅನುದಾನ ಮೀಸಲಿಟ್ಟಿದ್ದು, ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ತಿಗೊಳ್ಳಲಿದೆ ಎಂದು ಅಂದಾಜಿಸಲಾಗಿತ್ತು. ಇದರ ಅನುಷ್ಠಾನವನ್ನು ರೈಲ್ ಇಂಡಿಯಾ ಟೆಕ್ನಿಕಲ್‌ಆ್ಯಂಡ್ ಎಕಾಮಿಕ್ಸ್ ಸರ್ವಿಸ್ ಲಿಮಿಟೆಡ್ (ರೈಟ್ಸ್)ಸಂಸ್ಥೆಗೆ ವಹಿಸಲಾಗಿತ್ತು. ಹಾಸನ-ಅರಸೀಕೆರೆ ವಿಭಾಗದಲ್ಲಿ 2021ರ ಡಿಸೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಬಿಡ್‌ನ ಟೆಕ್ನಿಕಲ್ ಇವೇಲ್ಯೂವೇಶನ್ ನಡೆಯುತ್ತಿದೆ.ಮೈಸೂರು-ಹಾಸನ ವಲಯದ ಕಾಮಗಾರಿಗೆ ಜನವರಿ ಅಂತ್ಯದೊಳಗೆ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ಹಾಸನ- ಮಂಗಳೂರು ನಡುವಣ ವಿದ್ಯುದೀಕರಣಕ್ಕೆ ಪೂರಕ ಪ್ರಕ್ರಿಯೆಗಳು ನಡೆಯಬೇಕಾಗಿವೆ.
ಕೊಂಕಣ ರೈಲ್ವೇಯ ಕಾರವಾರದಿಂದ ತೋಕೂರು ವರೆಗೆ ಹಾಗೂ ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದ ತೋಕೂರಿನಿಂದ ಶೋರ್ನೂರ್ ವರೆಗಿನ ವಿದ್ಯುದೀಕರಣಗೊಂಡಿರುವ ಕಾರಣ ಯಶವಂತಪುರ-ಕಾರವಾರ ರೈಲು ಕಾರವಾರದಿಂದ ಮಂಗಳೂರು ವರೆಗೆ ವಿದ್ಯುತ್ ಮೂಲಕ ಸಂಚರಿಸುತ್ತಿದೆ. ವೇಗವೂ ವರ್ಧನೆಯಾಗಿದ್ದು, 50 ನಿಮಿಷ ಮುಂಚಿತವಾಗಿ ಮಂಗಳೂರು ಜಂಕ್ಷನ್‌ಗೆ ತಲುಪುತ್ತದೆ. ಅಲ್ಲಿಂದ ಡೀಸೆಲ್ ಎಂಜಿನ್ ಮೂಲಕ ಬೆಂಗಳೂರಿಗೆ ಸಾಗುತ್ತದೆ.
ಕೊಂಕಣ ರೈಲ್ವೇ: ಶೇ. 87 ವಿದ್ಯುದೀಕರಣ ಪೂರ್ಣ
ಕೊಂಕಣ ರೈಲು ಮಾರ್ಗದಲ್ಲಿ ವಿದ್ಯುತ್ ಕಾಮಗಾರಿ ಶೇ. 87ರಷ್ಟು ಪೂರ್ಣಗೊಂಡಿದೆ. ಒಟ್ಟು 1,287 ಕೋ.ರೂ. ವೆಚ್ಚದಲ್ಲಿ 741 ಕಿ.ಮೀ. ವಿದ್ಯುದೀಕರಣ ಯೋಜನೆಗೆ 2015ರಲ್ಲಿ ಶಿಲಾನ್ಯಾಸ ನಡೆದಿತ್ತು. ಇದೀಗ ರೋಹಾ-ರತ್ನಾಗಿರಿ ಮಾರ್ಗದಲ್ಲಿ 204 ಕಿ.ಮೀ. ಹಾಗೂ ತೋಕೂರು-ಕಾರವಾರ ವರೆಗಿನ 239 ಕಿ.ಮೀ. ಮಾರ್ಗ ವಿದ್ಯುದೀಕರಣವಾಗಿದೆ.
ಹಾಸನ-ಅರಸೀಕೆರೆ ವಲಯದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಪೂರಕ ಕ್ರಮಗಳು ಅಂತಿಮ ಹಂತದಲ್ಲಿವೆ. ಉಳಿದಂತೆ ಮೈಸೂರು-ಹಾಸನ ವಲಯದ ಟೆಂಡರ್ ಈ ತಿಂಗಳಿನಲ್ಲಿ ಕರೆಯುವ ಸಾಧ್ಯತೆಗಳಿವೆ. ಹಾಸನದಿಂದ ಮಂಗಳೂರು ವರೆಗಿನ ಕಾಮಗಾರಿಗೆ ಪೂರಕ ಪ್ರಕ್ರಿಯೆಗಳು ಬಳಿಕ ಆರಂಭಗೊಳ್ಳಲಿವೆ.
– ಇ. ವಿಜಯ, ಮುಖ್ಯ ಸಾರ್ವಜನಿಕ
ಸಂಪರ್ಕಾಧಿಕಾರಿ, ನೈಋತ್ಯ ರೈಲ್ವೇ
-ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.