ನಾಟಿ ಕೋಳಿಗೆ ಈಗ ಬೆಲೆ, ಬೇಡಿಕೆ!


Team Udayavani, May 23, 2018, 11:57 AM IST

23-may-7.jpg

ಪುತ್ತೂರು: ತುಳುನಾಡಿನಲ್ಲಿ ಪತ್ತನಾಜೆ (ಹತ್ತನಾವಧಿ) ಆಚರಣೆಯಲ್ಲಿ ದೈವಗಳಿಗೆ ಕೋಳಿ ಬಲಿ ನೀಡುವ ಸಂಪ್ರದಾಯವಿರುವುದರಿಂದ ನಾಟಿ ಕೋಳಿಗೆ ವ್ಯಾಪಕ ಬೇಡಿಕೆ ಉಂಟಾಗಿದೆ. ಈ ಕಾರಣದಿಂದ ಬೆಲೆಯೂ ಕೆ.ಜಿ.ಗೆ 400 ರೂ. ದಾಟಿ ಮುನ್ನುಗ್ಗಿದೆ.

ತುಳುನಾಡಿನ ನಂಬಿಕೆ, ಆಚರಣೆಗೆ ಪೂರಕವಾಗಿ ಪತ್ತನಾಜೆಯ ಅಗೇಲು, ತಂಬಿಲಾದಿಗಳು ಮೇ 24ರಂದು ನಡೆಯಲಿವೆ. ಹತ್ತನಾವಧಿಯಂದು ತುಳುನಾಡಿನಲ್ಲಿ ದೈವಾರಾಧನೆಗೆ ಪೂರಕವಾಗಿ ಬನಗಳಲ್ಲಿ ದೈವಗಳಿಗೆ ಕೋಳಿ ಬಲಿ ಕೊಡುವುದು, ಎಳನೀರು ಹಾಗೂ ಇತರ ಪರಿಕರಗಳನ್ನು ಇಟ್ಟು ದೈವಗಳಿಗೆ ಪ್ರಾರ್ಥನೆ ಸಲ್ಲಿಸುವ ಆಚರಣೆ ರೂಢಿಯಲ್ಲಿದೆ. ಈ ದಿನ ಗುಳಿಗ, ಭೈರವ ದೈವಗಳಿಗೆ ಭಕ್ತರು ಮಾಡಿ ಪ್ರಾರ್ಥಿಸುತ್ತಾರೆ, ಹರಕೆ ಒಪ್ಪಿಸುತ್ತಾರೆ. ಹತ್ತನಾವಧಿಯವರೆಗೆ ಭೂತ ಕೋಲಗಳು ನಡೆದು ಗೆಜ್ಜೆ ಬಿಚ್ಚುವ ನಂಬಿಕೆ ಇದ್ದು, ಹತ್ತನಾವಧಿಯವರೆಗೆ ಊರಿನ ಕೋಳಿಗಳಿಗೆ ವಿಪರೀತ ಬೇಡಿಕೆ ಇದೆ.

ಬೇಡಿಕೆ ಇದ್ದರೂ ಸಾಕುತ್ತಿಲ್ಲ
ನಾಟಿ ಕೋಳಿ ಮಾಂಸ ಹೆಚ್ಚು ರುಚಿಕರವೆಂದು ಪರಿಗಣಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ವಿರಳವಾಗಿರುವ ನಾಟಿ ಕೋಳಿ ಸಾಕುವವರಲ್ಲಿ ನಾಟಿ ಕೋಳಿ ಖರೀದಿಸಲು ಎಲ್ಲ ಸಮಯದಲ್ಲೂ ಬೇಡಿಕೆ ಇದ್ದರೂ ಹತ್ತನಾವಧಿ ಸಮಯದಲ್ಲಿ ವಿಪರೀತ ಬೇಡಿಕೆ ಇರುತ್ತದೆ. ಹತ್ತನಾವಧಿಯ ಸಂದರ್ಭದಲ್ಲಿ ನಾಟಿ ಕೋಳಿ ಸಾಕಾಣೆದಾರರು ಹೇಳಿದ ಬೆಲೆ ಲಭಿಸುತ್ತದೆ. ಆದರೆ ಅಂಕದ ಕೋಳಿಗಳಿಗೆ ಕೆ.ಜಿ. ಲೆಕ್ಕದ ದರ ಲಗಾವಾಗುವುದಿಲ್ಲ, ಕೋಳಿಯ ಜಾತಿ, ಸಾಮರ್ಥ್ಯವನ್ನು ಅವಲಂಬಿಸಿ ಒಂದರಿಂದ 10 ಸಾವಿರ ರೂ. ತನಕವೂ ಬೆಲೆ ಬಾಳುತ್ತದೆ. 

ಬೇಡಿಕೆಯನ್ನು ಆಧರಿಸಿ ಬ್ರಾಯ್ಲರ್‌, ಟೈಸನ್‌ ಕೋಳಿಗಳಂತೆ ನಾಟಿ ಕೋಳಿ ಮಾರಾಟದ ಫಾರಂಗಳೂ ಹುಟ್ಟಿ ಕೊಂಡಿವೆ. ಪುತ್ತೂರಿನ ಪಡೀಲ್‌ನಲ್ಲಿ ಇಂತಹ ಎರಡುಫಾರಂಗಳಿವೆ. ಸೀಸನ್‌ ಅವಧಿಗೆ ನಾಟಿ ಕೋಳಿ ಫಾರಂನಲ್ಲಿ  ಕ್ಯೂ ಆರಂಭಗೊಳ್ಳುತ್ತದೆ. ಇಲ್ಲಿನ ಎರಡು ಅಂಗಡಿಗಳಲ್ಲಿ ಸುಮಾರು 20 ಕ್ವಿಂಟಲ್‌ ನಾಟಿ ಕೋಳಿಗಳು ಒಂದೇ ವಾರದಲ್ಲಿ ಮಾರಾಟವಾಗುತ್ತವೆ. ಈ ಕೋಳಿಗಳನ್ನು ತಮಿಳುನಾಡಿನಿಂದ ತರಿಸಲಾಗುತ್ತದೆ. ಇವು ಜಾಸ್ತಿ ತೂಕ ಇರುತ್ತವೆ. ಇವುಗಳಿಗೆ ಪರ್ಯಾಯವಾಗಿ ಗಿರಿರಾಜ ಕೋಳಿಗಳೂ ಲಭ್ಯವಾಗುತ್ತಿದ್ದರೂ ಈಗ ಮೈಸೂರು, ಮಂಡ್ಯಗಳಿಂದ ಆಮದಾಗುವ ನಾಟಿ ಕೋಳಿಗಳಿಗೆ ಹೆಚ್ಚು ಬೇಡಿಕೆ ಇದೆ. 

ಭಾರೀ ಬೇಡಿಕೆ, ಬೆಲೆ
ಪ್ರಸ್ತುತ ಸಾದಾ ಊರಿನ ಕೋಳಿ ಕೆ.ಜಿ. ಯೊಂದರ 400 ರೂ.ಗೆ ಮಾರಾಟವಾಗುತ್ತಿದೆ. ಬೇಡಿಕೆಗೆ ಅನುಗುಣವಾಗಿ ಮೇ 23, 24ರಂದು ಈ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಉಳಿದಂತೆ ಮಂಡ್ಯ, ಮೈಸೂರು ಭಾಗದ ಹಾಗೂ ತಮಿಳುನಾಡಿನಿಂದ ಆಮದಾ ಗುವ ಹೈಬ್ರಿಡ್‌ ನಾಟಿ ಕೋಳಿಗಳಿಗೆ ಕೆ.ಜಿ.ಯೊಂದರ 200ರಿಂದ 300 ರೂ. ತನಕ ಮಾರಾಟವಾಗುತ್ತಿದೆ.

ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.