ಸವಾಲು-ಸಂಕಷ್ಟದ ಮಧ್ಯೆಯೇ ಶುರುವಾದ ನಾಡದೋಣಿ ಮೀನುಗಾರಿಕೆ
Team Udayavani, Jun 4, 2021, 5:10 AM IST
ಮಹಾನಗರ: ಯಾಂತ್ರೀಕೃತ ಮೀನುಗಾರಿಕೆ ಜೂ. 1ರಿಂದ ಸ್ಥಗಿತ ಗೊಂಡಿದ್ದು, ದ.ಕ. ಜಿಲ್ಲೆಯಲ್ಲಿ ನಾಡದೋಣಿ ಮೀನುಗಾರಿಕೆ ಮತ್ತೆ ಚುರುಕು ಪಡೆದು ಕೊಂಡಿದೆ. ಆದರೆ ಕೊರೊನಾ, ಸೀಮೆಎಣ್ಣೆ ಸಮಸ್ಯೆಯ ಮಧ್ಯೆ ಶುರುವಾದ ಈ ಬಾರಿಯ ನಾಡದೋಣಿ ಮೀನುಗಾರಿಕೆ ಮೀನು ಗಾರರಿಗೆ ಸಂಕಷ್ಟ ಸೃಷ್ಟಿಸುವ ಸಾಧ್ಯತೆಯಿದೆ.
ಜೂ. 1ರಿಂದ ನಾಡದೋಣಿ ಮೀನುಗಾರಿಕೆ ನಡೆಸಲು ಅವಕಾಶವಿರುವುದರಿಂದ ಕೆಲವು ನಾಡದೋಣಿಗಳು ಈಗಾಗಲೇ ಮೀನು ಗಾರಿಕೆ ಆರಂಭಿಸಿವೆ. ಒಂದೆರಡು ದಿನದಲ್ಲಿ ಎಲ್ಲ ನಾಡದೋಣಿಗಳು ಕಡಲಿಗಿಳಿಯಲಿವೆ.
ನಾಡದೋಣಿ ಮೀನುಗಾರಿಕೆ ನಡೆಸು ವವರಿಗೆ ಸೀಮೆಎಣ್ಣೆ ಲಭ್ಯತೆಯೇ ಬಹು ದೊಡ್ಡ ಸಮಸ್ಯೆ. ಈ ಬಾರಿ ಕೆಲವು ತಿಂಗಳು ಸೀಮೆಣ್ಣೆಯೇ ದೊರೆತಿಲ್ಲ. ಸೀಮೆಎಣ್ಣೆ ಬಳಕೆ ಮಾಡದಂತೆ ಕೇಂದ್ರ ಸರಕಾರ ಸೂಚನೆ ನೀಡಿದ ಕಾರಣಕ್ಕೆ ಇದರ ಹಂಚಿಕೆಯೇ ಬಹುದೊಡ್ಡ ಸಮಸ್ಯೆಯಾಗಿದೆ. ನಾಡದೋಣಿಗಳಿಗೆ ಸೀಮೆಎಣ್ಣೆಯೇ ಬೇಕಾಗಿರುವುದರಿಂದ ರಾಜ್ಯ ಸರಕಾರವು ಕೇಂದ್ರದ ವಿಶೇಷ ಅನುಮತಿ ಪಡೆದು ಸೀಮೆಎಣ್ಣೆ ಪಡೆಯುತ್ತಿದ್ದು, ಈ ಸಮಯದಲ್ಲಿ ತಡವಾಗುತ್ತಿದೆ ಎಂಬುದು ನಾಡದೋಣಿ ಮೀನುಗಾರರ ಆರೋಪ.
ಮೀನು ಅಲಭ್ಯ! :
“ನಾಡದೋಣಿ ಮೀನುಗಾರಿಕೆಯಿಂದ ತುಂಬಾ ಲಾಭ ಆಗುವುದಿಲ್ಲ. ಹಿಂದೆ ಬೇಕಾದಷ್ಟು ಮೀನು ದಡದ ಸಮೀಪ ದಲ್ಲಿಯೇ ದೊರೆಯುತ್ತಿತ್ತು. ಅನಂತರ ಮೀನುಗಳನ್ನು ಹುಡುಕಿಕೊಂಡು ಆಳಸಮುದ್ರಕ್ಕೆ ಹೋಗಬೇಕಾಗುತ್ತದೆ. ಮಳೆಗಾಲದಲ್ಲಿ ಆಳ ಸಮುದ್ರಕ್ಕೆ ತೆರಳು ವುದು ಅಸಾಧ್ಯವಾಗಿರುವುದರಿಂದ ನಾಡ ದೋಣಿ ಮೀನುಗಾರಿಕೆಯೂ ಕಷ್ಟ’ ಎನ್ನುತ್ತಾರೆ ತೋಟಬೆಂಗ್ರೆಯ ಮೀನುಗಾರ ಪ್ರಮುಖರು.
ಬೀಸುಬಲೆ ಕ್ರೇಜ್:
ಮಳೆಗಾಲ ಆರಂಭವಾಗುವ ಸಮಯ ದಲ್ಲಿ ಬೀಸುಬಲೆ ಮೀನುಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯಲಿದೆ. ನಾಡದೋಣಿ ಯಲ್ಲಿ ತೆರಳಿ ಬೀಸುಬಲೆಯಲ್ಲಿ ಮೀನು ಹಿಡಿಯುವವರಲ್ಲದೆ ದಡದಲ್ಲಿದ್ದುಕೊಂಡೇ ಬೀಸುಬಲೆಯಲ್ಲಿ ಮೀನು ಹಿಡಿಯುವವರು ತುಂಬ ಮಂದಿ ಇದ್ದಾರೆ. ಯಾಂತ್ರೀಕೃತ ಮೀನುಗಾರಿಕೆ ನಿಷೇಧ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆ ಉದ್ಯೋಗಗಳ ಕೊರತೆ ಇರುವುದರಿಂದಲೂ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೋಟಬೆಂಗ್ರೆ ಅಳಿವೆಬಾಗಿಲು ಪ್ರದೇಶದಲ್ಲಿ ಬೀಸುಬಲೆಯಲ್ಲಿ ಮೀನು ಹಿಡಿಯುತ್ತಾರೆ. ಪೈಯ್ಯ, ಏರಿ, ನಂಗ್, ಬಂಗುಡೆ, ಕೊಡ್ಡೆಯಿ ಮೀನುಗಳು ದೊರೆಯುತ್ತವೆ.
ದ.ಕ.: 1,800 ನಾಡದೋಣಿಗಳು :
ನವಮಂಗಳೂರು ಬಂದರು, ಮಂಗ ಳೂರು ಮೀನುಗಾರಿಕೆ ದಕ್ಕೆ, ಉಳ್ಳಾಲ ವ್ಯಾಪ್ತಿಯಿಂದ ನಾಡದೋಣಿಗಳು ಕಡಲಿಗಿಳಿ ಯುತ್ತಿವೆ. ದ.ಕ. ಜಿಲ್ಲೆ ಯಲ್ಲಿ ಸುಮಾರು 1,800ರಷ್ಟು ನಾಡದೋಣಿಗಳಿದ್ದು, 50 ಸಾವಿರ ಮಂದಿ ಅವಲಂಬಿತರಾಗಿದ್ದಾರೆ. ನಾಡದೋಣಿ ಯಲ್ಲಿ ಮೀನುಗಾರಿಕೆಗೆ ತೆರಳುವವರು ಪ್ರತೀದಿನ ಮುಂಜಾನೆ ಹೊರಟು ಸಂಜೆ 4ರ ಒಳಗೆ ದಡ ಸೇರುತ್ತಾರೆ. 1 ನಾಡದೋಣಿಗೆ 25 ಸಾವಿರ ರೂ. ಮೌಲ್ಯದಿಂದ ಗರಿಷ್ಠ 50 ಸಾವಿರ ರೂ. ಮೌಲ್ಯದ ಮೀನು ಸಿಗುತ್ತವೆ.
ನಾಡದೋಣಿ ಮೀನುಗಾರಿಕೆ ಶುರು ವಾಗಿದೆ. ಬೇಡಿಕೆಯಷ್ಟು ಪ್ರಮಾಣದಲ್ಲಿ ಸೀಮೆಎಣ್ಣೆ ಲಭ್ಯವಿಲ್ಲದಿರುವುದು ನಮಗೆ ಸಮಸ್ಯೆಯಾಗಿದೆ. ಮೀನು ಲಭ್ಯತೆ ಕೂಡ ಕಡಿಮೆಯಿದೆ. ಹೀಗಾಗಿ ಈ ಬಾರಿ ಸವಾಲಿನ ಸಮಯ. ಕೊರೊನಾ ಸಂಕಷ್ಟ ಇರುವ ಹಿನ್ನೆಲೆಯಲ್ಲಿ ಸರಕಾರ ನಮಗೆ ವಿಶೇಷ ನೆರವು ನೀಡಬೇಕಾಗಿದೆ. –ಸುಭಾಷ್‌ಚಂದ್ರ ಕಾಂಚನ್, ಕಾರ್ಯಾಧ್ಯಕ್ಷರು, ಗಿಲ್ನೆಟ್ ಮೀನುಗಾರರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
MUST WATCH
ಹೊಸ ಸೇರ್ಪಡೆ
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.