ಜಿಲ್ಲೆಯ ಅಭಿವೃದ್ಧಿಗೆ ಗಮನ ನೀಡದ ನಳಿನ್: ಗೌಡ
Team Udayavani, Apr 10, 2019, 6:00 AM IST
ಕೊಕ್ಕಡ: ಲೋಕಸಭಾ ಚುನಾವಣೆ ನಿಮಿತ್ತ ದ.ಕ. ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಪರ ವಾಗಿ ಮತದಾನ ಮಾಡುವಂತೆ ರಾಷ್ಟ್ರೀಯ ಕಾಂಗ್ರೆಸ್ ಚುನಾವಣ ಪ್ರಚಾರ ಸಭೆ ಕೊಕ್ಕಡದ ಆಟೋ ರಿಕ್ಷಾ ಸ್ಟ್ಯಾಂಡ್ ಬಳಿ ಸೋಮವಾರ ನಡೆಯಿತು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಅನಂತರ ಆರು ದಶಕ ಗಳಲ್ಲಿ ಈ ದೇಶ ಇಷ್ಟು ಅಭಿವೃದ್ಧಿ ಕಂಡಿರುವುದು ಕಾಂಗ್ರೆಸ್ ಜನಪರ ಆಡಳಿತದಿಂದ. ದೇಶದ ಧೀಮಂತ ನಾಯಕಿ ಇಂದಿರಾ ಗಾಂಧಿಯವರ ಸಮರ್ಥ ಆಡಳಿತದ ಕಾಲದಲ್ಲಿ ಪಾಕಿ ಸ್ತಾನದ ಕೈಯಲ್ಲಿದ್ದ ಬಾಂಗ್ಲಾ ದೇಶದ ವಿಮೋಚನೆ ಮಾಡಿ ಪಾಕಿಸ್ತಾನವನ್ನು ಹೋಳು ಮಾಡಲಾಯಿತು. ಲಾಹೋರ್ ತನಕ ನಮ್ಮ ಸೇನೆಯನ್ನು ನುಗ್ಗಿಸಿದ ಕೀರ್ತಿ ಕಾಂಗ್ರೆಸ್ ಸರ ಕಾರದ್ದು. ಆದರೆ, ಮಿಲಿಟರಿ ಕಾರ್ಯಾ ಚರಣೆಯನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಲು ಮುಂದಾಗುತ್ತಿದೆ ಎಂದು ಟೀಕಿಸಿದರು.
ಪ್ರಾಮಾಣಿಕ ಸೇವೆ
ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ಜಿಲ್ಲೆಯ ಜನರ ಪ್ರಾಮಾಣಿಕ ಸೇವೆಯನ್ನು ಮುಂದಿನ ಐದು ವರ್ಷಗಳಲ್ಲಿ ತಾನು ಮಾಡು ವಂತಾಗಲು ಕೊಕ್ಕಡದ ಎಲ್ಲ ಮತದಾರ ಬಾಂಧವರೂ ಮತ ನಡುವಂತೆ ಮನವಿ ಮಾಡಿದರು.
ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಒಂದು ಬಾರಿಯೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಧ್ವನಿ ಯನ್ನು ಎತ್ತದ, ಲೋಕಸಭೆಯಲ್ಲಿ ಧ್ವನಿ ಯೆತ್ತಲೂ ಭಾಷಾ ತೊಂದರೆಯನ್ನು° ಎದುರಿಸುತ್ತಿರುವ ನಿಷ್ಕ್ರಿಯ ಬಿಜೆಪಿ ಅಭ್ಯರ್ಥಿಯ ಬದಲು ಕಾಂಗ್ರೆಸ್‌ನ ಯುವ ಅಭ್ಯರ್ಥಿ ಮಿಥುನ್ ರೈ ಅವರನ್ನು ಪ್ರಚಂಡ ಬಹುಮತದಿಂದ ಜಿಲ್ಲೆಯ ಪ್ರಜ್ಞಾವಂತ ಮತದಾರರು ಗೆಲ್ಲಿಸಿಕೊಡಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿದರು. ಕರ್ನಾ ಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ಅಧ್ಯಕ್ಷ ಎ.ಸಿ. ಜಯರಾಜ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವೀಕ್ಷಕ ನವೀನ್‌ಚಂದ್ರ ಶೆಟ್ಟಿ ಕಾಪು, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್, ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಕೊಕ್ಕಡ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಣ್ಣಪ್ಪ ಗೌಡ ಕಾಶಿ, ಕೊಕ್ಕಡ ಯೂತ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಹಕೀಂ ಕೊಕ್ಕಡ, ಖಲಂದರ್ ಹಳ್ಳಿಂಗೇರಿ, ಜೆಸ್ಟಿನ್ ಕೊಕ್ಕಡ ಉಪಸ್ಥಿತರಿದ್ದರು. ಖಲಂದರ್ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.