ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ: ನಳಿನ್ ಕುಮಾರ್ ಕಟೀಲ್
Team Udayavani, Sep 2, 2022, 6:59 AM IST
ಮಂಗಳೂರು: “ಮುಂದಿನ ಚುನಾವಣೆ ಯಲ್ಲಿ ನಮ್ಮ ಸರಕಾರಗಳ ಸಾಧನೆಯೇ ನಮಗೆ ಶ್ರೀರಕ್ಷೆ. ಹಾಗಾಗಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಸೆ.2 ರಂದು (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉದಯ ವಾಣಿ ಯೊಂದಿಗೆ ಮಾತನಾಡಿದ ನಳಿನ್ ಅವರು, ಕಾಂಗ್ರೆಸ್‌ನ ಒಳಜಗಳವೂ ನಮಗೆ ಸಹಕಾರಿ ಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು.
150 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಅಭಿವೃದ್ಧಿ ಕಾರ್ಯ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಗಳ ಸಾಧನೆ ನಮ್ಮೊಂದಿಗಿದೆ. ಜತೆಗೆ ಕಾಂಗ್ರೆಸ್ ನೊಳಗೆ ಬಹಳಷ್ಟು ಗೊಂದಲಗಳಿವೆ. ಹಿಂದಿನ ಬಾರಿ ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯ ಮಂತ್ರಿಯಾಗಿದ್ದಾಗ ಯಾವುದೇ ಗೊಂದಲವಿರಲಿಲ್ಲ. ಆದರೂ ಗೆಲ್ಲಲು ಸಾಧ್ಯವಾಗಿದ್ದು 80 ಸ್ಥಾನಗಳಷ್ಟೇ. ಈಗ ಅಲ್ಲಿ ಬಹಳ ಗೊಂದಲ, ಒಳಜಗಳವಿದೆ. ಈ ಪರಿಸ್ಥಿತಿಯಲ್ಲಿ ಇದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಹೇಗೆ ಗೆಲ್ಲಲು ಸಾಧ್ಯ? ಎಂದು ಪ್ರಶ್ನಿಸಿದರು.
ಪ್ರಧಾನಿ ಆಗಮನ ಕುರಿತು ವಿವರಿಸಿ, ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ದ.ಕ.ಜಿಲ್ಲೆಗೆ 35 ಸಾವಿರ ಕೋಟಿ ರೂ. ನಷ್ಟು ಅನುದಾನ ಬಂದಿದೆ. ಮಂಗಳೂರು ಬಂದರು ಮತ್ತು ಎಂಆರ್‌ಪಿಎಲ್‌ನ ಯೋಜನೆಗಳಿಗೆ ಚಾಲನೆ ನೀಡಲು ಬರುವು ದಾಗಿ ಅವರು ಹೇಳಿದ್ದರು. ಜು.27ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರೂ ಮಳೆಯ ಕಾರಣ ಮುಂದೂಡಿಕೆಯಾಗಿತ್ತು. ಈಗ ಕೇರಳದ ಪ್ರವಾಸ (ಕೊಚ್ಚಿನ್ ಭೇಟಿ)ದ ಜತೆಗೆ ಈ ಕಾರ್ಯಕ್ರಮವನ್ನು ಜೋಡಿಸಲಾಗಿದೆ ಎಂದು ವಿವರಿಸಿದರು.
ಬಿಜೆಪಿಯ ಕಾರ್ಯಕ್ರಮದಂತೆ ಬಿಂಬಿಸುತ್ತಿದ್ದೀರಿ ಎಂಬ ಪ್ರಶ್ನೆಗೆ, ಮೋದಿ ಅವರು ನಮ್ಮ ಸರ್ವೋತ್ಛ ನಾಯಕ. ಅವರ ಆಗಮನವೆಂದರೆ ಕಾರ್ಯಕರ್ತರಲ್ಲಿ ಉತ್ಸಾಹ ಸಹಜ. ಕೇಂದ್ರ ಸರಕಾರದ ವಿವಿಧ ಯೋಜನೆಗಳ 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಅವರಲ್ಲಿ 40 ಸಾವಿರ ಮಂದಿಯನ್ನು ಆಹ್ವಾನಿಸಲಾಗಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆಯಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಕುರಿತ ಟೀಕೆಗೆ, ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸದವರ ಟೀಕೆ ಯಿದು. ತಲಪಾಡಿ -ಹೆಜಮಾಡಿ ಚತುಷ್ಪಥ ಪೂರ್ಣ ಗೊಂಡಿದೆ. ಬಿ.ಸಿ.ರೋಡ್‌ಅಡ್ಡಹೊಳೆ ಕಾಮಗಾರಿ ಪ್ರಗತಿಯಲ್ಲಿದೆ. ಬಿಕರ್ನಕಟ್ಟೆ-ಸಾಣೂರು ಚತುಷ್ಪಥ ಕಾಮಗಾರಿ ಆರಂಭವಾಗಿದೆ. ಗುರುಪುರ ಸೇತುವೆ ನಿರ್ಮಾಣ ಇತ್ಯಾದಿ ಕೆಲಸಗಳಾಗಿವೆ. ಉಳಿದ ಕಾಮ ಗಾರಿಗಳ ಹಣ ಬಿಡುಗಡೆ, ಟೆಂಡರ್ ಪ್ರಕ್ರಿಯೆ ಪ್ರಗತಿ ಯಲ್ಲಿದೆ. ಇದೇ ಟೀಕಾಕಾರರಿಗೆ ಉತ್ತರ ಎಂದರು.
ರಾಜ್ಯಾಧ್ಯಕ್ಷರಾಗಿ ನಿಮ್ಮ ಕೊಡುಗೆ ಹಾಗೂ ನಿಮ್ಮ ಬದಲಾವಣೆ ಎಂಬ ಬಗೆಗಿನ ಪ್ರಶ್ನೆಗೆ ಉತ್ತರಿಸಿ, ಎಲ್ಲ ಉಪ ಚುನಾವಣೆಗಳಲ್ಲಿ ಪಕ್ಷ ಗೆದ್ದಿದೆ. ಪಂಚಾಯತ್ ಚುನಾವಣೆಯಲ್ಲೂ ಶೇ. 80 ರಷ್ಟು ಸ್ಥಾನಗಳನ್ನು ಗೆದ್ದಿದ್ದೇವೆ. ಮಹಾನಗರ ಪಾಲಿಕೆ ಮತ್ತಿತರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಪಕ್ಷದಲ್ಲಿ ಯಾವುದೂ ಹುದ್ದೆ ಅಲ್ಲ, ಹೊಣೆಗಾರಿಕೆ ಮಾತ್ರ. ಅದನ್ನು ಬದಲಾವಣೆ ಅಥವಾ ಮುಂದುವರಿಸುವಿಕೆ ಪಕ್ಷದ ತೀರ್ಮಾನ ಎಂದರು.
ಸಾಮಾಜಿಕ ಜಾಲತಾಣದಲ್ಲಿನ ಟೀಕೆ ಕುರಿತೂ ಪ್ರತಿಕ್ರಿಯಿಸಿ, ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಬಂದವನು. ಸಂಘ ನನಗೆ ಶಿಸ್ತು ಹಾಗೂ ಸಂಸ್ಕಾರ ನೀಡಿದೆ. ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ. ಕೆಲವರ ತೇಜೋವಧೆ ಪ್ರಯತ್ನಕ್ಕೆ ಉತ್ತರಿಸಬೇಕಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಹಿರಿಯರು ವಹಿಸಿದ ಹೊಣೆಗಾರಿಕೆಯನ್ನು ನಿರ್ವಹಿಸಿದ್ದೇನೆ. ಅದೇ ವಿರೋಧಿಗಳಿಗೆ ಉತ್ತರ ಎಂದರು.
ಅಪಸ್ವರ ಸಹಜ :
ಯಾರೇ ಅಭ್ಯರ್ಥಿಯಾದರೂ ಅಪಸ್ವರ, ಗೊಂದಲ ಸಹಜ. ಆಕಾಂಕ್ಷಿತರಿಗೆ ಅವಕಾಶ ತಪ್ಪಿದಾಗ ನೋವು ವ್ಯಕ್ತಪಡಿಸುವುದು ಸಾಮಾನ್ಯ. ಜನರ ಬೆಂಬಲದಿಂದ ಮೂರು ಬಾರಿ ಸಂಸದನಾಗಿ ನನ್ನ ಹೊಣೆ ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ ಇದೆ. ಗುರಿ ಸಾಧನೆಯಲ್ಲಿ ನೂರಕ್ಕೆ ನೂರು ಸಾಧ್ಯವಾಗಿದೆ ಎನ್ನಲಾರೆ. ನನ್ನ ಇತಿಮಿತಿಯೊಳಗೆ ಕೈಗೊಳ್ಳಬಹುದಾದ್ದನ್ನು ಮಾಡಿದ್ದೇನೆ ಎಂದರು.
ಕಪ್ಪು ಬಟ್ಟೆ, ಲೈಟರ್, ಬೆಂಕಿಪೊಟ್ಟಣ ನಿಷೇಧ :
ಮಂಗಳೂರು: ಪ್ರಧಾನಿ ಮೋದಿ ಅವರ ಮಂಗಳೂರು ಭೇಟಿಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಠಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಆಗಮಿಸುವವರು ಲೈಟರ್, ಮ್ಯಾಚ್‌ಬಾಕ್ಸ್, ಭಿತ್ತಿಪತ್ರ, ಬಾಟಲಿ, ಕಪ್ಪು ಬಟ್ಟೆ ತರಬಾರದು ಎಂದು ಎಡಿಜಿಪಿ ಆಲೋಕ್ ಕುಮಾರ್ ತಿಳಿಸಿದ್ದಾರೆ.
ಪ್ರಧಾನಿ ಭೇಟಿ ವೇಳೆ ಬಂದೋಬಸ್ತ್ ಕ್ರಮಗಳ ಮೇಲ್ವಿಚಾರಣೆ ನಡೆಸುವುದಕ್ಕಾಗಿ ಮಂಗಳೂರಿನಲ್ಲಿರುವ ಎಡಿಜಿಪಿ ಆಲೋಕ್ ಕುಮಾರ್ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ. ಕಪ್ಪು ಟಿಶರ್ಟ್ ಧರಿಸಬಾರದು. ಅದನ್ನು ದುರುಪಯೋಗ ಪಡಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ ಈ ಸೂಚನೆ ನೀಡಲಾಗುತ್ತಿದೆ ಎಂದು ಎಡಿಜಿಪಿ ತಿಳಿಸಿದ್ದಾರೆ.
ಇದೇ ವೇಳೆ ಸಮಾವೇಶ ಮೈದಾನದ ಸುತ್ತ ಪರಿಶೀಲನೆ ನಡೆಸಿದ ಎಡಿಜಿಪಿ, ವೇದಿಕೆಯಲ್ಲಿ ಸಮರ್ಪಕವಾಗಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಹಾಕಿಲ್ಲದ ಬಗ್ಗೆ ಗರಂ ಆದರು. ಸಿಸಿಟಿವಿ ವ್ಯವಸ್ಥೆ ಹೆಚ್ಚಿಸುವಂತೆ, ಸಿಸಿಟಿವಿಗಳು ಸಮಾವೇಶ ಸ್ಥಳದ ಎಲ್ಲ ಭಾಗ, ಎಲ್ಲ ಕೋನಗಳನ್ನೂ ಸಮರ್ಪಕವಾಗಿ ಸೆರೆಹಿಡಿಯುವಂತೆ ನೋಡಿಕೊಳ್ಳಲು ಸಂಘಟಕರಿಗೆ ಸೂಚನೆ ನೀಡಿದರು.
ಭದ್ರತೆಗಾಗಿ ನಿಯೋಜನೆಗೊಂಡ ಸಿಬಂದಿ ಮೊಬೈಲ್ ನೋಡುತ್ತ, ಫೋಟೋ ತೆಗೆಯುತ್ತ ಇರ ಬಾರದು; ಬಂದೋಬಸ್ತ್ಗೆ ಗಮನ ಇರಬೇಕು, ಕಾರ್ಯಕ್ರಮಕ್ಕೆ ಬಂದವರ ಜತೆ ಯಾವುದೇ ಸಂಘರ್ಷಕ್ಕೆ ಇಳಿಯಬಾರದು. ಆಗಮಿಸುವವರ ಶೂ ಸಹಿತ ಪೂರ್ಣ ತಪಾಸಣೆ ಮಾಡಬೇಕು ಎಂದು ಸೂಚನೆಯಿತ್ತರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಅನುÏ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.