ನಾಲೂರು ಶ್ರೀ ಶಂಕರನಾರಾಯಣ ದೇಗುಲ: ಬಿಂಬಪ್ರತಿಷ್ಠೆ

Team Udayavani, May 13, 2019, 6:00 AM IST

1205KDB2

ಕಡಬ: ಕುಟ್ರಾಪಾಡಿ ಗ್ರಾಮದ ನಾಲೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಅಂಗವಾಗಿ ದೇಗುಲದಲ್ಲಿ ರವಿವಾರ ಗಣಪತಿ ಬಿಂಬ ಪ್ರತಿಷ್ಠೆ ಹಾಗೂ ಧಾರ್ಮಿಕ ವಿಧಿ – ವಿಧಾನಗಳು ಪಾವಂಜೆ ಬ್ರಹ್ಮ ಶ್ರೀ ವಾಗೀಶ ಶಾಸಿŒ ತಂತ್ರಿಗಳ ನೇತೃತ್ವದಲ್ಲಿ ಜರಗಿ, ಕ್ಷೇತ್ರಕ್ಕೆ ಆಗಮಿಸಿದ ಕೋದಂಡಾಶ್ರಮದ ಮಠಾಧೀಶ ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಬೆಳಗ್ಗೆ ಶ್ರೀ ಗಣೇಶ ಅಥರ್ವಶೀರ್ಷ (ಸಹಸ್ರಮೋದಕ) ಯಾಗ, ನಾಗಬಿಂಬ ಶುದ್ಧಿ, ಆಶ್ಲೇಷಾ ಬಲಿ, ಮಧ್ಯಾಹ್ನ ಶ್ರೀ ಗಣಪತಿ ಬಿಂಬಪ್ರತಿಷ್ಠೆ, ಕಲಶಾಭಿಷೇಕ, ಪ್ರಸನ್ನ ಪೂಜೆ, ಸಂಜೆ ಅಷ್ಟೋತ್ತರ ಶತಕಲಶ ಸಹಿತ ಬ್ರಹ್ಮಕುಂಭ ಸ್ಥಾಪನ, ಅವಾಸ ಹೋಮ ನಡೆಯಿತು.

ಕಡಬ ಪೇಟೆ, ಕೋಡಿಂಬಾಳ ಹಾಗೂ ಪಿಜಕಳ ಭಾಗದ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆಯಾಯಿತು. ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಶ್ರೀ ಕಾಮಾಕ್ಷಿ ಶಾರದಾಂಬಾ ಕ್ಷೇತ್ರ ಹೆಬ್ಬೂರು ಶ್ರೀ ಕೋದಂಡಾಶ್ರಮ ಮಠಾಧೀಶ ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರಿಗೆ ಸ್ವಾಗತ ನೀಡಲಾಯಿತು.

ವಿವಿಧ ಭಜನ ಮಂಡಳಿಗಳಿಂದ ಭಜನ ಸೇವೆ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭೆ ಬಳಿಕ ಕಡಬದ ವಿಶ್ವಮೋಹನ ನೃತ್ಯಕಲಾ ಶಾಲೆಯ ವಿದುಷಿ ಮಾನಸ ಪಿ. ರೈ ಮತ್ತು ಶಿಷ್ಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್‌.ಕೆ. ಜಗನ್ನಿವಾಸ ರಾವ್‌, ಅಧ್ಯಕ್ಷ ಶಶಾಂಕ ಗೋಖಲೆ ಮಾರ್ಗದಮನೆ, ಜೀರ್ಣೋ ದ್ಧಾರ ಸಮಿತಿಯ ಅಧ್ಯಕ್ಷ ಕೆ. ಜ್ಞಾನೇಶ್‌ ರಾವ್‌ ಕಡಬ, ಕಾರ್ಯ ದರ್ಶಿ ಯೋಗೇಶ್‌ ಕೆ. ರಾವ್‌, ಬ್ರಹ್ಮಕುಂಭಾಭಿಷೇಕ ಮಹೋತ್ಸವ ಸಮಿತಿಯ ಕಾರ್ಯದರ್ಶಿ ರವಿಚಂದ್ರ ನಾಲೂರು, ಜತೆ ಕಾರ್ಯದರ್ಶಿ ಶಿವಪ್ರಸಾದ್‌ ರೈ ಮೈಲೇರಿ, ಕೋಶಾಧಿಕಾರಿ ಪ್ರಸನ್ನಕುಮಾರ್‌ ಪುತ್ರಬೈಲು, ಭಜನ ಮಂಡಳಿ ಅಧ್ಯಕ್ಷ ಸುಂದರ ಗೌಡ ನಾಲೂರು, ದೇಗುಲದ ಅರ್ಚಕ ಶಶಿರಾಜ್‌ ಗಿರಿವನ ಉಪಸ್ಥಿತರಿದ್ದರು.

ಇಂದು ಬ್ರಹ್ಮಕುಂಭಾಭಿಷೇಕ
ದೇವಸ್ಥಾನದಲ್ಲಿ ಮೇ 13ರ ಬೆಳಗ್ಗೆ 6.06ಕ್ಕೆ ಕವಾಟೋದ್ಘಾಟನೆ, ಪ್ರಾತಃ ಪೂಜಾ, ಶ್ರೀ ಶಂಕರ ನಾರಾಯಣ ದೇವರಿಗೆ ಶಾಂತಿ-ಪ್ರಾಯಶ್ಚಿತ್ತಾದಿ, ಕಲಶಾಭಿಷೇಕ ಬಳಿಕ 6.54ರ ವೃಷಭ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಿಲಿದೆ. ಅರ್ಚನೆ, ಪ್ರಸನ್ನ ಪೂಜೆ ನೆರವೇರಲಿವೆ. ಉತ್ಸವ ಕರ್ಮಸಮರ್ಪಣೆ, ಮಂತ್ರಾಕ್ಷತೆ ನಡೆಯಲಿದೆ. ಶ್ರೀ ಮಾಧವಾಶ್ರಮ ಸ್ವಾಮೀಜಿ ಅವರಿಗೆ ಸಮಾಜ ಬಾಂಧವರಿಂದ ಹಾಗೂ ಭಕ್ತರಿಂದ ಪಾದಪೂಜೆ ನಡೆಯಲಿದೆ. ಸಂಜೆ ಸಾಮೂಹಿಕ ಹೂವಿನ ಪೂಜೆ, ಮಂಗಳಾಚರಣೆ ನಡೆಯಲಿದೆ. ಭಜನ ಸೇವೆ ಬಳಿಕ ರಾತ್ರಿ ಡಾ| ವಿದ್ಯಾ ಎಸ್‌. ರಾವ್‌ ಹಾಗೂ ತಂಡದವರಿಂದ ಭಕ್ತಿಗಾನ ಸುಧೆ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

1-frr

Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್‌ ತಾತ್ಕಾಲಿಕ ಸ್ಥಗಿತ

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

Arrested: ಹೊಸ ವರ್ಷಾಚರಣೆಗೆ ಮಾದಕ ವಸ್ತು ಮಾರುತ್ತಿದ್ದ 11 ಮಂದಿ ಸೆರೆ

1-new

Bengaluru: ರಂಗೇರಿದ ರಾತ್ರಿಯಲ್ಲಿ ಹೊಸ ವರ್ಷದ ಸಂಭ್ರಮ

1-carr

Ramnagar; ಹೊಸವರ್ಷದಂದೇ ಎರಡು ಪ್ರತ್ಯೇಕ ಅಪಘಾ*ತ: ಮೂವರ ಸಾ*ವು

1-viman

Narrow Escape; ಯುಎಸ್ ನಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ವಿಮಾನಗಳ ದುರಂತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್‌ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ

ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್‌ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ

Sri Kukke Subrahmanya ಕ್ಷೇತ್ರದಲ್ಲಿ ವಿಶೇಷ ಪುಷ್ಪಾಲಂಕಾರ ಸೇವೆ

Sri Kukke Subrahmanya ಕ್ಷೇತ್ರದಲ್ಲಿ ವಿಶೇಷ ಪುಷ್ಪಾಲಂಕಾರ ಸೇವೆ

courts-s

Sullia; ಆರೋಪಿ ತಾಯಿಯ ಅಪರಾಧ ಸಾಬೀತು; ಜ. 4ರಂದು ಶಿಕ್ಷೆ ಪ್ರಮಾಣ ಘೋಷಣೆ

2

Uppinangady: ತ್ಯಾಜ್ಯ ಸರಿಯಾಗಿ ವಿಂಗಡಿಸಿ ಕೊಡದಿದ್ದರೆ ಕ್ರಮಕ್ಕೆ ಸದಸ್ಯರ ಸಲಹೆ

Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು

Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು

Gold Fraud Case: ಐಶ್ವರ್ಯ ಗೌಡ ದಂಪತಿಗೆ ಹೈಕೋರ್ಟ್‌ನಿಂದ ಜಾಮೀನು

Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್‌

Aishwarya Gowda Case: ಇನ್ನೊಂದು ಚಿನ್ನದಂಗಡಿಗೆ ವಂಚಿಸಿದ್ದ ಐಶ್ವರ್ಯ ಗ್ಯಾಂಗ್‌

1-frr

Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್‌ ತಾತ್ಕಾಲಿಕ ಸ್ಥಗಿತ

Arrested: ಟ್ಯಾಟೂ ಆರ್ಟಿಸ್ಟ್‌ ಬಂಧನ: 2.50 ಕೋಟಿ ರೂ. ಡ್ರಗ್ಸ್‌ ಜಪ್ತಿ

Arrested: ಟ್ಯಾಟೂ ಆರ್ಟಿಸ್ಟ್‌ ಬಂಧನ: 2.50 ಕೋಟಿ ರೂ. ಡ್ರಗ್ಸ್‌ ಜಪ್ತಿ

1-ram

Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.