ನಂದಿನಿ ಹಾಲು-ಮೊಸರಿನ ದರ ಪರಿಷ್ಕರಣೆ
Team Udayavani, Apr 1, 2017, 11:15 AM IST
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ಬೆಲೆಯನ್ನು ಎ. 1ರಿಂದ ಅನ್ವಯವಾಗುವಂತೆ ಪರಿಷ್ಕರಿಸಲಾಗಿದೆ.
ರಾಜ್ಯದಲ್ಲಿ ತೀವ್ರ ಬರಗಾಲವಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಹಾಲಿನ ಉತ್ಪಾದನೆಗೆ ನೀರು / ಮೇವಿನ ಕೊರತೆ ಹಿನ್ನೆಲೆಯಲ್ಲಿ ರಾಸುಗಳ ಸಾಕಣೆಗೆ ಬಳಸುವ ಪಶು ಆಹಾರದ ಬೆಲೆ, ಸಾಗಾಣಿಕೆ ಮತ್ತು ಸಂಸ್ಕರಣೆ/ಪ್ಯಾಕಿಂಗ್ ವೆಚ್ಚ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ನಂದಿನಿ ಹಾಲಿನ ಮಾರುಕಟ್ಟೆ ದರವನ್ನು ಹೆಚ್ಚಿಸಿ ರೈತರಿಗೆ ಉತ್ತಮ ದರ ನೀಡುವ ಹಿನ್ನೆಲೆಯಲ್ಲಿ ಈ ದರ ಪರಿಷ್ಕರಣೆ ಮಾಡಲಾಗಿದೆ.
ನಂದಿನಿ ಹಾಲು ಮತ್ತು ಮೊಸರನ್ನು ನಂದಿನಿ ಡೀಲರುಗಳು ಗರಿಷ್ಠ ಮಾರಾಟ ದರಕ್ಕೆ ಮೀರದಂತೆ ಮಾರಾಟ ಮಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು. ಒಕ್ಕೂಟದಲ್ಲಿ ಈಗಾಗಲೇ ದಾಸ್ತಾನಿರುವ ಹಳೆಯ ದರ ನಮೂದಿಸಿರುವ ಪ್ಯಾಕಿಂಗ್ ಫಿಲಂ ದಾಸ್ತಾನು ಮುಗಿಯುವವರೆಗೆ ಅದೇ ಫಿಲಂನಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ಪ್ಯಾಕ್ ಮಾಡಿ ಸರಬರಾಜು ಮಾಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.