ನರಿಮೊಗರು: ರೈಲು ನಿಲ್ದಾಣವಿದ್ದರೂ ಪ್ರಯೋಜನವಿಲ್ಲ!
ಪ್ರಯಾಣಿಕರ ಸ್ಪಂದನೆಯೇ ಇಲ್ಲದೆ ಗೂಡ್ಸ್ ರೈಲುಗಳ ಕ್ರಾಸಿಂಗ್‌ಗೆ ಬಳಕೆ
Team Udayavani, May 22, 2019, 6:00 AM IST
ನರಿಮೊಗರು: ಪುತ್ತೂರು ತಾಲೂಕು ಕೇಂದ್ರದಿಂದ 13 ಕಿ.ಮೀ. ದೂರದಲ್ಲಿರುವ ನರಿಮೊಗರು ರೈಲು ನಿಲ್ದಾಣವು ಸಿಗ್ನಲ್ ವ್ಯವಸ್ಥೆ ಸಹಿತ ಪೂರ್ಣಕಾಲಿಕ ಸ್ಟೇಷನ್ ಮಾಸ್ಟರ್ ಇರುವ ರೈಲು ನಿಲ್ದಾಣವಾದರೂ ಪ್ರಯಾಣಿಕರ ಸ್ಪಂದನೆ ಇಲ್ಲ.
ಈ ನಿಲ್ದಾಣದಲ್ಲಿ ಮಂಗಳೂರು- ಸುಬ್ರಹ್ಮಣ್ಯ ಲೋಕಲ್ ರೈಲಿಗೆ ಮಾತ್ರ ನಿಲುಗಡೆ ಇದೆ. ದೂರ ಪ್ರಯಾಣದ ಪ್ರಯಾಣಿಕ ರೈಲುಗಳಿಗಿಲ್ಲ. ನಿಲ್ದಾಣದ ಹೆಸರು ನರಿಮೊಗರು ಆದರೂ ರೈಲ್ವೇ ನಿಲ್ದಾಣ ಇರುವುದು ಸರ್ವೆಯಲ್ಲಿ. ಮಂಗಳೂರು- ಹಾಸನ ರೈಲು ಮಾರ್ಗ ನಿರ್ಮಾಣ ಸಂದರ್ಭ ಮೀಟರ್‌ಗೆàಜ್ ಹಳಿ ಇತ್ತು. 1974ರಲ್ಲಿ ಮಂಗಳೂರು- ಸುಬ್ರಹ್ಮಣ್ಯ ಲೋಕಲ್ ರೈಲಿನ ಓಡಾಟ ಆರಂಭವಾಯಿತು.
ಆ ಕಾಲದಲ್ಲಿ ಕಲ್ಲಿದ್ದಲು ಬಳಸಿ ಚಾಲನೆ ಮಾಡುವ ರೈಲು ಎಂಜಿನ್ ಬಳಕೆಯಲ್ಲಿತ್ತು. ಈ ರೈಲು ಇಂಜಿನ್‌ಗಳಿಗೆ ಅಲ್ಲಲ್ಲಿ ನೀರು ತುಂಬಿಸುವ ವ್ಯವಸ್ಥೆ ಬೇಕಾಗಿತ್ತು. ಈ ಕಾರಣದಿಂದ ಪುತ್ತೂರು-ಸುಬ್ರಹ್ಮಣ್ಯ ನಡುವೆ ರೈಲು ನಿಲ್ದಾಣದಲ್ಲಿ ಎಂಜಿನ್‌ಗಳಿಗೆ ನೀರು ತುಂಬಿಸುವ ಅಗತ್ಯಕ್ಕಾಗಿ ನರಿಮೊಗರಿನಲ್ಲಿ ರೈಲು ನಿಲ್ದಾಣ ಮತ್ತು ನೀರು ತುಂಬಿಸುವ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ರೈಲು ಎಂಜಿನ್‌ಗಳು ನೀರು ತುಂಬಿಸಿಕೊಳ್ಳಲು ಇಲ್ಲಿ ನಿಲುಗಡೆಯಾಗುವ ಕಾರಣ ಇದನ್ನು ಪೂರ್ಣ ಪ್ರಮಾಣದ ರೈಲು ನಿಲ್ದಾಣವನ್ನಾಗಿ ನಿರ್ಮಾಣ ಮಾಡಲಾಗಿದೆ.
ಎಲ್ಲ ರೈಲುಗಳಿಗೆ ನಿಲುಗಡೆ
ಮೀಟರ್‌ಗೆàಜ್ ಹಳಿಗಳಲ್ಲಿ ರೈಲು ಬಂಡಿ ಓಡುತ್ತಿದ್ದ ಸಂದರ್ಭ ನರಿಮೊಗರು ರೈಲು ನಿಲ್ದಾಣದಲ್ಲಿ ಲೋಕಲ್ ರೈಲು ಬಂಡಿಗಳ ಸಹಿತ ಎಲ್ಲ ರೈಲು ಬಂಡಿಗಳಿಗೆ ನಿಲುಗಡೆ ನೀಡಲಾಗುತ್ತಿತ್ತು. ಮೀಟರ್‌ಗೆàಜ್ ಹಳಿಗಳಲ್ಲಿ 1984ರ ಬಳಿಕ ಡೀಸೆಲ್ ಎಂಜಿನ್‌ಗಳ ಓಡಾಟ ಆರಂಭವಾದ ಬಳಿಕವೂ ನರಿಮೊಗರು ರೈಲು ನಿಲ್ದಾಣದಲ್ಲಿ ಎಲ್ಲ ರೈಲು ಬಂಡಿಗಳಿಗೆ ನಿಲುಗಡೆ ನೀಡಲಾಗುತ್ತಿತ್ತು.
ಮೀಟರ್‌ಗೆàಜ್ ಹಳಿಗಳನ್ನು ಬ್ರಾಡ್‌ಗೆàಜ್ ಹಳಿಗಳಾಗಿ ಪರಿವರ್ತನೆ ಮಾಡುವ ಸಂದರ್ಭ ನರಿಮೊಗರು ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸ ಲಾಗಿತ್ತು. ಬ್ರಾಡ್‌ಗೆàಜ್ ಹಳಿಗಳ ಮೇಲೆ ರೈಲು ಬಂಡಿಗಳ ಓಡಾಟ ಆರಂಭವಾದ ಬಳಿಕ ದೂರ ಪ್ರಯಾಣದ ರೈಲು ಬಂಡಿಗಳಿಗೆ ನರಿಮೊಗರು ನಿಲ್ದಾಣದಲ್ಲಿ ನಿಲುಗಡೆ ರದ್ದುಪಡಿಸಲಾಯಿತು.
ಗೂಡ್ಸ್ ರೈಲುಗಳ ಕ್ರಾಸಿಂಗ್ ನಿಲ್ದಾಣ
ಸ್ಟೇಷನ್ ಮಾಸ್ಟರ್ ಇರುವ ಪೂರ್ಣ ಪ್ರಮಾಣದ ರೈಲು ನಿಲ್ದಾಣವಾದ ಕಾರಣ ನರಿಮೊಗರು ರೈಲು ನಿಲ್ದಾಣವನ್ನು ಗೂಡ್ಸ್ ರೈಲುಗಳ ಕ್ರಾಸಿಂಗ್ ನಿಲ್ದಾಣವನ್ನಾಗಿ ಬಳಸಲಾಗುತ್ತಿದೆ.
ಯಾವುದೇ ಕಾರಣಕ್ಕೂ ಈ ರೈಲು ನಿಲ್ದಾಣದಲ್ಲಿ ದೂರ ಪ್ರಯಾಣದ ರೈಲು ಬಂಡಿಗಳಿಗೆ ನಿಲುಗಡೆ ನೀಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಕ್ಕೆ ರೈಲ್ವೇ ಇಲಾಖೆ ಬಂದಿದೆ. ಆಧುನೀಕರಣಗೊಂಡಿರುವ ಈ ರೈಲು ನಿಲ್ದಾಣವನ್ನು ಮುಚ್ಚುವ ಬದಲು ಕ್ರಾಸಿಂಗ್ ರೈಲು ನಿಲ್ದಾಣವನ್ನಾಗಿ ಇಲಾಖೆ ಬಳಸುತ್ತಿದೆ. ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಗೂಡ್ಸ್ ಬಂಡಿಗಳ ಓಡಾಟ ಹೆಚ್ಚಾಗಿರುವುದರಿಂದ ಇಲಾಖೆಗೆ ಕ್ರಾಸಿಂಗ್ ನಿಲ್ದಾಣಗಳ ಅಗತ್ಯವೂ ಹೆಚ್ಚಿದೆ.
ಪ್ರಯಾಣಿಕರ ಸ್ಪಂದನೆ ಕೊರತೆ ಕಾರಣ?
ನರಿಮೊಗರು ರೈಲು ನಿಲ್ದಾಣದಿಂದ ದೂರ ಪ್ರಯಾಣದ ರೈಲುಗಳಿಗೆ ಹತ್ತುವ ಮತ್ತು ಇಳಿಯುವ ಪ್ರಯಾಣಿಕರ ಸಂಖ್ಯೆ ಹಾಗೂ ರೈಲು ನಿಲ್ದಾಣದ ಆದಾಯದ ಕೊರತೆಯ ಕಾರಣ ನೀಡಿ ದೂರ ಪ್ರಯಾಣದ ರೈಲು ಬಂಡಿಗಳ ನಿಲುಗಡೆ ಸ್ಥಗಿತವಾಯಿತು. ಈಗ ಮಂಗಳೂರು-ಸುಬ್ರಹ್ಮಣ್ಯ ಲೋಕಲ್ ರೈಲು ಬಂಡಿಗೆ ನರಿಮೊಗರು ರೈಲು ನಿಲ್ದಾಣದಲ್ಲಿ ನಿಲುಗಡೆ ಇದ್ದರೂ ಪ್ರತಿನಿತ್ಯ ಇಲ್ಲಿಂದ ರೈಲು ಏರುವ ಪ್ರಯಾಣಿಕರ ಸಂಖ್ಯೆ 10ನ್ನು ಮೀರುವುದಿಲ್ಲ. ಆದರೆ ಲೋಕಲ್ ರೈಲಾದ ಕಾರಣ ನಿಲುಗಡೆಯನ್ನು ಸ್ಥಗಿತಗೊಳಿಸಿಲ್ಲ. ಇಲಾಖಾ ಸಮೀಕ್ಷೆಯಂತೆ ಈ ರೈಲು ನಿಲ್ದಾಣಕ್ಕೆ ಪ್ರಯಾಣಿಕರ ಸ್ಪಂದನೆ ಇಲ್ಲ ಎನ್ನುವ ವರದಿ ಇಲಾಖೆಯ ಕೈಸೇರಿದೆ.
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.