![1-havy](https://www.udayavani.com/wp-content/uploads/2024/12/1-havy-415x277.jpg)
ರಾಮನ ಹೆಸರೆತ್ತಿದವರ ಉಸಿರು ನಿಲ್ಲಿಸಿದ್ದೆ ಮೋದಿ
ಮಿಥುನ್ ರೈ ಪರ ಪ್ರಚಾರ ರೋಡ್ ಶೋನಲ್ಲಿ ಡಿ.ಕೆ. ಶಿವಕುಮಾರ್
Team Udayavani, Apr 16, 2019, 6:00 AM IST
![q-30](https://www.udayavani.com/wp-content/uploads/2019/04/q-30-1-620x373.jpg)
ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಸುಬ್ರಹ್ಮಣ್ಯ/ಗುತ್ತಿಗಾರು: ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಹೇಳಿ ಅಧಿಕಾರಕ್ಕೆ ಏರಿದ ಬಿಜೆಪಿ ರಾಮ ಮಂದಿರದ ಕುರಿತು ಮಾತನಾಡಿದ್ದ ಬಿಜೆಪಿ ಅಗ್ರ ನಾಯಕರ ಉಸಿರು ನಿಲ್ಲಿಸುವ ಕೆಲಸ ಮಾಡಿದೆ. ಸರ್ವಾಧಿಕಾರದಂತೆ ವರ್ತಿಸುವ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ದೂರವಿಡಿ ಎಂದು ರಾಜ್ಯದ ಜಲಸಂಪನ್ಮೂಲ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಜಾತ್ಯಾತೀತ ಜನತಾದಳ ಮೈತ್ರಿಕೂಟದ ಅಭ್ಯರ್ಥಿ ಮಿಥುನ್ ರೈ ಪರ ಗುತ್ತಿಗಾರಿನಲ್ಲಿ ಸೋಮವಾರ ರೋಡ್ ಶೊ ನಡೆಸಿದ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಜನತೆಗೆ ಏನೂ ಕೊಡುಗೆಯನ್ನು ನೀಡಿಲ್ಲ. ದೇಶ, ಹಿಂದುತ್ವ, ಸೈನಿಕರ ಹೆಸರು ಹೇಳಿಕೊಂಡು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಹಿಂದುತ್ವದ ಗುತ್ತಿಗೆ ಬಿಜೆಪಿಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ದೇಶ ಪ್ರೇಮಿಗಳಲ್ಲ ದ್ವೇಷ ಪ್ರೇಮಿಗಳು ಎಂದು ಹೇಳಿದರು.
ಕೊಡುಗೆ ಶೂನ್ಯ
ದ.ಕ. ಜಿಲ್ಲೆಯ ಸಂಸದ ನಳಿನ್ ಜಿಲ್ಲೆಗೆ ಏನೂ ಕೊಡುಗೆ ನೀಡಿಲ್ಲ. ಉದ್ಯೋಗ ಸೃಷ್ಟಿ ಸಹಿತ ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ಜಿಲ್ಲೆಗೆ ಅನುದಾನ ತಂದಿದ್ದರೆ ಅದರ ಬಗ್ಗೆ ದಾಖಲೆ ಒದಗಿಸಲಿ. ಸಂಸತ್ತಿನಲ್ಲಿ ಒಮ್ಮೆಯೂ ಧ್ವನಿ ಎತ್ತದೆ ಜಿಲ್ಲೆಯಲ್ಲಿ ಹಿಂದುತ್ವದ ಭಾಷಣದ ಮೂಲಕ ಕೊRàಮು ದ್ವೇಷ ಬೆಳೆಸಿ ಜಿಲ್ಲೆಯನ್ನು ಸುಡುತ್ತೇನೆ ಎಂದವರನ್ನು ಈ ಭಾರಿ ಸೋಲಿಸಿ ಸಾಮರಸ್ಯದ ಜ್ಯೋತಿ ಬೆಳಗುವೆ ಎನ್ನುವ ಮಿಥುನ್ ರೈ ಅವರನ್ನು ಗೆಲ್ಲಿಸಿ ಎಂದವರು ಕರೆ ನೀಡಿದರು.
ಸೂಕ್ತ ಸ್ಥಾನಮಾನ: ಭರವಸೆ
ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಎನ್ನುವ ಉದ್ದೇಶದಿಂದ ಜಾತ್ಯತೀತ ನಿಲುವಿನ ಪಕ್ಷಗಳು ಒಂದಾಗಿ ಲೋಕಸಭಾ ಚುನಾವಣೆ ಎದುರಿಸುತ್ತಿದ್ದೇವೆ ಎಂದರು. ಸುಳ್ಯದಲ್ಲಿ ಎಷ್ಟೋ ಸಮಯಗಳಿಂದ ಮೀಸಲಾತಿ ಇದೆ. ಇಲ್ಲಿಯ ಒಕ್ಕಲಿಗ ಸಮುದಾಯ ಸಹಿತ ಹೆಚ್ಚು ಸಮುದಾಯದ ಮಂದಿ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಭಾಗಕ್ಕೆ ಈ ಹಿಂದೆ ಅನ್ಯಾಯವಾಗಿದೆ. ಮುಂದೆ ಸರಿಪಡಿಸಿ ಸೂಕ್ತ ಸ್ಥಾನಮಾನ ನೀಡುವ ಅಭಯವನ್ನು ಡಿಕೆಶಿ ನಾಯಕರಿಗೆ ನೀಡಿದರು. ಸಮುದಾಯ, ಜಾತಿ ಇದಕ್ಕೆ ಪ್ರಾತಿನಿಧ್ಯ ನೀಡದೆ ಎಲ್ಲರೂ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದ ಅವರು ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಲೀಡ್ ತಂದುಕೊಟ್ಟವರಿಗೆ ಮುಂದೆ ಪಕ್ಷದಲ್ಲಿ ಸ್ಥಾನಮಾನ ನೀಡಲಾಗುತ್ತದೆ ಎಂದವರು ಭರವಸೆ ಇತ್ತರು.
ಅಪಪ್ರಚಾರ ಮಾಡಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಾತನಾಡಿ ಕೇಸರಿ ಶಾಲು ತಾನು ಧರಿಸುತ್ತಿರುವುದಕ್ಕೆ ನನ್ನ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದಕ್ಕೆ ಬೇಸರವಾಗಿದೆ. ಒಂದು ಬಾರಿ ನನಗೆ ಅವಕಾಶ ಮಾಡಿಕೊಡಿ. ನಾನು ಗೆದ್ದಲ್ಲಿ ಜಿಲ್ಲೆಯಲ್ಲಿ ಸಾಮರಸ್ಯದ ಜತೆಗೆ ಯುವಕರಿಗೆ ಉದ್ಯೋಗ ಸೃಷ್ಟಿಗೆ ಶ್ರಮ ವಹಿಸುವುದಾಗಿ ಹೇಳಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಪೇಟ ತೊಡಿಸಿ ಸಮ್ಮಾನಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಗೌಡ ಎಂ. ಪ್ರಸ್ತಾವನೆಗೈದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭರತ್ ಮುಂಡೋಡಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಪಿ.ಸಿ. ಜಯರಾಮ, ದಿವ್ಯಪ್ರಭಾ ಚಿಲ್ತಡ್ಕ, ಧಜಂಜಯ ಅಡ³ಂಗಾಯ, ಜಾಕೆ ಮಾಧವ ಗೌಡ, ಡಾ| ರಘು, ಅಶೋಕ್ ನೆಕ್ರಾಜೆ, ಸೋಮಸುಂದರ ಕೂಜುಗೋಡು, ಉಲ್ಲಾಸ್ ಕೋಟ್ಯಾನ್, ಲೊಕೇಶ್ವರಿ ವಿನಯಚಂದ್ರ, ಟಿ.ಎಂ. ಶಹೀದ್, ದಯಾಕರ ಆಳ್ವ, ಜ್ಯೋತಿ ಪ್ರೇಮಾನಂದ, ಪ್ರವೀಣ್ ಮುಂಡೋಡಿ, ಕಿರಣ್ ಬುಡ್ಲೆಗುತ್ತು ಮೊದಲಾದ ಮುಖಂಡರು ಉಪಸ್ಥಿತರಿದ್ದರು. ಬಹಿರಂಗ ಸಭೆಗೆ ಮೊದಲು ಮುಖ್ಯ ಪೇಟೆಯಲ್ಲಿ ಡಿಕೆಶಿ ಅವರು ಮಿಥುನ್ ರೈ ಪರ ತೆರೆದ ವಾಹನದಲ್ಲಿ ತೆರಳಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಬಿಜೆಪಿ ಯುಗಾಂತ್ಯ
ದ.ಕ ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಮೇ 23ಕ್ಕೆ ಜಿಲ್ಲೆಯಲ್ಲಿ ಬಿಜೆಪಿಯ ಯುಗ ಅಂತ್ಯವಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
![1-havy](https://www.udayavani.com/wp-content/uploads/2024/12/1-havy-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![1-havy](https://www.udayavani.com/wp-content/uploads/2024/12/1-havy-150x100.jpg)
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
![puttige-4](https://www.udayavani.com/wp-content/uploads/2024/12/puttige-4-1-150x92.jpg)
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
![Kharge (2)](https://www.udayavani.com/wp-content/uploads/2024/12/Kharge-2-1-150x87.jpg)
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
![1](https://www.udayavani.com/wp-content/uploads/2024/12/1-53-150x80.jpg)
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
![1-weqeqw](https://www.udayavani.com/wp-content/uploads/2024/12/1-weqeqw-150x78.jpg)
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.