Mangaluru ಮನ ಸೆಳೆಯುವ ಆಕರ್ಷಕ “ಮತ್ಸ್ಯ ಲೋಕ’!
ರಾಷ್ಟ್ರೀಯ ಗ್ರಾಹಕ ಮೇಳ ನ. 19ರ ವರೆಗೆ ವಿಸ್ತರಣೆ
Team Udayavani, Nov 4, 2023, 11:30 PM IST
ಮಂಗಳೂರು: ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಗ್ರಾಹಕ ಮೇಳದಲ್ಲಿ “ಅಕ್ವಾ ಟನೆಲ್’ (“ಅಂತರ್ಜಲ ಸುರಂಗ ಮಾರ್ಗ’) ಗಮನಸೆಳೆಯುತ್ತಿದ್ದು, ನ. 19ರ ವರೆಗೆ ವೀಕ್ಷಣೆಗೆ ಅವಕಾಶವಿದೆ. ಸಂಜೆ 4ರಿಂದ 9ರ ವರೆಗೆ ಪ್ರದರ್ಶನವಿರುತ್ತದೆ.
ರಾಷ್ಟ್ರೀಯ ಗ್ರಾಹಕರ ಮೇಳದ ಮೂಲಕ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಕ್ವಾ ಟನೆಲ್‌ನಲ್ಲಿ 200ಕ್ಕೂ ಹೆಚ್ಚು ಅಕ್ವೇರಿಯಂ ಮೀನುಗಳನ್ನು ವೀಕ್ಷಿಸಬಹುದಾಗಿದೆ.
ಮಂಗಳೂರು ನಗರದಲ್ಲಿ ಈ ಹಿಂದೆ ಸ್ನೋವಲ್ಡ್, ಅಕ್ವಾ ಶೋ, ಬರ್ಡ್‌ಶೋ, ತಾಜ್‌ಮಹಲ್‌ನಂತಹ ವಿನೂತನ ರೀತಿಯ ಮೆಗಾ ಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಾ ಬಂದಿದೆ. ಎನ್‌ಸಿಎಫ್ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿ ಶಾಪಿಂಗ್ ಮತ್ತು ಮನೋರಂಜನ ಮೇಳವಾಗಿದೆ.
ರೊಬೋಟಿಕ್
ಎನಿಮಲ್ ಪ್ರದರ್ಶನ
ರಾಷ್ಟ್ರೀಯ ಗ್ರಾಹಕ ಮೇಳದಲ್ಲಿ ಅಕ್ವಾ ಟನೆಲ್ ಶೋ ಜತೆ ರೋಬೋಟಿಕ್ ಎನಿಮಲ್ ಪ್ರದರ್ಶನ ಆಕರ್ಷಣೆ ಪಡೆಯುತ್ತಿದೆ. ಆನೆ, ಸಿಂಹ, ಗೊರಿಲ್ಲಾ ಮುಂತಾದ ರೊಬೋಟಿಕ್ ಪ್ರಾಣಿಗಳು, ಅವುಗಳ ಗರ್ಜನೆ ವಿಶೇಷವಾಗಿದೆ.
ಗೃಹೋಪಯೋಗಿ ಮಳಿಗೆ
ರಾಷ್ಟ್ರೀಯ ಗ್ರಾಹಕರ ಮೇಳವು ವ್ಯಾಪಾರ ಮಳಿಗೆಗಳೊಂದಿಗೆ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಗೃಹ ಬಳಕೆ ಉತ್ಪನ್ನ, ಅಡುಗೆ ಮನೆ ಉತ್ಪನ್ನ, ಕೈಮಗ್ಗದ ಉತ್ಪನ್ನ, ಕರಕುಶಲ ಉತ್ಪನ್ನ, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆಟಿಕೆಗಳು, ಆಹಾರೋತ್ಪನ್ನಗಳು ಮತ್ತು ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಿವೆ.
ಮನೋರಂಜನಾ ವಿಭಾಗದಲ್ಲಿ ಟೋರಾ ಟೋರಾ, ಡ್ಯಾಶಿಂಗ್ ಕಾರ್, ಜೈಂಟ್ ವ್ಹೀಲ್, ಟ್ರೇನ್, ಮೆರ್ರಿ ಕೊಲಂಬಸ್, 3ಡಿ ಶೋಸ್, ಸ್ಕೇರಿ ಹೌಸ್, ಏರ್ ಶಾಟ್, ಸ್ಪೇಸ್ ಜೆಟ್ ಇತ್ಯಾದಿ ಗಮನಸೆಳೆಯುತ್ತಿವೆ. ನ. 19ರ ವರೆಗೆ ಪ್ರತೀ ಸಂಜೆ 4ರಿಂದ ರಾತ್ರಿ 9ರ ವರೆಗೆ ಪ್ರದರ್ಶನ ಇರಲಿದ್ದು, 100 ರೂ. ದರ ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಗ್ರಾಹಕ ಮೇಳದ ಮ್ಯಾನೇಜರ್ ವಿಜಯ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.