ರಾಷ್ಟ್ರಧ್ವಜ, ರಾಷ್ಟ್ರಗೀತೆ: ತರಬೇತಿ ಕಾರ್ಯಾಗಾರ ಉದ್ಘಾಟನೆ
Team Udayavani, Aug 22, 2017, 7:00 AM IST
ಬೆಳ್ತಂಗಡಿ: ಯಂಗ್ ಚಾಲೆಂಜರ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಮುಂಡಾಜೆ ಪ. ಪೂ. ಕಾಲೇಜು ಮುಂಡಾಜೆ, ಎನ್‌ಎಸ್‌ಎಸ್ ಘಟಕ ಮುಂಡಾಜೆ, ಲಯನ್ಸ್ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿಕ್ಲಬ್ ಬೆಳ್ತಂಗಡಿ, ಮಸ್‌ಲಕ್ ದಶಮಾನೋತ್ಸವ ಕಾರ್ಯಕ್ರಮಗಳ ಸಮಿತಿ ಇವರ ಸಹಕಾರದೊಂದಿಗೆ ಮುಂಡಾಜೆಯ ಕೀರ್ತಿಶೇಷ ಜಿ.ಎನ್. ಭಿಡೆ ಜನ್ಮ ಶತಮಾನೋತ್ಸವ ಸಭಾಂಗಣದಲ್ಲಿ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.
ಭಾರತ್ ಸೇವಾದಲದ ರಾಜ್ಯ ತರಬೇತುದಾರ ಅಲೊ#àನ್ಸ್ ಫ್ರಾಂಕೋ, ಯೋಗಗುರು ಮತ್ತು ಭಾರತ್ ಸೇವಾದಲದ ಉಡುಪಿ ಜಿಲ್ಲಾ ಸಂಘಟಕ ಮಹೇಶ್‌ಎನ್. ಪತ್ತರ್ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನಡೆಸಿಕೊಟ್ಟರು.
ರಾಷ್ಟ್ರ ಧ್ವಜದ ವಿನ್ಯಾಸ, ವರ್ಣ, ಕಲ್ಪನೆಗಳು, ಹುಟ್ಟಿ ಬಂದ ರೀತಿ, ಬದಲಾವಣೆಗಳು ಆಗಿರುವ ಪರಿ, ಅದನ್ನು ಬಳಸುವ ವಿಧಾನ, ಇಳಿಸುವ ಮತ್ತು ಏರಿಸುವ ರೀತಿ, ಧ್ವಜವನ್ನು ಕಟ್ಟುವ ಬಗೆ, ಗೌರವ ನೀಡಬೇಕಾದ ಅಂಶ, ರಾಷ್ಟ್ರಗೀತೆ ಹಾಡುವ ಕ್ರಮ, ಧ್ವನಿಯ ಏರಿಳಿತಗಳು, ಹಾಡಬೇಕಾದ ಸೆಕುಂಡುಗಳು ಇತ್ಯಾದಿಯಾಗಿ ಪ್ರಾತ್ಯಕ್ಷಿಕೆ , ಚಿತ್ರ ಪ್ರದರ್ಶನದ ಮೂಲಕ ತರಬೇತಿಗಳನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆ ಹಾಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಜಾಲಿ ಡಿ’ಸೋಜಾ ಕಾರ್ಯಕ್ರಮ ಉದ್ಘಾಟಿಸಿದರು. ಯಂಗ್ ಚಾಲೆಂಜರ್ ಕ್ರೀಡಾ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‌ಅಧ್ಯಕ್ಷ ಡಾ| ಸುಧೀರ್ ಪ್ರಭು, ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ವಿಜಯ ಕುಮಾರ್, ಮಸ್‌ಲಕ್ ಕಾರ್ಯದರ್ಶಿ ಶಬೀರ್ ಬಿ.ಕೆ.ಎಚ್., ಯಂಗ್ ಚಾಲೆಂಜರ್ ಸಂಚಾಲಕ ನಾಮದೇವ ರಾವ್, ಗ್ರಾ. ಪಂ. ಸದಸ್ಯರಾದ ನಾರಾಯಣ ಗೌಡ, ಸುಮನಾ ಗೋಖಲೆ, ಅಶ್ವಿನಿ ಎ. ಹೆಬ್ಟಾರ್, ಸುರೇಶ್ ಹೆಗ್ಡೆ, ಯಂಗ್ ಚಾಲೆಂಜರ್ ಪದಾಧಿಕಾರಿಗಳಾದ ರಂಜಿನಿ, ವಿಜಯ ಕುಮಾರ್, ಬಾಬು ಪೂಜಾರಿ ಕೂಳೂರು, ಅಬ್ದುಲ್ ಮಜೀದ್ ಭಾಗವಹಿಸಿದ್ದರು.
ಉಪನ್ಯಾಸಕ ಪುರುಷೋತ್ತಮ ಶೆಟ್ಟಿ ಅಗರಿ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿದರು. ಉಪನ್ಯಾಸಕಿ ವಸಂತಿ ವಂದಿಸಿದರು. ಉಪನ್ಯಾಸಕ ವೃಂದ ಮತ್ತು ಸಮೂಹ ಸಂಘಟನೆಗಳು ಸಹಕಾರ ನೀಡಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
MUST WATCH
ಹೊಸ ಸೇರ್ಪಡೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.