ಹೆದ್ದಾರಿ ಬಂದ್; ದೇಗುಲ, ಸಾರಿಗೆ ಸಹಿತ ಎಲ್ಲ ವಲಯಕ್ಕೂ ನಷ್ಟ ಭೀತಿ
Team Udayavani, Sep 5, 2018, 11:14 AM IST
ಸುಬ್ರಹ್ಮಣ್ಯ: ಮಳೆ ಆರ್ಭಟ ಮತ್ತು ಭೂಕುಸಿತಕ್ಕೆ ನಲುಗಿ ಘಾಟಿ ರಸ್ತೆಗಳೆಲ್ಲ ಬಂದ್ ಆಗಿವೆ. ಕರಾವಳಿಯಿಂದ ರಾಜಧಾನಿ ಸಹಿತ ಪ್ರಮುಖ ನಗರಗಳಿಗೆ ಸಂಪರ್ಕ ಕಡಿತಗೊಂಡಿದೆ. ಬೆಂಗಳೂರು- ಮಂಗಳೂರು ರೈಲು ಯಾನ ಕೂಡ ಇಲ್ಲ. ಹೀಗಾಗಿ ಸಾರಿಗೆ, ವಾಣಿಜ್ಯ, ಉದ್ಯಮ, ವ್ಯಾಪಾರ ವಹಿವಾಟು ನಷ್ಟ ಭೀತಿ ಎದುರಿಸುತ್ತಿವೆ.
ಕರಾವಳಿಯಿಂದ ರಾಜಧಾನಿಗೆ ಮುಖ್ಯ ಸಂಪರ್ಕ ಕೊಂಡಿ ಶಿರಾಡಿ ಘಾಟಿ. ಉದ್ಯೋಗ, ವ್ಯಾಪಾರ, ವಹಿವಾಟುಗಳಲ್ಲಿ ಈ ರಸ್ತೆಗೆ ಪ್ರಧಾನ ಪಾತ್ರ. ಆದರೆ ಈಗ ಸಂಚಾರ ಸ್ಥಗಿತಗೊಂಡು ಕೊಡು-ಕೊಳ್ಳುವಿಕೆ, ವ್ಯವಹಾ
ರಕ್ಕೆ ತೊಂದರೆಯಾಗಿದೆ. ಬಸ್ ಓಡಾಟವಿಲ್ಲದೆ ಸಾರಿಗೆ ನಿಗಮಕ್ಕೆ ಆದಾಯವಿಲ್ಲ. ದೇಗುಲಗಳಲ್ಲಿ ಭಕ್ತರಿಲ್ಲದೆ ಕಾಣಿಕೆ ಸಂಗ್ರಹವಾಗುತ್ತಿಲ್ಲ. ಕರಾವಳಿಯ ಎಲ್ಲ ರಂಗಗಳಿಗೂ ಪ್ರಾಕೃತಿಕ ವಿಕೋಪದ ಪಶ್ಚಾತ್ ಪರಿಣಾಮ ತಟ್ಟಿದೆ.
ಶಿರಾಡಿಯಲ್ಲಿ ಆರು ಕಡೆ ಭೂಕುಸಿತ ಎಂಜಿನಿಯರಿಂಗ್- ಪ್ರೊಕ್ಯೂರ್‌ವೆುಂಟ್- ಕನ್‌ಸ್ಟ್ರಕ್ಷನ್ (ಇಪಿಸಿ) ವಿಧಾನ
ದಲ್ಲಿ ಶಿರಾಡಿ ಘಾಟಿ ಹೆದ್ದಾರಿಯ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತವಾದ ಕೆಲವೇ ದಿನಗಳಲ್ಲಿ ಭಾರೀ ಮಳೆಯಿಂದ ಅಲ್ಲಲ್ಲಿ ಭೂಕುಸಿತಗಳು ಸಂಭವಿಸಿದ್ದವು.
ಶಿರಾಡಿಯಿಂದ ಮಾರನಹಳ್ಳಿ ವರೆಗಿನ ಆರು ಕಡೆಗಳಲ್ಲಿ ರಸ್ತೆ ಬದಿ ಕುಸಿತ ಸಂಭವಿಸಿತ್ತು. ಇದರಿಂದ ವಾಹನ ಓಡಾಟಕ್ಕೆ ತಡೆ ಉಂಟಾಗಿದೆ. ಗುಡ್ಡ ಜರಿದ ಸ್ಥಳಗಳಲ್ಲಿ ದುರಸ್ತಿ ಆರಂಭಗೊಂಡು ಶೇ.80ರಷ್ಟು ಪೂರ್ಣಗೊಂಡಿದೆ. ವಾಹನ ಸಂಚಾರ ನಡೆಸಲು ಯೋಗ್ಯವಾಗಿದೆ.
ಇತರೆಡೆಗಿಂತ ಹಾನಿ ಕಡಿಮೆ
ಶಿರಾಡಿ ಹೆದ್ದಾರಿಯಲ್ಲಿ ಗುಡ್ಡದ ಮಣ್ಣು ಕುಸಿತ ಹಾಗೂ ಬದಿ ಕುಸಿತ ಸಂಭವಿಸಿದ್ದರೂ ಇತರ ಘಾಟಿ ಹೆದ್ದಾರಿ
ಗಳಿಗೆ ಹೋಲಿಸಿದರೆ ಇಲ್ಲಿ ಹಾನಿ ಕಡಿಮೆ. ದುರಸ್ತಿ ಕಾರ್ಯಕ್ಕೆ ವೇಗ ನೀಡಿದಲ್ಲಿ ಈ ಮಾರ್ಗವನ್ನು ಬೃಹತ್ ಗಾತ್ರದ ವಾಹನಗಳಿಗೆ ಅಲ್ಲದಿದ್ದರೂ ಸಾಮಾನ್ಯ ವಾಹನಗಳಿಗೆ ಬೇಗನೆ ಮುಕ್ತಗೊಳಿಸಬಹುದು.
ವಿಐಪಿ ವಾಹನ ಓಡುತ್ತಿವೆ
ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಎಲ್ಲ ವಾಹನಗಳ ಜಿಲ್ಲಾಧಿಕಾರಿಗಳ ಆದೇಶವಿದೆ. ಆದರೆ ನಿಷೇಧ ಉಲ್ಲಂ ಸಿ
ವಾಹನಗಳು ಓಡಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಇವು ಗಣ್ಯರ ವಾಹನಗಳು ಎನ್ನಲಾಗಿದ್ದು, ಸ್ಥಳಿಯರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.
ಕೇಂದ್ರ ಸಚಿವ ಡಿವಿಎಸ್ ಪತ್ರ
ದ.ಕ., ಉಡುಪಿ ಜಿಲ್ಲೆಗಳ ಸಾವಿರಾರು ಮಂದಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಸುಲಭ ಪ್ರಯಾಣ ಸಾಧ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಶಿರಾಡಿ ರಸ್ತೆಯ ದುರಸ್ತಿಯನ್ನು ಒಂದು ವಾರದ ಅವಧಿಯಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ರಾಜ್ಯ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
ಇತರೆಡೆಗೆ ಹೋಲಿಸಿದರೆ ಶಿರಾಡಿ ಘಾಟಿ ರಸ್ತೆಗೆ ಹಾನಿ ಕಡಿಮೆ. ಈ ರಸ್ತೆ ದುರಸ್ತಿಗೆ ಹೆಚ್ಚು ಆದ್ಯತೆ ಮತ್ತು ವೇಗ ನೀಡಿ ಶೀಘ್ರವಾಗಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಲೋಕೋಪಯೋಗಿ ಸಚಿವರಿಗೆ ಪತ್ರ ಬರೆದಿದ್ದೇನೆ.
ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವರು
*ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.