National Highway ಕಬ್ಬಿಣ ಪಟ್ಟಿ ಹಾನಿ; ಆಗುತ್ತಿಲ್ಲ ನಿರ್ವಹಣೆ
Team Udayavani, Jun 26, 2024, 6:35 AM IST
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಳವಡಿಸಲಾಗಿರುವ ಕಬ್ಬಿಣದ ತಡೆ ಬೇಲಿ ಪಟ್ಟಿ (ಮೆಟಲ್ ಬೀಮ್ ಕ್ರ್ಯಾಶ್ ಬ್ಯಾರಿಯರ್)ಗಳು ಬಹುತೇಕ ಕಡೆ ನಜ್ಜುಗುಜ್ಜಾಗಿದ್ದು, ನಿರ್ವಹಣೆಯೇ ಆಗುತ್ತಿಲ್ಲ.
ಅಪಘಾತಗಳು ಉಂಟಾದಾಗ ವಾಹನಗಳು ರಸ್ತೆಯಿಂದ ಹೊರಕ್ಕೆ ಅಥವಾ ಆಳವಾದ ಕಂದಕಗಳಿಗೆ ಬೀಳದಂತೆ ತಡೆಯಲು ಇವುಗಳನ್ನು ಅಳವಡಿಸಲಾಗುತ್ತದೆ. ಜಿಲ್ಲಾ ವ್ಯಾಪ್ತಿ ಯಲ್ಲಿ ಹಾದು ಹೋಗುವ ಪ್ರಮುಖ ಹೆದ್ದಾರಿಗಳಾದ ಎನ್‌ಎಚ್ 66, ಎನ್‌ಎಚ್ 73 ಹೆದ್ದಾರಿಗಳಲ್ಲಿ ದಶಕಗಳ ಹಿಂದೆ ರಸ್ತೆ ನಿರ್ಮಾಣದ ವೇಳೆ ಕಬ್ಬಿಣದ ಪಟ್ಟಿಗಳನ್ನು ಅಳವಡಿಸಲಾಗಿತ್ತು. ಪ್ರಸ್ತುತ ಅಲ್ಲಲ್ಲಿ ನಜ್ಜುಗುಜ್ಜಾಗಿರುವುದು, ತುಂಡಾ ಗಿರುವುದು ಕಾಣಲು ಸಿಗುತ್ತಿವೆ.
ದುರಸ್ತಿ ಕಾರ್ಯ ಆಗುತ್ತಿಲ್ಲ.
ಇಂತಹ ನಜ್ಜುಗುಜ್ಜಾದ ಕಬ್ಬಿಣದ ಪಟ್ಟಿಗಳನ್ನು ಬದಲಾಯಿಸಿ, ಹೊಸದಾಗಿ ಅಳವಡಿಸುವ ಕೆಲಸ ಮಾತ್ರ ಹೆದ್ದಾರಿ ಪ್ರಾಧಿಕಾರದ ಮೂಲಕ ನಡೆಯುತ್ತಿಲ್ಲ. ಹೆದ್ದಾರಿಯಲ್ಲಿರುವ ಗುಂಡಿಗಳಿಗೆ ತೇಪೆ,ಡಾಮರು, ಡಿವೈಡರ್‌ಗಳಿಗೆ ಬಣ್ಣ
ಬಳಿಯುವುದು, ಬ್ಲಿಂಕರ್ಗಳ ಅಳವಡಿಕೆ, ಬೀದಿ ದೀಪಗಳ ನಿರ್ವಹಣೆ, ಹುಲ್ಲು ಪೊದೆಗಳ ತೆರವು ಸೇರಿದಂತೆ ಎಲ್ಲ ರೀತಿಯ ಕೆಲಸಗಳು ಪ್ರತಿ ವರ್ಷ ನಡೆಯುತ್ತದೆ. ಆದರೆ ಈ ಪಟ್ಟಿಗಳನ್ನು ರಿಪೇರಿಮಾಡಲು ಮಾತ್ರ ಇಲಾಖೆ ಮುಂದಾಗು ತ್ತಿಲ್ಲ ಎನ್ನುವ ಆರೋಪಗಳು ಸಾರ್ವಜನಿಕವಲಯದಿಂದ ಕೇಳಿ ಬಂದಿವೆ.
ಹೆಚ್ಚಿನ ಅಪಾಯಕ್ಕೆ ಆಹ್ವಾನ
ಕೆಲವು ಕಡೆಗಳಲ್ಲಿ “ಪಟ್ಟಿ’ ಅಳವಡಿಸಿದ್ದ ಕಬ್ಬಿಣದ ಕಂಬಗಳು ಮಾತ್ರ ಉಳಿದಿದ್ದು, ಇವುಗಳೂ ಅಪಾಯಕ್ಕೆ ಆಹ್ವಾನ ನೀಡಿದಂತಿವೆ. ರಾತ್ರಿ ವೇಳೆ ವಾಹನ ಸವಾರರಿಗೆ ತಡೆ ಇರುವುದು ಗೋಚರಿಸಲು ಅಳವಡಿಸಲಾಗಿದ್ದ ಕೆಂಪು ಬಣ್ಣದ ರಿಫ್ಲೆಕ್ಟರ್‌ಗಳು ಕೂಡ ಮಾಯವಾಗಿದ್ದು, ಇದು ಕೂಡಾ ಅಪಾಯವೇ. ಸ್ಥಳೀಯರು ಕೂಡ ತಮ್ಮ ಆವಶ್ಯತೆಗಳಿಗಾಗಿ ಅವುಗಳನ್ನು ಕತ್ತರಿಸಿರುವುದು, ಕೆಲವು ಕಡೆಗಳಲ್ಲಿ ಕಾಮಗಾರಿಗಳಿಗಾಗಿ ತುಂಡರಿಸಿ ತೆಗೆದು ಪುನಃ ಅಳವಡಿಸದಿರುವುದೂ ಇದೆ.
ಹೆದ್ದಾರಿಗಳಲ್ಲಿ ಪ್ರತಿನಿತ್ಯ ಎಂಬಂತೆ ಭೀಕರ ಅಪಘಾತಗಳು ಉಂಟಾಗುತ್ತಿದ್ದು, ಪ್ರಾಣ ಹಾನಿಯೂ ಸಂಭವಿಸುತ್ತಿವೆ. ರಸ್ತೆ ಬದಿಯ ಕಂದಕಗಳಿಗೆ ವಾಹನಗಳು ಬೀಳುವುದು ಕೂಡ ಅಲ್ಲಲ್ಲಿ ವರದಿಯಾಗುತ್ತಿದೆ. ಹೆದ್ದಾರಿಗಳ ನಿರ್ವಹಣೆ ವೇಳೆ ಕಬ್ಬಿಣದ ತಡೆಬೇಲಿ ಬಗ್ಗೆಯೂ ಅಧಿಕಾರಿಗಳು ಗಮನ ಹರಿಸುವ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.