ನವೆಂಬರ್‌ನಲ್ಲಿ ರಾಷ್ಟ್ರೀಯ ಸಾಹಿತ್ಯ ಉತ್ಸವ
Team Udayavani, Jun 30, 2018, 11:03 AM IST
ಮಹಾನಗರ : ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್‌ನ ಆಡಳಿತ ಮಂಡಳಿ ಸಭೆಯು ಅಧ್ಯಕ್ಷ ಮಾಜಿ ಮುಖ್ಯಮಂತ್ರಿ, ಸಂಸದ ಡಾ| ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯಲ್ಲಿ ಗಿಳಿವಿಂಡು ಸದನದಲ್ಲಿ ಜರಗಿತು. ಸಭೆಯಲ್ಲಿ ಗಿಳಿವಿಂಡು ಯೋಜನೆಯಲ್ಲಿ ನಮೂದಿಸಿದ ಆಡಿಟೋರಿಯಂ ಭವನದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಸೆಪ್ಟಂಬರನಲ್ಲಿ ಉದ್ಘಾಟಿಸಲು ಸಿದ್ಧತೆ ನಡೆಸಬೇಕು ಎಂದು ತೀರ್ಮಾನಿಸಲಾಯಿತು. ಸ್ಮಾರಕ ಟ್ರಸ್ಟ್‌ನ ಆಶ್ರಯದಲ್ಲಿ ರಾಷ್ಟ್ರೀಯ ಸಾಹಿತ್ಯ ಉತ್ಸವವನ್ನು ನವೆಂಬರ ತಿಂಗಳಲ್ಲಿ ನಡೆಸಲಿದ್ದು ಪೂರ್ವ ತಯಾರಿಗಾಗಿ ಉಪಸಮಿತಿಯನ್ನು ರಚಿಸಲಾಯಿತು.
ವಿವಿಧ ಸಾಂಸ್ಕೃತಿಕ ಕೇಂದ್ರಗಳೊಂದಿಗೆ ಸಂಪರ್ಕಿಸಿ ಸ್ಥಳೀಯರನ್ನು ಒಳಗೊಂಡಂತೆ ವೈವಿಧ್ಯ ಚಟುವಟಿಕೆಗಳನ್ನು ನಡೆಸುವ ಬಗ್ಗೆ ತೀರ್ಮಾನಿಸಲಾಯಿತು ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು ಟ್ರಸ್ಟಿಗಳಾದ ಡಿ.ಕೆ. ಚೌಟ, ಪ್ರೊ| ವಿವೇಕ ರೈ, ಜಯಂತ ಕಿಣಿ, ಸುಭಾಶ್ಚಂದ್ರ ಕಣ್ವತೀರ್ಥ, ತೇಜೋಮಯ, ಡಾ| ರಮಾನಂದ ಬನಾರಿ ಹಾಗೂ ಆಡಳಿತಾಧಿಕಾರಿ ಕಮಲಾಕ್ಷ ಈ ಸಂದರ್ಭ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.