ಕಳಪೆ ಕಾಮಗಾರಿಗೆ ಸ್ಥಳೀಯರ ತಡೆ
Team Udayavani, Dec 14, 2017, 11:54 AM IST
ಸುರತ್ಕಲ್ : ಹೆದ್ದಾರಿ 66ರ ಸರ್ವಿಸ್ ರಸ್ತೆಯನ್ನು ಕಳಪೆಯಾಗಿ ಮಾಡಲಾಗುತ್ತಿದ್ದು, ಮಣ್ಣು, ಧೂಳು ತೆಗೆಯದೆಯೇ ಡಾಮರು ಹಾಕುವ ಕಾಮಗಾರಿ ನಡೆಯುತ್ತಿರುವುದನ್ನು ಮಂಗಳೂರು ನಾಗರಿಕ ಸಮಿತಿ ಹಾಗೂ ಸ್ಥಳೀಯರು ವಿರೋಧಿಸಿದ ಬಳಿಕ ಈಗ ಗುಣಮಟ್ಟದ ಕಾಮಗಾರಿ ಆರಂಭವಾಗಿದೆ. ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆಗಮಿಸಿ ರಸ್ತೆಯ ಕಾಮಗಾರಿ ವೀಕ್ಷಿಸಿದರು. ಸರ್ವಿಸ್ ರಸ್ತೆಯ ಅಗಲವನ್ನು ನಿಯಮದಂತೆ 4ರಿಂದ 5.5 ಮೀಟರ್‌ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಯಿತು.
ಕಳಪೆ ಕಾಮಗಾರಿ!
ಸುರತ್ಕಲ್ ಹಳೆ ಪೊಲೀಸ್ ಸ್ಟೇಷನ್ ಬಳಿ ಸರ್ವಿಸ್ ರಸ್ತೆಯನ್ನು ಗುತ್ತಿಗೆದಾರರು ತಮಗೆ ತೋಚಿದಂತೆ ಮಾಡುತ್ತಿದ್ದರು. ಗುಣಮಟ್ಟವನ್ನು ಪರೀಕ್ಷಿಸಲು ಅಧಿಕಾರಿಗಳೂ ಇರಲಿಲ್ಲ. ಮಣ್ಣಿನ ಮೇಲೆಯೇ ಜಲ್ಲಿ ಸುರಿದು ಡಾಮರು ಹಾಕುತ್ತಿದ್ದರು. ಸರ್ವಿಸ್ ರಸ್ತೆಯನ್ನು ವಿಸ್ತಾರಗೊಳಿಸಿ ಬಸ್ಸುಗಳ ಓಡಾಟಕ್ಕೆ ಏಕಮುಖ ಸಂಚಾರಕ್ಕೆ ನಿರ್ಧರಿಸಲಾಗಿದೆ. ಚರಂಡಿಗಳಿಗೆ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸಿ ಅಗಲಗೊಳಿಸಲಾಗಿದೆ.
ತೆರಿಗೆ ಹಣ ಪೋಲು ಮಾಡುವುದು ಸಲ್ಲ
ಸರ್ವಿಸ್ ರಸ್ತೆಯನ್ನು ಕಳಪೆಯಾಗಿ ಮಾಡುತ್ತಿರುವುದನ್ನು ಗಮನಿಸಿ ತತ್‌ಕ್ಷಣ ಸ್ಥಳಕ್ಕೆ ತೆರಳಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದೇವೆ. ಈ ಬಗ್ಗೆ ಹೈವೇ ಎಂಜಿನಿಯರ್‌ಗಳಿಗೂ ಮಾಹಿತಿ ನೀಡಿದ್ದೇವೆ. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಸರಿಯಲ್ಲ. ಈಗ ಅಧಿಕಾರಿಗಳು ವೀಕ್ಷಿಸಿ ಪೂರಕ ಕ್ರಮಗಳಿಗೆ ಸೂಚಿಸಿರುವುದು ಉತ್ತಮ ಹೆಜ್ಜೆ.
– ಸುಭಾಶ್ಚಂದ್ರ ಶೆಟ್ಟಿ , ಅಧ್ಯಕ್ಷರು,
ಮಂಗಳೂರು ನಾಗರಿಕ ಸಮಿತಿ
ರಸ್ತೆ ಅಗಲಗೊಳಿಸಲು ಸೂಚನೆ
ಸರ್ವಿಸ್ ರಸ್ತೆಯ ಕಾಮಗಾರಿ ಗುಣಮಟ್ಟದ ಕುರಿತು ನಾಗರಿಕ ಸಮಿತಿ ನಮ್ಮ ಗಮನಕ್ಕೆ ತಂದಿದೆ. ತತ್‌ಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಗುಣಮಟ್ಟದೊಂದಿಗೆ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಸರ್ವಿಸ್ ರಸ್ತೆಯನ್ನು ಅಗಲಗೊಳಿಸಲೂ ಸೂಚಿಸಲಾಗಿದೆ.
– ಅಜಿತ್ ಕುಮಾರ್, ಎಂಜಿನಿಯರ್ ಹೆದ್ದಾರಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.