ವೇಸ್ಟ್‌ ಮ್ಯಾನೇಜ್‌ಮೆಂಟ್‌ನಿಂದ ಒಣ ಕಸ ಸಂಸ್ಕರಣೆ

ನೇಚರ್‌ ಫ್ರೆಂಡ್ಲಿ ರಿಸೈಕಲ್‌ ಇಂಡಸ್ಟ್ರೀಸ್‌

Team Udayavani, Jun 6, 2019, 6:00 AM IST

0406MLR24

ತ್ಯಾಜ್ಯಗಳನ್ನು ಪರಿಸರ ಸ್ನೇಹಿಯಾಗಿ ಮರು ಸಂಸ್ಕರಣೆ ಮಾಡುವ ಘಟಕಗಳು.

ಮಹಾನಗರ: ಸದ್ಯ ಪ್ರತಿ ಮನೆಯಲ್ಲೂ ಪ್ಲಾಸ್ಲಿಕ್‌, ಲೋಹ, ಗ್ಲಾಸ್‌ ಸೇರಿದಂತೆ ಇನ್ನಿತರ ವಸ್ತುಗಳ ಬಳಕೆ ಸಾಮಾನ್ಯ. ಕುಡಿಯುವ ನೀರನ್ನೂ ಕೂಡ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಮಾರಾಟ, ಸೇವನೆ ಮಾಡಲಾಗುತ್ತಿದೆ. ಬಳಸಿದ ಬಳಿಕ ಆ ತ್ಯಾಜ್ಯಗಳನ್ನು ಡಸ್ಟ್‌ ಬೀನ್‌ಗೆ ಹಾಕಿ ಕೈ ತೊಳೆದುಕೊಳ್ಳುತ್ತೇವೆ. ಆದರೆ ಎಸೆದ ತ್ಯಾಜ್ಯಗಳನ್ನು ಎಲ್ಲಿಗೆ ಹೋಗಿ ಸೇರುತ್ತದೆ ಎಂಬುದು ದೊಡ್ಡ ಪ್ರಶ್ನೆ. ಕರಗದ ಇಂತಹ ತ್ಯಾಜ್ಯಗಳಿಂದ ಪರಿಸರಕ್ಕಾಗುವ ಹಾನಿಯ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ.

ಬಳಸಿ ಎಸೆದ ಪ್ಲಾಸ್ಟಿಕ್‌, ಪೇಪರ್‌, ಲೋಹದಂತಹ ತ್ಯಾಜ್ಯಗಳು ಪರಿಸರ ನಾಶಕ್ಕೆ ಮಾತ್ರವಲ್ಲದೆ ಪ್ರಾಣಿಗಳ ಜೀವಕ್ಕೆ ಕುತ್ತಾಗಿ ಬದಲಾಗುತ್ತಿದೆ. ಪರಿಸರ ಕಾಳಜಿ ಕುರಿತಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರೂ ನಿತ್ಯ ಪ್ರತಿ ಮನೆಯಿಂದ ಮರುಬಳಕೆ ಮಾಡಬಹುದಾದ ಒಣ ತ್ಯಾಜ್ಯಗಳು ಡಂಪಿಂಗ್‌ ಯಾರ್ಡ್‌ ಸೇರುತ್ತಿದೆ. ಪ್ರಾರಂಭಿಕ ಹಂತದಲ್ಲಿ ಡಂಪಿಂಗ್‌ ಯಾರ್ಡ್‌ಗಳಲ್ಲಿ ಮಣ್ಣು ತೆಗೆದು ಮುಚ್ಚಲಾಗುತ್ತಿತ್ತು. ಈಗ ಹಸಿ ಕಸ , ಒಣ ಕಸ ಪ್ರತ್ಯೇಕಿಸಿ ಸಂಸ್ಕರಣೆ ಮಾಡುತ್ತಾರೆ. ಆದರೆ ಹಸಿ ಕಸ ಒಣ ಕಸ ಪ್ರತ್ಯೇಕಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಎಷ್ಟೇ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ನೇಚರ್‌ ಫ್ರೆಂಡ್ಲಿ ರಿ ಸೈಕಲ್‌ ಇಂಡಸ್ಟ್ರೀಸ್‌ ಆ್ಯಂಡ್‌ ವೇಸ್ಟ್‌ ಮ್ಯಾನೇಜ್‌ ಮೆಂಟ್‌
ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್‌, ವೇಸ್ಟ್‌ ಪೇಪರ್‌, ಇ- ವೇಸ್ಟ್‌ಗಳಂತಹ ತ್ಯಾಜ್ಯಗಳನ್ನು ಪರಿಸರ ಸ್ನೇಹಿಯಾಗಿ ಮರು ಸಂಸ್ಕರಣೆ ಮಾಡುವ ಜವಾಬ್ದಾರಿಯುತ ಕೆಲಸವನ್ನು ನೇಚರ್‌ ಫ್ರೆಂಡ್ಲಿ ರಿ ಸೈಕಲ್‌ ಇಂಡ ಸ್ಟ್ರೀಸ್‌ ಆ್ಯಂಡ್‌ ವೇಸ್ಟ್‌ ಮ್ಯಾನೇಜ್‌ ಮೆಂಟ್‌ ಮಾಡುತ್ತಿದೆ. ಒಣ ತ್ಯಾಜ್ಯ ನಿರ್ವಹಣೆಯಲ್ಲಿ ಸಮಗ್ರ ಸೇವೆಯಾಗಿದೆ. ಈ ಸೇವೆಯಲ್ಲಿ 1989ರಿಂದ ಸಂಸ್ಥೆ ತೊಡಗಿಕೊಂಡಿದ್ದು, ಇದಕ್ಕಾಗಿ ಅತಿ ಹೆಚ್ಚು ಪರಿಣತಿ ಹೊಂದಿರುವ ತಂಡವನ್ನು ರಚಿಸಿದೆ.

ಪ್ರಾರಂಭಿಕ ಹಂತದಲ್ಲಿ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ ಸಮೀಪ ಒಣ ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪಿಸಿದ ಸಂಸ್ಥೆ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬೈಕಂಪಾಡಿ ಕೈಗಾರಿಕಾ ವಲಯ ಹಾಗೂ ಕುಳೂರಿನಲ್ಲಿ ತಮ್ಮ ಉದ್ದಿಮೆ ಆರಂಭಿಸಿತು. ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡುವ ಉದ್ದೇಶದಿಂದ ಸಂಸ್ಥೆ ನಿಷ್ಠೆಯಿಂದ ಕಾರ್ಯಚರಿಸುತ್ತಿದೆ.

ಬ್ಯಾಗ್‌, ಭಿತ್ತಿಪತ್ರ, ತೋರಣ, ಫ್ಲೆಕ್ಸ್‌, ಬಾವುಟ, ತಟ್ಟೆ, ಲೋಟ, ಬಾಟಲಿ, ಹಾಳೆ, ಕವರ್‌, ಮೊಬೆ„ಲ್‌, ಟಿ.ವಿ. ಸೆಟ್‌, ಕುರ್ಚಿ, ಕ್ಯಾನ್‌, ಡ್ರಮ್‌, ಟ್ಯಾಂಕ್‌, ಬಕೆಟ್‌, ಮಗ್‌, ಕೊಡ, ಆಹಾರ ಪೊಟ್ಟಣ, ಗುಟ್ಕಾ ಪ್ಯಾಕೆಟ್‌ ಒಳಗೊಂಡು ನಾನಾ ರೀತಿಯಲ್ಲಿರುವ ಈ ಪ್ಲಾಸ್ಟಿಕ್‌ ಕಸ ನಿತ್ಯ ರಾಶಿ ರಾಶಿ ಸಂಗ್ರಹವಾಗುತ್ತಿದೆ. ಸರಿಯಾಗಿ ಸಂಗ್ರಹಿಸಿ ಮರು ಸಂಸ್ಕರಣೆಗೆ ಮಾಡದೆ ಎಲ್ಲೆಂದರಲ್ಲಿ ಹರಡಿ ಪರಿಸರ ಹದಗೆಡಿಸುತ್ತಿದೆ. ಜಾನುವಾರುಗಳಿಗೆ ಆಹಾರವಾಗುತ್ತಿದೆ. ಮನುಷ್ಯನ ಆರೋಗ್ಯಕ್ಕೂ ಅಪಾಯ ತರುತ್ತಿದೆ. ಚರಂಡಿ, ಗಟಾರಗಳಿಗೆ ಬಿದ್ದು ಅವಾಂತರದ ಸೃಷ್ಟಿಸು ತ್ತಿದೆ. ನೇಚರ್‌ ಫ್ರೆಂಡ್ಲಿ ರಿ ಸೈಕಲ್‌ ಇಂಡಸ್ಟ್ರೀಸ್‌ ಆ್ಯಂಡ್‌ ವೇಸ್ಟ್‌ ಮ್ಯಾನೇಜ್‌ ಮೆಂಟ್‌ ಇಂತಹ ಕಸಗಳನ್ನು ಸಂಗ್ರಹಿಸಿ ಸಂಸ್ಕರಣೆ ಮಾಡಿ ಪರಿಸರ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದೆ.

ವೇಸ್ಟ್‌ ಪೇಪರ್‌
ಮರುಬಳಕೆ ಮಾಡಬಹುದಾದ ತ್ಯಾಜ್ಯಗಳನ್ನು ಡಸ್ಟ್‌ಬೀನ್‌ಗಳಿಗೆ ಹಾಕುವ ಬದಲಾಗಿ ಸಂಗ್ರಹಿಸಿ ದೊಡ್ಡ ಮಟ್ಟದಲ್ಲಿ ಸಂಸ್ಥೆಗೆ ನೀಡಿದರೆ ಅದನ್ನು ಮರುಬಳಕೆ ಮಾಡುವಂತೆ ತಯಾರು ಮಾಡಲಾಗುತ್ತದೆ.

ಮೆಟಲ್‌, ಗ್ಲಾಸ್‌ ವೇಸ್ಟ್‌ಗಳು
ಎಲ್ಲ ತರಹದ ಲೋಹ ವಸ್ತುಗಳು ಹಾಗೂ ಗ್ಲಾಸ್‌ಗಳನ್ನೂ ಮರುಬಳಕೆ ಮಾಡಬಹುದಾಗಿದೆ. ಇದನ್ನು ಒಂದು ಬಾರಿ ಮಾತ್ರವಲ್ಲದೇ ಹಲವು ಬಾರಿ ಮರುಬಳಕೆ ಮಾಡಬಹುದಾಗಿದೆ. ಅದರಂತೆ ರಬ್ಬರ್‌, ತೆಂಗಿನ ಚಿಪ್ಪು, ಟಯರ್‌, ಎಲೆಕ್ಟ್ರಾನಿಕ್‌ ವೇಸ್ಟ್‌ಗಳಾದ ಬ್ಯಾಟರಿ, ವಯರ್‌ ಹಾಗೂ ಕಂಪ್ಯೂಟರ್‌ ವೇಸ್ಟ್‌ಗಳನ್ನು ಸಂಸ್ಥೆಗೆ ನೀಡಿದರೆ ಮರು ಸಂಸ್ಕರಣೆ ಮಾಡಲಾಗುತ್ತದೆ.

ಸಂಸ್ಥೆ ಪರಿಸರ ಕಾಳಜಿಯೊಂದಿಗೆ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಬಳುವಳಿಯಾಗಿ ಕೊಡುವ ನಿಟ್ಟಿನಲ್ಲಿ ಕಾರ್ಯಚರಿಸುತ್ತಿದೆ. ಸದ್ಯ ಡಂಪಿಂಗ್‌ ಯಾರ್ಡ್‌ಗಳಿಂದ ಒಣ ಕಸಗಳನ್ನು ಸಂಗ್ರಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮನೆಗಳಿಂದಲೇ ಕಸ ಸಂಗ್ರಹಿಸುವ ಬಗ್ಗೆ ಯೋಜನೆ ರೂಪಿಸಲಾಗುತ್ತದೆ ಎಂದು ಸಂಸ್ಥೆಯ ಹಾರೀಸ್‌ ಮೊಹಮ್ಮದ್‌ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ www.naturefriendlyrecycle.in ಹಾಗೂ [email protected] ಸಂಪರ್ಕಿಸಬಹುದು.

ಪ್ಲಾಸ್ಟಿಕ್‌ ಪರಿಸರಕ್ಕೆ ಮಾರಕ
ಜಗತ್ತಿನ ಎಲ್ಲ ಭಾಗಗಳಲ್ಲೂ ಅತಿ ಹೆಚ್ಚು ಬಳಕೆಯಾಗುವ ವಸ್ತುಗಳಲ್ಲಿ ಪ್ಲಾಸ್ಟಿಕ್‌ ಕೂಡ ಒಂದು. ಬಳಸಿ ಎಲ್ಲೆಂದರಲ್ಲಿ ಎಸೆಯುವುದರಿಂದ ಇದು ಮಾನವ ಸಂಕುಲದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅದಕ್ಕಾಗಿ ಸಂಸ್ಥೆ ಇದನ್ನು ಪರಿಸರ ಸ್ನೇಹಿಯಾಗಿ ಸಂಸ್ಕರಣೆ ಮಾಡಲು ಮುತುವರ್ಜಿ ವಹಿ ಸುತ್ತಿದೆ. ನಿತ್ಯ ಹಲವು ಟನ್‌ ಪ್ಲಾಸ್ಟಿಕ್‌ಗಳನ್ನು ಮರು ಸಂಸ್ಕರಣೆ ಮಾಡುತ್ತಿದೆ.

ಟಾಪ್ ನ್ಯೂಸ್

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ

4-soldier

Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

Christmas: ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್‌ ಆಚರಣೆ

de

Mangaluru: ಅಪರಿಚಿತ ವ್ಯಕ್ತಿ ಸಾವು

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ  ಸೇವೆ

ಜೀವ ರಕ್ಷಕ ಕ್ರಿಟಿಕಲ್‌ ಕೇರ್‌ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.