ನವಮಂಗಳೂರು ಬಂದರು: ಪ್ರಥಮ ಬ್ರೇಕ್ ಬಲ್ಕ್ ಗೋಡಂಬಿ ಆಮದು
Team Udayavani, Feb 7, 2020, 1:23 AM IST
ಸಾಂದರ್ಭಿಕ ಚಿತ್ರ
ಪಣಂಬೂರು: ಕಡಿಮೆ ವೆಚ್ಚದಲ್ಲಿ ಮೊದಲ ಬಾರಿಗೆ ತಾಂಜಾನಿಯಾದಿಂದ ನವಮಂಗಳೂರು ಬಂದರು ಮೂಲಕ ಬೃಹತ್ ಹಡಗಿನಲ್ಲಿ ಮಂಗಳೂರಿಗೆ 22,000 ಟನ್ ಕಚ್ಚಾ ಗೋಡಂಬಿ ಫೆ. 7ರಂದು ಶುಕ್ರವಾರ ಆಗಮಿಸಲಿದೆ.
ಈ ಹಿಂದೆ ಗೋಡಂಬಿ ಕಂಟೈನರ್ ಮೂಲಕ ಬರುತ್ತಿತ್ತು. ಆಗ ಗೇರುಬಿಜವು ತೇವಾಂಶ ಹೀರಿಕೊಂಡು ಗುಣಮಟ್ಟ ಕುಸಿಯುವ ಭೀತಿ ಇತ್ತು. ಆದರೆ ಈ ಬಾರಿ ಬ್ಯಾಗೇಜ್ ಆಗಿ ಬ್ರೇಕ್ ಬಲ್ಕ್ ಮೂಲಕ ಹಡಗಿನಲ್ಲಿ ತುಂಬಿಸಿ ತರಲಾಗುತ್ತಿದೆ. ಇದರಿಂದ ಕಚ್ಚಾ ಗೋಡಂಬಿಯ ಗುಣಮಟ್ಟದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಹಾಗೂ ನಿರ್ವಹಣಾ ವೆಚ್ಚವೂ ಕಡಿಮೆಯಾಗುತ್ತದೆ.
ಮಂಗಳೂರಿನ ಎಂಎಂಪಿಎಸ್‌ನ ಮಾಲಕ ಎಂ. ನರಹರಿ ಪ್ರಭು ಮಾಲಕತ್ವದ ಕಂಪೆನಿ ಆಮದು ಮಾಡಿಕೊಳ್ಳುತ್ತಿದೆ. ಜ. 28ರಂದು ತಾಂಜಾನಿಯಾದಿಂದ ಹಡಗು ಯಾನ ಆರಂಭಿಸಿದ್ದು ಹತ್ತು ದಿನದಲ್ಲಿ ನವಮಂಗಳೂರು ಬಂದರು ತಲುಪುತ್ತಿದೆ. ಅಮೋಘ ಶಿಪ್ಪಿಂಗ್ ಸರಕು ನಿರ್ವಹಣೆ ಮಾಡಲಿದೆ.
ಮಂಗಳೂರು ಬಂದರು ಮೂಲಕ ಇದೇ ಪ್ರಥಮ ಬಾರಿಗೆ ಬ್ರೇಕ್ ಬಲ್ಕ್ ಮೂಲಕ ಕಚ್ಚಾ ಗೋಡಂಬಿ ಆಮದಾಗುತ್ತಿದೆ. ಟ್ಯಾನ್‌ಲಾಂಗ್ ವಿಯೆಟ್ನಾಂ ಕಂಪೆನಿ ಪ್ರಥಮ ಬಾರಿಗೆ ಬೃಹತ್ ಕಚ್ಚಾ ಗೋಡಂಬಿಯನ್ನು ಭಾರತಕ್ಕೆ ತರಿಸುತ್ತದೆ. ದ.ಕ., ಉಡುಪಿ ಜಿಲ್ಲೆಗಳಲ್ಲಿ ಮತ್ತು ಕೇರಳ, ಮಹಾರಾಷ್ಟ್ರ ರಾಜ್ಯಗಳ ಗೋಡಂಬಿ ಕಾರ್ಖಾನೆಗಳಿಗೆ ನಾನು ವಿತರಿಸುತ್ತಿದ್ದೇನೆ.
– ಎಂ. ನರಹರಿ ಪ್ರಭು, ಮಾಲಕರು, ಎಂಎಂಪಿಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Mangalore: ಪ್ರಯಾಣಿಕರಿಗಾಗಿ ಸಿಗ್ನಲ್‌ಗಳಲ್ಲೇ ಬಸ್ ನಿಲುಗಡೆ; ಅನಾಹುತಕ್ಕೆ ಎಡೆ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Mangaluru: ಬೆಳ್ಳಂಬೆಳಗ್ಗೆ ವಿಮಾನ ನಿಲ್ದಾಣದ ಪರಿಸರದಲ್ಲಿ ಚಿರತೆ ಓಡಾಟ… ಪರಿಶೀಲನೆ
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.