ನವಮಂಗಳೂರು ಬಂದರು: ಕಾರ್ಯಾಚರಣೆಗೆ ಸಿದ್ಧವಾಗಿದೆ ಕಂಟೈನರ್ ಸ್ಕ್ಯಾನರ್
Team Udayavani, Dec 3, 2019, 8:26 PM IST
ಮಹಾನಗರ: ಮಂಗಳೂರಿನ ಪ್ರತಿಷ್ಠಿತ ನವಮಂಗಳೂರು ಬಂದರಿಗೆ (ಎನ್‌ಎಂಪಿಟಿ) ಫ್ರಾನ್ಸ್‌ನಿಂದ ತಂದಿರುವ ವಿಶೇಷ ಸೌಲಭ್ಯಗಳ “ಕಂಟೈನರ್ ಸ್ಕ್ಯಾನರ್’ ಈ ತಿಂಗಳಾಂತ್ಯದಿಂದ ಕಾರ್ಯಾಚರಿಸಲಿದೆ.
ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಬ್ಯಾಗ್‌ಗಳನ್ನು ಸ್ಕ್ಯಾನ್ ಮಾಡುವ ರೀತಿಯಲ್ಲಿ ಎನ್‌ಎಂಪಿಟಿಯಲ್ಲಿ ಕಾರ್ಯನಿರ್ವಹಿಸುವ ಕಂಟೈನರ್ ಅನ್ನು ವೇಗವಾಗಿ ಸ್ಕ್ಯಾನ್ ಮಾಡುವ ಹೊಸ ಪರಿಕರ ಇದಾಗಿದೆ. ನೂತನ ಸ್ಕ್ಯಾನರ್ ಈಗಾಗಲೇ ಎನ್‌ಎಂಪಿಟಿಗೆ ಬಂದಿದ್ದು, ತಾಂತ್ರಿಕವಾಗಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
ಸಾಮಾನ್ಯವಾಗಿ ಎನ್‌ಎಂಪಿಟಿಗೆ ಕಂಟೈನರ್‌ಗಳ ಮೂಲಕ ಬರುವ ವಸ್ತುಗಳನ್ನು ಹಡಗುಗಳಿಗೆ ತುಂಬಿಸುವ ಮೊದಲು, ಹಡಗಿನಿಂದ ಕಂಟೈನರ್‌ಗೆ ತುಂಬಿಸಿದ ಬಳಿಕ ಕಂಟೈನರ್ ತಪಾಸಣೆ ನಡೆಸಲಾಗುತ್ತದೆ. ಇಲ್ಲಿಯವರೆಗೆ ಇಂತಹ ಕಂಟೈನರ್‌ಗಳನ್ನು ಮಾನವ ಶ್ರಮದಿಂದ ಪರಿಶೀಲಿಸಲಾಗುತ್ತಿತ್ತು. ಹೀಗಾಗಿ ಕಂಟೈನರ್‌ಗಳ ತಪಾಸಣೆಗೆ ಹಲವು ಸಮಯ ಬೇಕಾಗುತ್ತಿತ್ತು. ಜತೆಗೆ ಪೂರ್ಣ ಮಟ್ಟದಲ್ಲಿ ಕಂಟೈನರ್ ತಪಾಸಣೆಯೂ ನಡೆಯುತ್ತಿರಲಿಲ್ಲ. ಇದೀಗ “ಕಂಟೈನರ್ ಸ್ಕ್ಯಾನರ್’ ಎಂಬ ಹೊಸ ವಾಹನ ಬಂದ ಕಾರಣದಿಂದ ಮಾನವ ಶ್ರಮ ಇಲ್ಲಿ ಅಗತ್ಯವಿಲ್ಲ. ಬದಲಾಗಿ, ಎಲ್ಲ ಕಂಟೈನರ್ ಅನ್ನು ವಾಹನ ಮಾದರಿಯ ಸ್ಕ್ಯಾನರ್‌ನಲ್ಲಿಯೇ ತಪಾಸಣೆ ನಡೆಸಲಾಗುತ್ತದೆ.
20 ಕಂಟೈನರ್ ತಪಾಸಣೆ
ಹೊಸ ಸ್ಕ್ಯಾನರ್ ಮುಖೇನ 1 ಗಂಟೆಯಲ್ಲಿ 40 ಟನ್ ಸಾಮರ್ಥ್ಯದ 20 ಕಂಟೈನರ್ ತಪಾಸಣೆ ನಡೆಸಲು ಸಾಧ್ಯ. ಮಿನಿ ಬಸ್ ಮಾದರಿಯಲ್ಲಿ ನೂತನ ಸ್ಕ್ಯಾನರ್ ಕಾರ್ಯನಿರ್ವಹಿಸಲಿದೆ. ಕಂಟೈನರ್ ಹೊರಭಾಗದಿಂದಲೇ ಸ್ಕ್ಯಾನರ್ ವಾಹನವು ತಪಾಸಣೆ ನಡೆಸಲಿದೆ. ಈ ಮೂಲಕ ಕಂಟೈನರ್ ಒಳಗೆ ಯಾವೆಲ್ಲ ವಸ್ತುಗಳಿವೆ? ಹಾಗೂ ಅದರ ಪ್ರಮಾಣ, ಕಾನೂನುಬಾಹಿರ ವಸ್ತುಗಳಿವೆಯೇ? ಎಂಬ ಎಲ್ಲ ಮಾಹಿತಿಗಳನ್ನು ಜೆರಾಕ್ಸ್ ಮಾದರಿಯ ಪ್ರತಿಯಲ್ಲಿ ನೀಡಲಿದೆ.
ಏನಿದು ಸ್ಕ್ಯಾನರ್?
ಎನ್‌ಎಂಪಿಟಿಗೆ ಹಡಗುಗಳ ಮೂಲಕ ಬರುವ ಮತ್ತು ಹೋಗುವ ವಸ್ತಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಬದಲು ವಾಹನವನ್ನೇ ಪೂರ್ಣವಾಗಿ ಸ್ಕ್ಯಾನ್ ಮಾಡುವ ನೂತನ ಸಲಕರಣೆ ಇದು. 40 ಅಡಿ ಎತ್ತರದ ಕಂಟೈನರ್‌ಗಳ ಒಳಗೆ ಇರುವ ಎಲ್ಲ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ತಪಾಸಣೆ ಮಾಡಲು ಇದರಿಂದ ಸಾಧ್ಯವಾಗಲಿದೆ. ದೇಶದ ಇತರ ಬಂದರುಗಳಲ್ಲಿ ಈ ಸೌಲಭ್ಯ ಈಗಾಗಲೇ ಲಭ್ಯವಿದ್ದು, ಇದೀಗ ಮಂಗಳೂರು ಬಂದರಿಗೆ ಬಂದಿದೆ.
ದೇಶದ ನೌಕಾಯಾನ ಸಚಿವಾಲಯದ ನಿರ್ದೇಶನದ ಮೇರೆಗೆ ನೂತನ ಸ್ಕ್ಯಾನರ್ ಅನ್ನು ಮಂಗಳೂರಿಗೆ ತರಲಾಗಿದೆ. ಫ್ರಾನ್ಸ್ ತಯಾರಿಕೆಯಾದ ಈ ಯಂತ್ರವನ್ನು ಎನ್‌ಎಂಪಿಟಿಯ ಕಸ್ಟಮ್ಸ್ ಆಫೀಸ್‌ನಲ್ಲಿ ನಿರ್ವಹಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ತಿಂಗಳಾಂತ್ಯಕ್ಕೆ ಕಾರ್ಯಾಚರಣೆ
ಎನ್‌ಎಂಪಿಟಿಗೆ ನೂತನವಾಗಿ ತಂದಿರುವ “ಕಂಟೈನರ್ ಸ್ಕ್ಯಾನರ್’ ಈ ತಿಂಗಳ ಅಂತ್ಯದಿಂದ ಕಾರ್ಯಾಚರಿಸಲಿದೆ. ಈ ಮೂಲಕ ಎನ್‌ಎಂಪಿಟಿಗೆ ಹಡಗುಗಳ ಮೂಲಕ ಬರುವ ಮತ್ತು ಹೋಗುವ ವಸ್ತುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಬದಲು ಕಂಟೈನರ್ ವಾಹನವನ್ನೇ ಪೂರ್ಣವಾಗಿ ಸ್ಕ್ಯಾನ್ ಮಾಡಬಹುದಾಗಿದೆ.
- ಎನ್.ವಿ. ರಮಣ, ಎನ್‌ಎಂಪಿಟಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.