Temple ನವರಾತ್ರಿ ಮಹೋತ್ಸವ, ವಿಜಯದಶಮಿ ಸಂಪನ್ನ
Team Udayavani, Oct 24, 2023, 11:19 PM IST
ಮಂಗಳೂರು/ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ನವ ದಿನಗಳ ಪರ್ಯಂತ ನಡೆದ ಶರನ್ನವರಾತ್ರಿ ಮಹೋತ್ಸವ ಮಂಗಳವಾರ ವಿಜಯದಶಮಿ ಉತ್ಸವದೊಂದಿಗೆ ಸಮಾಪನಗೊಂಡಿತು.
ಉಭಯ ಜಿಲ್ಲೆಗಳ ವಿವಿಧ ದೇವಿ ದೇವಾಲಯಗಳಲ್ಲಿ ಅ.15ರಿಂದ 9 ದಿನಗಳ ಕಾಲ ಚಂಡಿಕಾ ಹವನ, ಸಪ್ತಶತಿ ಪಾರಾಯಣ, ದುರ್ಗಾ ಹವನ, ದುರ್ಗಾ ನಮಸ್ಕಾರ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ನಿತ್ಯವೂ ಅನ್ನದಾನ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
“ಮಂಗಳೂರು ದಸರಾ’ ಎಂದೇ ಪ್ರಸಿದ್ಧಿ ಪಡೆದಿರುವ ದ.ಕ.ದ ಕುದ್ರೋಳಿ ಕ್ಷೇತ್ರದ ನವರಾತ್ರಿ ಉತ್ಸವವು ಮಂಗಳವಾರ ಭವ್ಯ ಶೋಭಾಯಾತ್ರೆ ನೆರವೇರಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಕಟೀಲು, ಪೊಳಲಿ, ಬಪ್ಪನಾಡು ಸಹಿತ ವಿವಿಧ ದೇವಾಲಯಗಳಲ್ಲಿಯೂ ನವರಾತ್ರಿ ಸಡಗರ ವಿಜಯದಶಮಿ ಉತ್ಸವದೊಂದಿಗೆ ಕೊನೆಗೊಂಡಿತು. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ವಿಜಯ ದಶಮಿಯಂದು ವಿದ್ಯಾರಂಭ, ತುಲಾಭಾರ ನಡೆಯಿತು. ಮಧ್ಯಾಹ್ನ ರಥಾರೋಹಣ ನಡೆದು ರಾತ್ರಿ ವೈಭವದ ರಥೋತ್ಸವ ನೆರವೇರಿತು.
ವಿವಿಧೆಡೆ ಸಂಘ ಸಂಸ್ಥೆಗಳಿಂದಲೂ ಶಾರದಾ ಪೂಜೆ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ರಥಬೀದಿ: ಅ.25ರಂದು ಶೋಭಾಯಾತ್ರೆ
ಮಂಗಳೂರಿನ ರಥಬೀದಿಯ ಆಚಾರ್ಯ ಮಠ ವಠಾರದಲ್ಲಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಡುತ್ತಿರುವ 101ನೇ ವರ್ಷದ ಸಾರ್ವಜನಿಕ ಮಂಗಳೂರು ಶ್ರೀ ಶಾರದಾ ಮಹೋತ್ಸವದ ವೈಭವದ ಶೋಭಾಯಾತ್ರೆ ಅ.25ರಂದು ನಡೆಯಲಿದೆ. ರಾತ್ರಿ 10 ಗಂಟೆಗೆ ಶ್ರೀ ಶಾರದಾ ಮಾತೆಯ ಬೃಹತ್ ವಿಸರ್ಜನಾ ಮೆರವಣಿಗೆ ನಗರದಲ್ಲಿ ನಡೆಯಲಿದೆ.
ಉಡುಪಿ: ದೇಗುಲಗಳಲ್ಲಿ ವೈಭವದ ಉತ್ಸವ
ಉಡುಪಿ: ಜಿಲ್ಲೆಯ ಕೊಲ್ಲೂರು, ಮಂದಾರ್ತಿ, ಕುಂಭಾಶಿ, ಉಚ್ಚಿಲ, ಕಾಪು ಮಾರಿಗುಡಿಗಳು, ಕಾರ್ಕಳದ ಕುಕ್ಕುಂದೂರು, ಕಮಲಶಿಲೆ, ಸೌಕೂರು, ಉಡುಪಿಯ ಕಡಿ ಯಾಳಿ, ಇಂದ್ರಾಳಿ, ಬೈಲೂರು, ಅಂಬಲಪಾಡಿ, ಪುತ್ತೂರು, ಕನ್ನ ರ್ಪಾಡಿ, ದೊಡ್ಡಣಗುಡ್ಡೆ ಸಹಿತ ದೇವಿಯ ದೇವಸ್ಥಾನಗಳಲ್ಲಿ ವೈಭವದಿಂದ ಉತ್ಸವ ನಡೆದಿದೆ.
ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಶ್ರೀಕೃಷ್ಣ ಮಠದಿಂದ ಮೆರವಣಿಗೆ ಬಂದು ಶಮೀ ವೃಕ್ಷದ ಪೂಜೆಯ ಪ್ರಸಾದವನ್ನು ಸ್ವೀಕರಿಸಿದರು. ಶ್ರೀಕೃಷ್ಣಮಠ ದಲ್ಲಿ ಕದಿರು ಕಟ್ಟುವ ಹಬ್ಬ ಆಚರಿಸಲಾಯಿತು. ಕಾಪು ತಾಲೂಕಿನ ಪಾಜಕ ಕ್ಷೇತ್ರದಲ್ಲಿ ಮಧ್ವಜಯಂತಿ ಉತ್ಸವ ನಡೆಯಿತು.
ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕಳೆದ ವರ್ಷ ಆರಂಭಗೊಂಡಿದ್ದ ದಸರಾ ಈ ಬಾರಿಯೂ ಅದ್ದೂರಿಯಾಗಿ ನಡೆದು ಅಪಾರ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.