ಹೆಚ್ಚಲಿ ಮೆಟ್ಟಲಿನ ಸೊಬಗು
Team Udayavani, Mar 31, 2018, 3:44 PM IST
ಮನೆಯು ಹೊರಾಂಗಣ ಹಾಗೂ ಒಳಾಂಗಣ ಅಂದ- ಚೆಂದವಾಗಿ ಕಾಣಬೇಕೆಂದು ಸಾಕಷ್ಟು ಪ್ರಯತ್ನ ಮಾಡುತ್ತೇವೆ. ಆದರೆ ಮನೆಯ ನಿಜವಾಗಿ ಅಂದ ಹೆಚ್ಚಿಸುವುದು ಮನೆಯ ಮೆಟ್ಟಿಲುಗಳೆಂದೇ ಹೇಳಬಹುದು. ಹಿಂದಿನ ಕಾಲದಲ್ಲಿ ಕೇವಲ ಮಣ್ಣಿನ ಮನೆಗಳು ಇರುವ ಕಾರಣ ಮನೆಯ ಹೊರಾಂಗಣದಲ್ಲಿ ಕಲ್ಲಿನಿಂದ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಇಂದು ಕಾಲ ಬದಲಾಗಿದೆ. ಹೆಚ್ಚಿನದಾಗಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲು ಜನರು ಆಸಕ್ತಿ ತೋರಿಸುತ್ತಿದ್ದು, ಅಂತೆಯೇ ಮೆಟ್ಟಿಲುಗಳು ನಿರ್ಮಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ಆರ್ ಸಿಸಿ ಮನೆಗಳಾದರೆ, ಕೇವಲ ಮಹಡಿ ಕಟ್ಟಡಗಳಿದ್ದರೆ, ಹೊರಾಂಗಣದಲ್ಲಿ ಮೆಟ್ಟಿಲುಗಳನ್ನು ಮಾಡಿ ಗಾರ್ಡನ್ ನಿರ್ಮಿಸಿಕೊಳ್ಳುತ್ತಾರೆ. ಇನ್ನು ಬಹುಮಹಡಿ ಕಟ್ಟಡಗಳು ನಿರ್ಮಿಸಿರುವವರೂ, ಮನೆಯ ಒಳಾಂಗಣದಲ್ಲಿಯೇ ಮನೆಗಳಿಗೆ ಮೆಟ್ಟಿಲುಗಳನ್ನು ನಿರ್ಮಿಸಿ ಕೊಳ್ಳುತ್ತಿರುವುದು ಇದು ಸದ್ಯದ ಟ್ರೆಂಡ್. ಮನೆಗೆ ಮೆಟ್ಟಿಲುಗಳನ್ನು ನಿರ್ಮಿಸಬೇಕಾದರೆ, ಜನರು ಸಾಮಾನ್ಯವಾಗಿ ವಾಸ್ತುಗೆ ಪ್ರಧಾ ನ ಆದ್ಯತೆ ನೀಡಿ ದರೂ ಅದರ ಸೌಂದರ್ಯಕ್ಕೂ ಹೆಚ್ಚಿನ ಆದ್ಯತೆ ನೀಡುತ್ತಾರೆ.
ಮನೆಗೆ ಮೆಟ್ಟಿಲುಗಳನ್ನು ನಿರ್ಮಿಸಬೇಕಾದರೆ ಮೂರು ವಿಧ ದ ಆಕೃತಿಯಲ್ಲಿ ಹೆಚ್ಚಾಗಿ ನಿರ್ಮಿಸಲಾಗುತ್ತದೆ. ಹಿಂದಿನ ಕಾಲದಿಂದಲೂ ಕಲ್ಲಿನಿಂದ ನಿರ್ಮಿಸಲಾಗುತ್ತಿದೆ. ಆಧುನಿಕತೆ ಬೆಳೆದಂತೆ ಲೋಹ ಹಾಗೂ ಫ್ಲೆ „ವುಡ್ ಗಳಿಂದಲೂ ಮೆಟ್ಟಿಲುಗಳನ್ನು ನಿರ್ಮಿಸ ಲಾಗುತ್ತಿದೆ.
ಇನ್ನು ಹೆಚ್ಚಿನವರೂ ಮನೆಯ ಶ್ರೀಮಂತಿಕೆಯನ್ನು ಹೆಚ್ಚಿಸಲೆಂದು ಗಾಜಿನಿಂದ ಮೆಟ್ಟಿಲುಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಕಲ್ಲಿನಿಂದ ಹೊರಾಂಗಣದಲ್ಲಿ ನಿರ್ಮಿಸಿದರೆ, ಲೋಹ, ಗಾಜು ಹಾಗೂ ಫ್ಲೆ „ವುಡ್‌ನ ಮೆಟ್ಟಿಲುಗಳು ಮನೆಯ ಒಳಗೆ ಹೆಚ್ಚು ಶೋಭೆ ಕೊಡು ತ್ತದೆ. ಮನೆಯ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಮೂರು ವಿಧದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತದೆ. ಅವುಗಳೆಂದರೆ ಏಣಿಯ ವಿನ್ಯಾಸಕಾರದಲ್ಲಿ ಸರಳವಾಗಿ ಏರಲು ಅವಕಾಶ ನೀಡುವ ಮೆರವಣಿಗೆಯ ಮೆಟ್ಟಿಲುಗಳು, ಸುಳಿಯಾಕಾರದ ಮೆಟ್ಟಿಲುಗಳು ಹಾಗೂ ಇತ್ತೀಚಿನ ಟ್ರೆಂಡ್‌ಗಳಲ್ಲಿ ಹೆಚ್ಚಿರುವ ಕರ್ವ್ (ತಿರುವು) ಮೆಟ್ಟಿಲುಗಳು. ಸಾಮಾನ್ಯವಾಗಿ ದೊಡ್ಡ ದೊಡ್ಡ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ಕರ್ವ್ ಮೆಟ್ಟಿಲುಗಳನ್ನು ನಿರ್ಮಿಸಲಾಗುತ್ತದೆ.
ಮನೆಗೆ ಭೂಷಣ
ಇನ್ನು ಮನೆಯ ಹೊರಾಂಗಣದ ಮೆಟ್ಟಿಲುಗಳಿಗೆ ವಿವಿಧ ತೆರ ನಾದ ಬಣ್ಣಗಳನ್ನು ಹಚ್ಚುವುದರಿಂದ ಮನೆಗೆ ಸಾಂಪ್ರದಾಯಿಕ ಲುಕ್ ನೀಡಬಹುದು. ಕಾಮನಬಿಲ್ಲಿನ ಬಣ್ಣಗಳು ಕ್ರಮವಾಗಿ ಮೆಟ್ಟಿಲುಗಳಿಗೆ ಹಚ್ಚಿದರೆ, ಮೆಟ್ಟಿಲುಗಳು ಆಕರ್ಷಕವಾಗಿರುತ್ತವೆ. ಸಾಧ್ಯವಾದಷ್ಟೂ ಬಿಳಿ ಬಣ್ಣಕ್ಕೆ ಪ್ರಾಧಾನ್ಯತೆ ಕೊಟ್ಟರೆ ಉತ್ತಮ ಎನ್ನು ತ್ತಾರೆ ವಿನ್ಯಾಸಕಾರರು.
ಶ್ರೀಮಂತಿಕೆ ಹೆಚ್ಚಿಸುವ ಒಳಾಂಗಣ
ಮನೆಯ ಒಳಗೆ ನಿರ್ಮಿಸುವ ಮೆಟ್ಟಿಲುಗಳ ಅಂದ ಹೆಚ್ಚಿಸಲು ನೆಲ ಹಾಸುಗಳನ್ನು ಹಾಸಬಹುದು. ಆದರೆ ಇವು ಹೆಚ್ಚು ಭಾರ ವಿದ್ದು, ನೆಲಕ್ಕೆ ಅಂಟುವ ಮಾದರಿಯಲ್ಲಿರಬೇಕು. ಇಲ್ಲವಾದರೆ ಪದೇ ಪದೇ ಜಾರಿ ಬೀಳಬಹುದು. ಜತೆಗೆ ಮಟ್ಟಿಲುಗಳ ಆರಂಭದಲ್ಲಿ ಹೂ ಕುಂಡಗಳು ಇಟ್ಟರೆ ಮನೆಯ ಶ್ರೀಮಂತಿಕೆಯ ಜತೆಗೆ ಸೊಬಗು ಹೆಚ್ಚುತ್ತದೆ.
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.