![Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು](https://www.udayavani.com/wp-content/uploads/2024/12/moodigere-415x241.jpg)
ಅಧಿಕಾರಿಗಳ ನಿರ್ಲಕ್ಷ್ಯ: ಉರುಳಿನಿಂದ ತಪ್ಪಿಸಿಕೊಂಡ ಚಿರತೆ
Team Udayavani, Jan 21, 2018, 11:43 AM IST
![VENUR-TAIGER.jpg](https://www.udayavani.com/wp-content/uploads/2018/01/21/VENUR-TAIGER-473x465.jpg)
ವೇಣೂರು: ಬೆಳ್ತಂಗಡಿ ತಾಲೂಕಿನ ಗುಂಡೂರಿಯಲ್ಲಿ ಉರುಳಿಗೆ ಬಿದ್ದ ಚಿರತೆಯೊಂದು ತಪ್ಪಿಸಿಕೊಂಡಿದ್ದು, ಇದಕ್ಕೆ ಅರಣ್ಯ ಇಲಾಖೆ ಸಿಬಂದಿ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು, ಅಧಿಕಾರಿಗಳ ವಾಹನಕ್ಕೆ ಮುತ್ತಿಗೆ ಹಾಕಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಶನಿವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಗುಂಡೂರಿಯ ವ್ಯಕ್ತಿಯೊಬ್ಬರು ಇಟ್ಟಿದ್ದ ಉರುಳಿಗೆ ಚಿರತೆ ಬಿದ್ದಿತ್ತು. ವೇಣೂರು ಅರಣ್ಯ ಇಲಾಖೆಯ ಸಿಬಂದಿ ಸ್ಥಳಕ್ಕಾಗಮಿಸಿದ್ದು, ಸಂಜೆ ಹೊತ್ತಿಗೆ ಚಿರತೆ ಉರುಳಿನಿಂದ ತಪ್ಪಿಸಿಕೊಂಡಿದೆ. ಅಧಿಕಾರಿಗಳು ತಂದಿದ್ದ ಬೋನನ್ನು ಆ ಜಾಗದ ಮಾಲಕನ ಪಿಕಪ್‌ನಲ್ಲಿ ವೇಣೂರು ಅರಣ್ಯ ಕಚೇರಿಗೆ ಕೊಂಡೊಯ್ಯುತ್ತಿದ್ದ ವೇಳೆ ಗ್ರಾಮಸ್ಥರು ಚಿರತೆ ಬಗ್ಗೆ ಪ್ರಶ್ನಿಸಿದರು. ಆಗ ಹಾರಿಕೆಯ ಉತ್ತರ ನೀಡಿ ಪಿಕಪ್ ಅನ್ನು ಜನರಿಗೆ ಒರೆಸಿಕೊಂಡೇ ಮುಂದಕ್ಕೆ ಕೊಂಡೊಯ್ದರು. ಇದು ಗ್ರಾಮಸ್ಥರನ್ನು ಕೆರಳಿಸಿತಲ್ಲದೆ, ಚಿರತೆ ತಪ್ಪಿಸಿಕೊಂಡ ವಿಷಯವೂ ಆಗ ಅವರಿಗೆ ತಿಳಿಯಿತು. ಕೂಡಲೇ ಜನರು ಅಧಿಕಾರಿಗಳ ಜೀಪನ್ನು ಅಡ್ಡಿಗಟ್ಟಿದರು.
ಅಜಾಗರೂಕತೆಯಿಂದ ಪಿಕಪ್ ಚಲಾಯಿಸಿದ ವ್ಯಕ್ತಿಯನ್ನು ಕರೆಯಿಸಿ ಕೇಸು ದಾಖಲಿಸಲು ಪಟ್ಟು ಹಿಡಿದರು. ಬಳಿಕ ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದಾರೆ. ಈ ಬಗ್ಗೆ ವೇಣೂರು ವಲಯ ಅರಣ್ಯಾಧಿಕಾರಿಯವರನ್ನು ಪ್ರಶ್ನಿಸಿದಾಗ, ಮಂಗಳೂರಿನಲ್ಲಿ ಅರಿವಳಿಕೆ ಔಷಧ ಇಲ್ಲದ ಕಾರಣ ಶಿವಮೊಗ್ಗದ ತಂಡಕ್ಕೆ ಮಾಹಿತಿ ನೀಡಲಾಗಿತ್ತು. ಅವರು ತಲುಪುವುದು ರಾತ್ರಿಯಾಗುವುದರಿಂದ ಚಿರತೆಯನ್ನು ಬೋನ್ ಒಳಗೆ ಹಾಕಲು ಪ್ರಯತ್ನಿಸಿದ ವೇಳೆ ಅದು ತಪ್ಪಿಸಿಕೊಂಡಿದೆ ಎನ್ನುತ್ತಾರೆ. ಸುಮಾರು 12 ತಾಸು ಚಿರತೆ ಉರುಳಿನಲ್ಲಿದ್ದರೂ ಅದನ್ನು ಬೋನಿನಲ್ಲಿ ಬಂಧಿಸಲಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಟಾಪ್ ನ್ಯೂಸ್
![Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು](https://www.udayavani.com/wp-content/uploads/2024/12/moodigere-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು](https://www.udayavani.com/wp-content/uploads/2024/12/moodigere-150x87.jpg)
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
![4](https://www.udayavani.com/wp-content/uploads/2024/12/4-40-150x80.jpg)
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
![UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!](https://www.udayavani.com/wp-content/uploads/2024/12/5-37-150x90.jpg)
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
![ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ](https://www.udayavani.com/wp-content/uploads/2024/12/sid-1-150x87.jpg)
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.