ಎಕ್ಕಾರಿನ ಕೃಷಿಕನಿಂದ ಸೀರೆ, ನೆಟ್‌ನ ಕೋಟೆ!
Team Udayavani, Dec 3, 2018, 10:32 AM IST
ಎಕ್ಕಾರು : ಕೋಟೆ ಎಂದರೆ ಶತ್ರುಗಳಿಂದ ತಮ್ಮನ್ನು ರಕ್ಷಿಸಲು, ಶತ್ರುಗಳು ಸುಲಭವಾಗಿ ಒಳಗೆ ನುಗ್ಗದಂತೆ ತಡೆಯಲು ಹಿಂದೆ ಕಲ್ಲು ಬಂಡೆಗಳಿಂದ ಕೋಟೆಗಳನ್ನು ಕಟ್ಟಲಾಗುತ್ತಿತ್ತು. ಆದರೆ ಈಗ ಎಕ್ಕಾರಿನ ಕೃಷಿಕ ಚಂದ್ರಹಾಸ ಮಾರ್ಲ ಅವರು ಪಕ್ಷಿಗಳ ಹಾವಳಿ ತಡೆಯಲು ಸೀರೆ ಹಾಗೂ ನೆಟ್‌ನಿಂದ ಈ ಕೋಟೆಯನ್ನು ನಿರ್ಮಿಸಿದ್ದಾರೆ.
ಇಂದು ಕೃಷಿಕರಿಗೆ ತಾವು ಬೆಳೆದ ಕೃಷಿ ಉಳಿಯಲು, ಪ್ರಾಣಿ, ಪಕ್ಷಿಗಳ ಕಾಟ ತಪ್ಪಿಸುವುದೇ ದೊಡ್ಡ ಸಮಸ್ಯೆ ಎಂಬಂತಾಗಿದೆ. ಈ ಕಾರಣಕ್ಕಾಗಿಯೇ ಭತ್ತ ಬೇಸಾಯದಷ್ಟೇ ತರಕಾರಿ ಬೆಳೆ ಉಳಿಸಲು ಕೃಷಿಕರು ಶ್ರಮಪಡುತ್ತಿದ್ದಾರೆ. ಈಗ ಕುಂಬಳಕಾಯಿ, ಸೌತೆಕಾಯಿ ತರಕಾರಿ ಬೆಳೆಸುವ ಸಮಯ. ಈಗಾಗಲೇ ಇದರ ಬೀಜ ಬಿತ್ತನೆಯಾಗಿದೆ. ಗಿಡಗಳು ಮೇಲೆದ್ದು ಬಂದಿದೆ, ಬಳ್ಳಿಗಳು ಹರಡಿವೆ.ಅದನ್ನು ರಕ್ಷಿಸಲು ಈ ಕೋಟೆ ನಿರ್ಮಾಣವಾಗಿದೆ.
ಊರಿಗೆ ಹಿಂಡು ಹಿಂಡಾಗಿ ಬರುವ ನವಿಲು
ಕಾಡು ನಾಶದಿಂದ ಕಾಡಿನಲ್ಲಿದ್ದ ಪಕ್ಷಿ, ಪ್ರಾಣಿಗಳಿಗೆ ಏನೂ ಆಹಾರ ಸಿಗದ ಕಾರಣ ಇಂದು ನಾಡಿನತ್ತ ಬರುತ್ತಿವೆ. ಅದು ಕೂಡ ಹಿಂಡು-ಹಿಂಡಾಗಿ ಬರುತ್ತದೆ. ಕಾಡಿನ ಸಮೀಪದಲ್ಲಿದ್ದರೆ ಅದರ ಉಪಟಳ ಇನ್ನೂ ಹೆಚ್ಚು. ನವಿಲು ಈಗ ಊರಿನಲ್ಲೇ ತನ್ನ ಬದುಕು ನಡೆಸುತ್ತಿದ್ದು, ಕೃಷಿಕರ ನಿದ್ದೆಗೆಡಿಸುತ್ತಿದೆ.
ಫಲ ನೀಡದ ಉಪಾಯಗಳು
ಬೆಳ್ಚಪ್ಪ, ಡಬ್ಬಿ ಹೊಡೆಯುವುದು, ಪತಾಕೆ ಹಾರಿಸುವುದು, ಗಾಳಿಗೆ ಶಬ್ದ ಮಾಡುವ ಬೆಗಡೆಗಳನ್ನು ಕಟ್ಟುವುದು ಇಂತಹ ಹಲವು ಉಪಾಯಗಳನ್ನು ಮಾಡಿದರೂ ಫಲ ನೀಡುತ್ತಿಲ್ಲ. ಅದಕ್ಕಾಗಿಯೇ ಸೀರೆ ಹಾಗೂ ನೆಟ್‌ನ ಕೋಟೆ ನಿರ್ಮಿಸಿದ್ದಾರೆ.
ತರಕಾರಿ ಬೆಳೆಸುವ ಪ್ರೀತಿಯೇ ಇದಕ್ಕೆ ಕಾರಣ
ತರಕಾರಿ ಬೆಳೆಸುವ ಪ್ರವೃತ್ತಿ ತನ್ನನ್ನು ಪ್ರತಿಬಾರಿ ಈ ಕಾಯಕಕ್ಕೆ ಇಳಿಸುತ್ತಿದೆ. ನದಿಯ ತಟದಲ್ಲಿಯೇ ಈ ಗದ್ದೆ ಇದೆ. ಹಿಂಗಾರು ಭತ್ತ ಬೇಸಾಯಕ್ಕೆ ರೆಡಿ ಮಾಡಿದ್ದೆ. ಆದರೆ ಉಳುಮೆ ಮಾಡಲು ಇಲ್ಲಿ ಟಿಲ್ಲರ್ ತರಲು ರಸ್ತೆ ಇಲ್ಲದಾಗಿದೆ. ಮುಂಗಾರು ಭತ್ತ ಬೇಸಾಯಕ್ಕೆ ನೆರೆ ಹಾವಳಿ ಇದೆ. ನವಿಲು ಹಿಂಡು ಹಿಂಡಾಗಿ ಬರುತ್ತವೆ. ಇದಕ್ಕಾಗಿ ನೆಟ್ ಹಾಗೂ ಸೀರೆ ಬಳಸಿ ತರಕಾರಿ ಗಿಡಗಳ ರಕ್ಷ ಣೆಗೆ ಶ್ರಮಿಸುತ್ತಿದ್ದೇನೆ.
– ಚಂದ್ರಹಾಸ ಮಾರ್ಲ,ಕೃಷಿಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Belman: ಅಗ್ನಿ ದುರಂತದ ಅಪಾಯ; ಟ್ರಾನ್ಸ್‌ಫಾರ್ಮರ್ ಸುತ್ತ ಸ್ವಚ್ಛತೆ
Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್!
Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ
Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ
BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.