ಹೊಸ ಆಲ್ಟೋ ಮಂಗಳೂರು ಮಾರುಕಟ್ಟೆಗೆ ಬಿಡುಗಡೆ
Team Udayavani, May 5, 2019, 6:12 AM IST
ಮಾಂಡೋವಿ ಮೋಟಾರ್
ಮಂಗಳೂರು: ನಗರದ ಮಾರುತಿ ಸುಜುಕಿ ಕಾರುಗಳ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್ನಲ್ಲಿ ಹೊಸ ಆಲ್ಟೋ ಕಾರನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.
ಮಾರುತಿ ಸುಜುಕಿಯ ಟೆರಿಟರಿ ಸೇಲ್ಸ್ ಮ್ಯಾನೇಜರ್ ಪರಾಸ್ ಮತ್ತು ಮಾಂಡೋವಿ ಮೋಟಾರ್ನ ಚೀಫ್ ಅಕೌಟಂಟ್ ಬಿ.ಪಿ. ಭಟ್ ಅವರು ಕಾರನ್ನುಬಿಡುಗಡೆಗೊಳಿಸಿದರು.
ಸಂಸ್ಥೆಯ ಜನರಲ್ ಮ್ಯಾನೇಜರ್ (ಅಕೌಂಟ್ಸ್) ಉಮೇಶ್ ಮತ್ತು ಸೇಲ್ಸ್ ಮ್ಯಾನೇಜರ್ ಕಿಶನ್ ಕೆ. ಶೆಟ್ಟಿ ಉಪಸ್ಥಿತರಿದ್ದರು.
ಈಗಾಗಲೇ 25ಕ್ಕಿಂತಲೂ ಹೆಚ್ಚು ಬುಕ್ಕಿಂಗ್‌ಗಳನ್ನು ಒಳಗೊಂಡಿದ್ದು ಗ್ರಾಹಕರು ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಾಂಡೋವಿ ಮೋಟಾರ್ ಮಳಿಗೆ ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
ಭಾರತ್ ಆಟೋಕಾರ್
ಮಂಗಳೂರು: ಮಾರುತಿ ಸುಝುಕಿ ಅರೇನಾ ಅವರ ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ನೂತನ ಆಲ್ಟೋ ಕಾರನ್ನು ಶನಿವಾರ ನಗರದ ಕುಂಟಿಕಾನ ಜಂಕ್ಷನ್‌ನಲ್ಲಿ ರುವ ಭಾರತ್ ಆಟೋಕಾರ್ ಮಳಿಗೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಲಾಯಿತು.
ಭಾರತೀಯ ಸ್ಟೇಟ್ ಬ್ಯಾಂಕ್‌ನ ಚಿಲಿಂಬಿ (ಅನಿವಾಸಿ ಭಾರತೀಯ) ಶಾಖೆ ಮ್ಯಾನೇಜರ್ ಕಿರಣ್ ಅವರು ನೂತನ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಟಿ.ಎಸ್.ಎಂ. ಪಾರಸ ಬಂಡೂಲ, ಕಿಶೋರ್ ಮಾನೆ ಮತ್ತು ವಿಶ್ವನಾಥ್ ಕಾಮತ್ ಅತಿಥಿಗಳಾಗಿದ್ದರು.
ಭಾರತ್ ಆಟೋಕಾರ್ನ ಸೇಲ್ಸ್ ಜನರಲ್ ಮ್ಯಾನೇಜರ್ ಡೆನಿಸ್Õ ಗೊನ್ಸಾಲ್ವೆಸ್, ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್ ಮಹೇಂದ್ರ, ಸೇಲ್ಸ್ ಮ್ಯಾನೇಜರ್ ಶಿವಕೀರ್ತಿ ಉಪಸ್ಥಿತರಿದ್ದರು. ಮಹೇಂದ್ರ ಅವರು ಕಾರ್ಯಕ್ರಮ ನಿರ್ವಹಿಸಿದರು
ಕಾರಿನ ವೈಶಿಷ್ಟéಗಳು
ನೂತನ ಆಲ್ಟೋ ಕಾರು ಚಲೆ¤à ರಹೋ ಶಾನ್ ಸೆ ಎನ್ನುವ ವಾಕೊÂàಕ್ತಿಯಿಂದ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಈ ನೂತನ ಕಾರಿಗೆ ಮೊತ್ತ ಮೊದಲ ಬಾರಿಗೆ ಬಿಎಸ್ 6 ಶ್ರೇಣಿಯ ಎಂಜಿನನ್ನು ಅಳವಡಿಸಲಾಗಿದ್ದು, ಇದರಿಂದ ವಾತಾವರಣಕ್ಕೆ ಶೇ. 25ರಷ್ಟು ನೈಟ್ರೋಜನ್ ಆಕ್ಸೆ çಡ್ ಬಿಡುಗಡೆ ಕಡಿಮೆಯಾಗುತ್ತದೆ. ಅತ್ಯಾಕರ್ಷಕ ವಿನ್ಯಾಸ, ವಿನೂತನ ತಂತ್ರ ಜ್ಞಾನ ಹೊಂದಿದೆ. ಎಲೆಕ್ಟ್ರಾನಿಕ್ ಥ್ರೋಟ್ಲ ಬಾಡಿಯೊಂದಿಗೆ ಹೈ ಥರ್ಮಲ್ ಎಫೀಶಿಯನ್ಸಿ ಗ್ಯಾಸೋಲಿನ್ ಎಂಜಿನ್ ಹೊಂದಿದ್ದು ಚಾಲಕರಿಗೆ ಸುಲಲಿತವಾದ ಚಾಲನೆಯ ಅನುಭವ ನೀಡುತ್ತದೆ.
ಅತ್ಯಂತ ಸುರಕ್ಷೆಗೆ ಎಬಿಎಸ್ ಮತ್ತು ಇಬಿಡಿಯೊಂದಿಗೆ ಡ್ಯುಯಲ್ ಏರ್‌ಬ್ಯಾಗ್ಸ್ ಹೊಂದಿದೆ. ಸ್ಪೀಡ್ ಎಲರ್ಟ್ ಸೆನ್ಸರ್, ಆಕರ್ಷಕ ಫ್ರಂಟ್‌ಗ್ರಿಲ್ ಮತ್ತು ಬಂಪರ್, ಡ್ಯುಯಲ್ ಟೋನ್ ಇಂಟೀರಿಯರ್ಸ್, ರಿವರ್ಸ್ ಸೆನ್ಸರ್, ಸ್ಪೀಡ್ ಅಲರ್ಟ್ ಸಿಸ್ಟಮ್ ಇತ್ಯಾದಿ ವೈಶಿಷ್ಟéಗಳನ್ನು ಹೊಂದಿದೆ. ಕಾರು 6 ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.