![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 2, 2021, 3:40 AM IST
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವ ಸ್ಥಾನದ ಸಮೀಪ ಇರುವ ಕಟೀಲು- ಬಜಪೆ- ಮಂಗಳೂರು ಸಂಪರ್ಕ ಕಲ್ಪಿಸುವ ಸೇತುವೆಗೆ ಈಗ 82 ವರುಷ. ಈ ಮಾರ್ಗವಾಗಿ ದಿನಂಪ್ರತಿ ಓಡಾಡುವ ವಾಹನಗಳ ಸಂಖ್ಯೆ ದಿನೇ ದಿನೇ ಹೆಚ್ಚಾ ಗುತ್ತಿದೆ. ಈ ಕಾರಣಕ್ಕಾಗಿ ಸೇತುವೆಯನ್ನು ವಿಸ್ತರಿಸುವ ಅಥವಾ ನೂತನ ಸೇತುವೆ ನಿರ್ಮಿಸುವ ಕಾರ್ಯ ಅಗತ್ಯವಿದೆ.
ಸ್ಥಳೀಯವಾಗಿ ಅತ್ಯಂತ ಹಳೆಯ ಸೇತುವೆಯಾಗಿದೆ. 1939 ಅಕ್ಟೋಬರ್ 9ರಂದು ಅಂದಿನ ಮೈಸೂರು ಸರಕಾರ ದಲ್ಲಿ ದಿವಾನರಾಗಿದ್ದ ಮಿರ್ಜಾ ಮಹಮ್ಮದ್ ಇಸ್ಮಾಯಿಲ್ ಲೋಕಾ ರ್ಪಣೆಗೊಳಿಸಿದ್ದರು. ಸುಮಾರು 73,000 ರೂ. ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು.
ಮಂಗಳೂರು ಬಜಪೆಯಿಂದ ಕಟೀಲಿ ಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ವಿಮಾನ ನಿಲ್ದಾಣ, ಕಟೀಲು ಕ್ಷೇತ್ರಗಳಿಗೆ ಈ ಹಾದಿ ಪ್ರಾಮುಖ್ಯವಾಗಿದೆ.
ಮರವೂರು ಸಂಕ ಆಗಿದ್ದರೂ 1969 ರಲ್ಲಿ ಉಪಯೋಗ ಆರಂಭವಾಯಿತು. ಆ ತನಕ ಮರವೂರಿಗೆ ಒಂದು ದೋಣಿಯಲ್ಲಿ ಈ ಕಡೆಗೆ ಬಂದು ಬರಬೇಕಾಗಿತ್ತು. 1944ರಲ್ಲಿ ನೆರೆ ಬಂದಾಗ ಎಕ್ಕಾರು ಸೇತುವೆ ಹೋಗಿತ್ತು. 1950ರಲ್ಲಿ ಹೊಸದಾಗಿ ನಿರ್ಮಾಣವಾಯಿತು. ಕಟೀಲಿನಲ್ಲಿ ಸೇತುವೆ ನಿರ್ಮಾಣ ಆಗುವ ಮೊದಲು ವಯಾ ಸುರತ್ಕಲ್ ಅಥವಾ ಮೂಡುಬಿದಿರೆ ಆಗಿ ಹೋಗುತ್ತಿದ್ದರು. ಆ ಕಾಲದಲ್ಲಿ ಹನ್ನೆರಡೂ ತಿಂಗಳು ನೀರು ಹರಿಯುತ್ತಿತ್ತಂತೆ. ಈಗ ಆ ಅವಧಿ ಕಡಿಮೆ ಆಗಿದೆ. ಆದರೂ ಸೇತುವೆ ಇಲ್ಲದೆ ಇಲ್ಲಿ ಸಂಚಾರ ಅಸಾಧ್ಯ ಎಂಬ ಸ್ಥಿತಿ ಇದೆ. ಕೈಕಂಬ-ಬಿ.ಸಿ. ರೋಡ್ ಊರುಗಳಿಗೂ ಇತ್ತ ಬೆಳ್ಮಣ್, ಸುರತ್ಕಲ್, ಕಿನ್ನಿಗೋಳಿ, ಮೂಲ್ಕಿ, ಉಡುಪಿಗಳಿಗೂ ಈ ಸೇತುವೆ ಅತಿ ಮುಖ್ಯ ಸಂಪರ್ಕ ಸೇತುವೆಯಾಗಿದೆ.
ಕಟೀಲು ದೇಗುಲದ ಎದುರಿನಿಂದ ಹೋಗುವ ರಾಜ್ಯ ಹೆದ್ದಾರಿಯನ್ನು ಬೈಪಾಸ್ ರಸ್ತೆ ರಚಿಸುವ ಪ್ರಸ್ತಾವ ಇತ್ತು. ಈ ಸೇತುವೆಯನ್ನು ಗಟ್ಟಿಗೊಳಿಸುವ, ವಿಸ್ತರಿಸುವ ಅನಿವಾರ್ಯವಿದೆ.
ಹೆಚ್ಚಿದ ವಾಹನ ಸಂಚಾರ :
ಈ ಹೆದ್ದಾರಿ ಕಟೀಲು ಬ್ರಹ್ಮ ಕಲಶ ಸಂದರ್ಭ ಸಾಕಷ್ಟು ವಿಸ್ತರಣೆ ಗೊಂಡಿದ್ದು, ರಸ್ತೆ ಚೆನ್ನಾಗಿರು ವುದರಿಂದ ವಾಹನಗಳ ಓಡಾಟವೂ ಹೆಚ್ಚಾಗಿದೆ. ಮರವೂರು ಸೇತುವೆ ಗಿಂತ ಹಳೆಯ ದಾಗಿರುವ ಕಟೀಲು ಸೇತುವೆ ಬಗ್ಗೆ ಜನ ಪ್ರತಿನಿಧಿ ಗಳು ಅಧಿಕಾರಿಗಳು ಗಮನ ಹರಿಸಬೇ ಕಾಗಿದೆ. ಸೇತುವೆಯ ಧಾರುಣ ಸಾಮರ್ಥ್ಯವನ್ನು ಹೆದ್ದಾರಿ ಇಲಾಖೆ ಯವರು ಪರೀಕ್ಷಿಸುವಂತೆ ಸ್ಥಳೀಯರ ಆಗ್ರಹವಾಗಿದೆ.
ಕಟೀಲು ಸೇತುವೆ ಬಗ್ಗೆ ಇಲಾಖೆಯ ಮೂಲಕವಾಗಿ ಧಾರಣ ಸಾಮರ್ಥ್ಯ ಹಾಗೂ ಅದರ ಗಟ್ಟಿಮುಟ್ಟಿದ ಬಗ್ಗೆ ಪರಿಶೀಲನೆ ಆಗಬೇಕಾಗಿದೆ. ಇಲ್ಲಿನ ಬೈಪಾಸ್ ರಸ್ತೆಯ ಬಗ್ಗೆ ಪ್ರಸ್ತಾವನೆಯಿದ್ದು, ಇಲಾಖೆಯು ಈ ಬಗ್ಗೆ ಚಿಂತನೆ ನಡೆಸಿದೆ. ಜನ ದಟ್ಟಣೆ ಕಡಿಮೆ ಮಾಡಲು ಹೆದ್ದಾರಿ ವಿಸ್ತರಿಸುವ, ಬೈಪಾಸ್ ರಸ್ತೆ ನಿರ್ಮಿಸುವುದು ಅತೀ ಅಗತ್ಯ. ಈ ಬಗ್ಗೆ ಇಲಾಖೆ ಹಾಗೂ ಸರಕಾರದ ಗಮನ ಸೆಳೆಯಲಾಗುವುದು. -ಉಮಾನಾಥ ಕೋಟ್ಯಾನ್, ಶಾಸಕರು
-ರಘುನಾಥ ಕಾಮತ್ ಕೆಂಚನಕೆರೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.