ಮಿತ್ತಬಾಗಿಲು ಗ್ರಾ.ಪಂ.ಗೆ ನೂತನ ಕಟ್ಟಡ ಭಾಗ್ಯ
Team Udayavani, Jan 18, 2021, 2:20 AM IST
ಬೆಳ್ತಂಗಡಿ: ಗ್ರಾಮದ ಮಂದಿ ಅಗತ್ಯ ದಾಖಲೆ ಪತ್ರಗಳಿಗಾಗಿ, ಸರಕಾರಿ ಯೋಜನೆಗಳ ಮಾಹಿತಿ ಪಡೆಯಲು ಗ್ರಾ.ಪಂ. ಕಚೇರಿಗೆ ಭೇಟಿ ನೀಡಿದಾಗ ಅಲ್ಲಿನ ವಾತಾವರಣ ಅಷ್ಟೇ ಉತ್ತಮವಾಗಿರಬೇಕು ಎಂಬ ದೃಷ್ಟಿಯಿಂದ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾ.ಪಂ.ಗೆ ನೂತನ ಕಟ್ಟಡ ನಿರ್ಮಿಸಲು ಆಡಳಿತ ಮುಂದಾಗಿದೆ.
ಮಿತ್ತಬಾಗಿಲು ಗ್ರಾ.ಪಂ.ಗೆ ಒಳಪಟ್ಟಿದ್ದ ಕಡಿರುದ್ಯಾವರ 2015ರಲ್ಲಿ ನೂತನ ಗ್ರಾ.ಪಂ. ಆಗಿ ರಚನೆಯಾಯಿತು. ಬಳಿಕ ಗ್ರಾ.ಪಂ. ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ 2018-19ನೇ ಸಾಲಿನ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ರಾಜ್ ಸಶಕ್ತೀಕರಣ ಯೋಜನೆಯಲ್ಲಿ 20 ಲಕ್ಷ ರೂ. ಹಾಗೂ ಎಂಎನ್‌ಆರ್‌ಜಿಯ 28 ಲಕ್ಷ ರೂ. ಸೇರಿ 48 ಲಕ್ಷ ರೂ. ಅನುದಾನ ಇರಿಸಲಾಗಿತ್ತು. ಆದರೆ ಕಾಮಗಾರಿ ನಡೆಸಲು ಸಮಯ ಕೂಡಿ ಬಂದಿರಲಿಲ್ಲ.
ಇದೀಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಹಾಗೂ ನೂತನ ಸದಸ್ಯರ ಸಹಕಾರದಿಂದ ದೀನ್ ದಯಾಳ್ ಯೋಜನರಯಡಿ 10 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ನರೇಗಾ ಯೋಜನೆಯಡಿ ಕಟ್ಟಡ ರಚನೆಯಾಗಲಿದೆ.
2,500 ಚದರಡಿ ವಿಸ್ತೀರ್ಣ :
ತಾಲೂಕಿನ ಬಹುತೇಕ ಗ್ರಾ.ಪಂ.ಗಳು ನವೀನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ. ಕೆಲವು ಗ್ರಾ.ಪಂ. ಕಟ್ಟಡಗಳು ಹಳೆಯ ದಾಗಿವೆ. ಇದೀಗ ಕಡಿರುದ್ಯಾವರ ಗ್ರಾ.ಪಂ.ನ ಹೊಸ ಕಟ್ಟಡ ವಿಭಿನ್ನವಾಗಿ ಮೂಡಿಬರುವ ಯೋಜನೆಯಲ್ಲಿದೆ. ಇದು 2,500 ಚದರಡಿ ವಿಸ್ತೀರ್ಣ ಹೊಂದಿರಲಿದ್ದು, ಮೀಟಿಂಗ್ ಹಾಲ್, ಪಿಡಿಒ ಕಚೇರಿ, ಅಧ್ಯಕ್ಷರು, ಉಪಾಧ್ಯಕರು, ಕಾರ್ಯದರ್ಶಿ, ಸಿಬಂದಿಗೆ ಪ್ರತ್ಯೇಕ ಕೊಠಡಿ ಇರಲಿದೆ. ಕಡಿರುದ್ಯಾವರ ಗ್ರಾ.ಪಂ. 3 ವಾರ್ಡ್ ಒಳಗೊಂಡಿದ್ದು, 9 ಸದಸ್ಯರಿದ್ದಾರೆ. 4,334 ಜನಸಂಖ್ಯೆ ಇದೆ. ಕೈ ತೋಟ ರಚನೆ, ಪಾರ್ಕಿಂಗ್ ಅವಕಾಶ ಇರಲಿದೆ.
ಇತರ ಯೋಜನೆಗಳು :
ಸ್ವತ್ಛ ಭಾರತ ಅಭಿಯಾನದಲ್ಲಿ 2020- 21ರಲ್ಲಿ ಗ್ರಾ.ಪಂ. ಒಗ್ಗೂಡಿಸುವಿಕೆಯಲ್ಲಿ ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ ಸೇರಿ ಕಡಿರುದ್ಯಾವರದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಅನುಮೋದನೆ ಆಗಿ ಜಿ.ಪಂ.ಗೆ ಕಳುಹಿಸಲಾಗಿದೆ. ರುದ್ರಭೂಮಿ, ದಫನ ಭೂಮಿಗೆ ಆಂಜನೇಯ ಬೆಟ್ಟದ ಬಳಿ 3 ಎಕರೆ ಗುರುತಿಸಲಾಗಿದೆ.
ಗ್ರಾ.ಪಂ. ಕಟ್ಟಡ ಜನರ ಆಸ್ತಿ. ಹೀಗಾಗಿ ಮಾದರಿ ಗ್ರಾ.ಪಂ.ಕಟ್ಟಡ ರಚನೆಗಾಗಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಗ್ರಾಮೀಣ ನಿವೇಶನ ಯೋಜನೆಯಡಿ ಸರ್ವೇ ನಂಬರ್ 76/10ನಲ್ಲಿ 2.80 ಎಕರೆ ನಿವೇಶನ ಕಾಯ್ದಿರಿಸಲಾಗಿದ್ದು, ಮರ ತೆರವು ಕಾರ್ಯ ನಡೆಯುತ್ತಿದೆ. -ಜಯಕೀರ್ತಿ, ಪಿಡಿಒ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
Pro Kabaddi League: ಯುಪಿ ಯೋಧಾಸ್,ಪಾಟ್ನಾ ಪೈರೇಟ್ಸ್ ಸೆಮಿಫೈನಲಿಗೆ
IND Vs AUS ಬಾಕ್ಸಿಂಗ್ ಡೇ ಟೆಸ್ಟ್: ಆಸ್ಟ್ರೇಲಿಯ ರನ್ ಓಟಕ್ಕೆ ಬುಮ್ರಾ ಬ್ರೇಕ್
Padubidri: ಕಾರು ಢಿಕ್ಕಿ; ಪಾದಚಾರಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.