ಆಲಂಕಾರಿನಿಂದ ಕುದ್ಮಾರು, ಸವಣೂರು ಮಾರ್ಗವಾಗಿ ನೂತನ ಬಸ್ ಸಂಚಾರ ಆರಂಭ
Team Udayavani, Dec 17, 2017, 4:53 PM IST
ಆಲಂಕಾರು: ಕುಮಾರಧಾರಾ ನದಿಗೆ ಶಾಂತಿಮೊಗರು ಬಳಿ ನಿರ್ಮಿಸಲಾದ ಸೇತುವೆ ಉದ್ಘಾಟನೆಗೊಂಡಿರುವುದರಿಂದ
ಕಡಬ, ಆಲಂಕಾರು, ಕುದ್ಮಾರು, ಸವಣೂರು ಮಾರ್ಗವಾಗಿ ಪುತ್ತೂರನ್ನು ಸಂಪರ್ಕಿಸುವ ನೂತನ ಬಸ್ ಸಂಚಾರ
ಶನಿವಾರದಿಂದ ಆರಂಭವಾಗಿದೆ. ಧರ್ಮಸ್ಥಳ ಘಟಕದಿಂದ ಈ ಸೇವೆ ಆರಂಭವಾಗಿದ್ದು, ಆಲಂಕಾರಿನಲ್ಲಿ ಸಾರ್ವಜನಿಕರು ಬಸ್ಸನ್ನು ವಿಜೃಂಭಣೆ ಯಿಂದ ಸ್ವಾಗತಿಸಿದರು.
ಬಸ್‌ಸಂಚಾರದ ವೇಳಾಪಟ್ಟಿ
ಬೆಳಗ್ಗೆ ಪುತ್ತೂರಿನಿಂದ ಕಡಬಕ್ಕೆ 6.30ಕ್ಕೆ ಬಸ್ ಹೊರಡಲಿದೆ. ಬಳಿಕ 9.15ಕ್ಕೆ ಕಡಬದಿಂದ ಪುತ್ತೂರಿಗೆ, 10.30ಕ್ಕೆ ಪುತ್ತೂರಿನಿಂದ ಕಡಬಕ್ಕೆ, 3.15ಕ್ಕೆ ಕಡಬದಿಂದ ಪುತ್ತೂರಿಗೆ, 4.30ಕ್ಕೆ ಪುತ್ತೂರಿನಿಂದ ಕಡಬಕ್ಕೆ, 5.45ಕ್ಕೆ ಕಡಬದಿಂದ ಪುತ್ತೂರಿಗೆ ಪ್ರಯಾಣ ಬೆಳೆಸಿ ದಿನದ ಸಂಚಾರವನ್ನು ಕೊನೆಗೊಳಿಸಲಿದೆ. ಬಸ್‌ಸಂಚಾರವನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಇತರ ರೂಟ್‌ಗಳ ಬಸ್ ಸಂಚಾರದ ವೇಳಾ ಪಟ್ಟಿಯನ್ನು ಹೊಂದಾಣಿಕೆ ಮಾಡಿ ಸಂಚಾರದ ವೇಳಾಪಟ್ಟಿ ಬದಲಾಗುವ ಸಾಧ್ಯತೆಗಳಿವೆ ಎಂದು ಕಡಬ ಸಂಚಾರಿ ನಿಯಂತ್ರಕರು ತಿಳಿಸಿದ್ದಾರೆ.
ಬಸ್‌ಗೆ ಸ್ವಾಗತ
ನೂತನ ಬಸ್ ಕಡಬದಿಂದ ಸಂಚಾರ ಆರಂಭಿಸಿದೆ ಎಂದು ತಿಳಿಯುತ್ತಿದ್ದಂತೆ ಆಲಂಕಾರಿನ ಜನತೆ ಸಂಭ್ರಮದಿಂದ ಸ್ವಾಗತಿಸಲು ಕಾತರದಿಂದ ಕಾಯುತ್ತಿದ್ದರು. ಬಸ್ ಆಲಂಕಾರು ಶರವೂರು ದುರ್ಗಾಪರಮೇಶ್ವರೀ ದೇವಾಲಯದ ಸ್ವಾಗತ ಗೋಪುರ ಪ್ರವೇಶಿಸುತ್ತಿದ್ದಂತೆ, ಹೂಹಾರ ಹಾಕಿ ಸ್ವಾಗತಿಸಲಾಯಿತು. ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಹೂಗುತ್ಛ ನೀಡಿ ಗ್ರಾಮಸ್ಥರು ಬರಮಾಡಿಕೊಂಡರು. ಬಳಿಕ ರಸ್ತೆಗೆ ತೆಂಗಿನಕಾಯಿ ಒಡೆಯುವುದರ ಮೂಲಕ ಧಾರ್ಮಿಕವಾಗಿ ಸ್ವಾಗತಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.