ಸಿನೆಮಾ ದೇಖಾವೆ ನಿಲ್ಲಿಸಿದ “ನ್ಯೂಚಿತ್ರಾ’!
Team Udayavani, Sep 18, 2017, 7:55 AM IST
ಮಂಗಳೂರು: ವಿವಿಧ ಭಾಷೆಯ ಚಲನಚಿತ್ರ ಪ್ರದರ್ಶನದ ಮೂಲಕ ಕರಾವಳಿ ವ್ಯಾಪ್ತಿಯಲ್ಲಿ ಜನಪ್ರಿಯತೆ ಹೊಂದಿದ್ದ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಥಿಯೇಟರ್ ಎಂಬ ಹೆಗ್ಗಳಿಕೆಯ ಮಂಗಳೂರಿನ ಪ್ರತಿಷ್ಠಿತ “ನ್ಯೂಚಿತ್ರಾ’ ಥಿಯೇಟರ್‌ನಲ್ಲಿ ಕಳೆದೊಂದು ತಿಂಗಳಿಂದ ಸಿನೆಮಾ ಪ್ರದರ್ಶನ ನಡೆದಿಲ್ಲ!
ಈ ಥಿಯೇಟರ್‌ನಿಂದಾಗಿ ಕಾರ್‌ಸ್ಟ್ರೀಟ್ ಹಾಗೂ ಕುದ್ರೋಳಿಯ ಮಧ್ಯದ ಸ್ಥಳದ ಹೆಸರೇ ನ್ಯೂಚಿತ್ರಾ ಎಂದಾಗಿತ್ತು. ಇನ್ನು, ತಿಂಗಳ ಹಿಂದೆಯಷ್ಟೇ ಮಂಗಳೂರಿನ ಹೆಸರಾಂತ ಇನ್ನೊಂದು ಚಿತ್ರಮಂದಿರ ಪ್ಲಾಟಿನಂ ಕೂಡ ಇತಿಹಾಸ ಪುಟಕ್ಕೆ ಸೇರಿತ್ತು.
1926ರಲ್ಲಿ ಹುಟ್ಟಿದ ಥಿಯೇಟರ್
ಬ್ರಹ್ಮಾವರದ ಕೊಚ್ಚಿಕಾರ್ ವಿಠಲದಾಸ್ ಪೈ ಅವರು ಮಂಗಳೂರಿನಲ್ಲಿ ಪಾಲುದಾರರೊಬ್ಬರೊಂದಿಗೆ 1926ರಲ್ಲಿ “ಹಿಂದೂಸ್ಥಾನ್ ಸಿನೆಮಾ’ ಎಂಬ ಚಿತ್ರಮಂದಿರವನ್ನು ಪ್ರಥಮವಾಗಿ ಜಿಲ್ಲೆಯಲ್ಲಿ ಶುರುಮಾಡಿದ್ದರು. ಆಗಿನ ಕಾಲಕ್ಕೆ ಇದು ಸಾಕಷ್ಟು ಹೆಸರು ಮಾಡಿತ್ತು.
ಥಿಯೇಟರ್‌ನಲ್ಲಿಯೇ ಹಿನ್ನೆಲೆ ಸ್ವರ..!
ಪ್ರಾರಂಭದಲ್ಲಿ ಮೂಕಿ ಚಿತ್ರಗಳ ಪ್ರದರ್ಶನ ಇಲ್ಲಿದ್ದು, ಇದಕ್ಕೆ ಪ್ರದರ್ಶನದ ವೇಳೆ ಪ್ರೇಕ್ಷಕರ ಜತೆಯಲ್ಲೇ ಇಬ್ಬರು-ಮೂವರು ಕುಳಿತು ಹಿನ್ನೆಲೆ ಧ್ವನಿಯನ್ನು ನೀಡುತ್ತಿದ್ದರು. ಟಾಕಿ ಚಿತ್ರಗಳು ಬಂದ ನಂತರ ಥಿಯೇಟರನ್ನು ಕೆ.ವಿಠಲದಾಸ್ ಪೈ ಅವರು ತನ್ನ ಸ್ವಾಧೀನಕ್ಕೆ ಪಡೆದಿದ್ದು, 1936ರಲ್ಲಿ ಶ್ರೀಚಿತ್ರಾ ಟಾಕೀಸ್ ಹೆಸರಲ್ಲಿ ಪುನಃಸ್ಥಾಪಿಸಿದ್ದರು. ಪ್ರಥಮ ಬಾರಿಗೆ ಇದರಲ್ಲಿ ಹಿಂದಿ ಚಿತ್ರ “ಮುಕ್ತಿ’ ಪ್ರದರ್ಶನಗೊಂಡಿತ್ತು. ಬಳಿಕ ಹೆಚ್ಚಾಗಿ ಇಂಗ್ಲಿಷ್ ಚಿತ್ರಗಳೇ ಇಲ್ಲಿ ಪ್ರದರ್ಶಿತವಾಗುತ್ತಿತ್ತು. ತಮಿಳು, ಹಿಂದಿ ಚಿತ್ರಗಳೂ ಪ್ರದರ್ಶನಗೊಂಡಿವೆ.
“ಟೈಟಾನಿಕ್’ ದಾಖಲೆ..
1973ರಲ್ಲಿ ಚಿತ್ರ ಮಂದಿರ ನವೀಕರಣಗೊಳಿಸಿ ನ್ಯೂಚಿತ್ರಾ ಹೆಸರಲ್ಲಿ ವಿಠಲದಾಸ್ ಪೈ ಅವರ ಮಕ್ಕಳು ಉದ್ದಿಮೆ ಮುಂದುವರಿಸಿದ್ದರು.
“ಟೈಟಾನಿಕ್’ ಹಾಗೂ “ಎಂಟರ್ ದಿ ಡ್ರ್ಯಾಗನ್’ ಎಂಬ ಇಂಗ್ಲಿಷ್ ಚಿತ್ರವನ್ನು ಇಲ್ಲಿ ಅತಿ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ್ದಾರೆ. “ರಾಮ್ ತೇರಿ ಗಂಗಾ ಮೈಲಿ’ ಹಿಂದಿ ಚಿತ್ರದಂತೆ ಕನ್ನಡ ತಮಿಳು, ತೆಲುಗು ಭಾಷೆಯ ಹೆಸರುವಾಸಿ ಚಿತ್ರಗಳನ್ನು ಜನ ಇಲ್ಲಿ ನೋಡಿದ್ದಾರೆ.
“ಸಂತ ಜ್ಞಾನೇಶ್ವರ’ ಎಂಬ ಹಿಂದಿ ಚಿತ್ರವು ಇಲ್ಲಿ ಬಹಳ ಸಮಯ ಪ್ರದರ್ಶನಗೊಂಡಿತ್ತು.
ಸುಮಾರು 572 ಆಸನಗಳಿರುವ ಈ ಚಿತ್ರಮಂದಿರದ ಆಡಳಿತವನ್ನು ಕೆ.ವಿಠಲದಾಸ್ ಪೈ ಅವರ ಮೂರನೇ ತಲೆಮಾರಿನವರಾದ ಕೆ.ದೇವದಾಸ್ ಪೈ ಹಾಗೂ ಶಂಕರ್ ಪೈ ಸಹೋದರರು ಪ್ರಸ್ತುತ ನಡೆಸುತ್ತಿದ್ದಾರೆ.
ಮದುವೆಯೂ ಆಗಿತ್ತು ಥಿಯೇಟರ್‌ನಲ್ಲಿ..!
ಮಂಗಳೂರಿನಲ್ಲಿ ಸೂಕ್ತ ಸಭಾಂಗಣ ಇಲ್ಲದಿರುವ ಆಗಿನ ಕಾಲದಲ್ಲಿ ನ್ಯೂಚಿತ್ರಾ ಥಿಯೇಟರ್ ಮದುವೆಗೂ ವೇದಿಕೆ ಒದಗಿಸಿತ್ತು. ಭೀಮ್‌ಸೇನ್ ಜೋಶಿಯವರ ಸಂಗೀತ ಕಾರ್ಯಕ್ರಮ, ಡಾ| ರಾಜ್‌ಕುಮಾರ್ ಅಭಿನಯದ ನಾಟಕ ಪ್ರದರ್ಶನಗಳೂ ನಡೆದಿದ್ದವು.
ಕಳೆದೊಂದು ತಿಂಗಳಿಂದ ಸಿನೆಮಾ ಪ್ರದರ್ಶನ ನಿಲ್ಲಿಸಲಾಗಿದೆ. ಮಾರುಕಟ್ಟೆ ಕುಸಿತ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮುಂದಿನ ತೀರ್ಮಾನ ಶೀಘ್ರ ಕೈಗೊಳ್ಳಲಿದ್ದೇವೆ.
ಶಂಕರ್ ಪೈ, ಆಡಳಿತ ಪಾಲುದಾರರು -ನ್ಯೂ ಚಿತ್ರಾ ಟಾಕೀಸ್
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.